15ದಿನ ಹಿಂದೆ ವಿದೇಶದಿಂದ ಬಂದವರ ಮಾಹಿತಿ ಸಂಗ್ರಹ

ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಸರ್ಕಾರವು, ಈಗ ರಾಜಧಾನಿಗೆ 15 ದಿನ ಹಿಂದೆ ಬಂದಿರುವ ನಾಗರಿಕರ ಕುರಿತು ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.

Isha Pant Lead Task Force For Collect Information About Foreign return From 15 Days

ಬೆಂಗಳೂರು [ಮಾ.20]:  ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಸರ್ಕಾರವು, ಈಗ ರಾಜಧಾನಿಗೆ 15 ದಿನ ಹಿಂದೆ ಬಂದಿರುವ ನಾಗರಿಕರ ಕುರಿತು ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.

ಈ ಮಾಹಿತಿ ಸಂಗ್ರಹ ಅಭಿಯಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಬಿಬಿಎಂಪಿ ಹಾಗೂ ಪೊಲೀಸ್‌ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ ಪೋರ್ಸ್‌ ರಚಿಸಲಾಗಿದ್ದು, ಈ ಸಮಿತಿಗೆ ಡಿಸಿಪಿ ಇಶಾ ಪಂತ್‌ ಅವರು ನೋಡೆಲ್‌ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಬೆಂಗಳೂರಿಗೆ ಹದಿನೈದು ದಿನಗಳ ಅವಧಿಯಲ್ಲಿ ವಿದೇಶ ಪ್ರವಾಸದಿಂದ ಮರಳಿರುವ ಜನರ ಕುರಿತು ವಿವರ ಕಲೆ ಹಾಕಲಾಗುತ್ತಿದೆ. ಈಗಾಗಲೇ ಕೆಲವರ ಮಾಹಿತಿ ಸಿಕ್ಕಿದ್ದು, ಅವರನ್ನು ಸಂಪರ್ಕಿಸಿ ವೈದ್ಯಕೀಯ ತಪಾಸಣೆಗೆ ಒಳಪಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಬದಲಿಸಲಾಗದ ಮನುಷ್ಯನ ಗುಣವನ್ನೇ ಬದಲಾಯಿಸಿದ ಕೊರೋನಾ...

ಪ್ರವಾಸ, ಶೈಕ್ಷಣಿಕ ಹಾಗೂ ಉದ್ಯಮದ ಕೆಲಸ ನಿಮಿತ್ತ ವಿದೇಶಕ್ಕೆ ವಿದ್ಯಾರ್ಥಿಗಳು, ಉದ್ಯಮಿಗಳು, ವ್ಯಾಪಾರಿಗಳು, ಸಾಫ್ಟ್‌ವೇರ್‌ ಉದ್ಯೋಗಿಗಳು ಸೇರಿದಂತೆ ಹಲವು ಜನರು ತೆರಳಿದ್ದರು.

ಕೆಲವರು ವಿದೇಶದಲ್ಲಿರುವ ಮಕ್ಕಳ ಭೇಟಿಗೂ ಹೋಗಿ ಬಂದವರು ಇದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ಪತ್ತೆ ಹಚ್ಚಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios