Asianet Suvarna News Asianet Suvarna News

Omicron Threat: ಮುಳುವಾಯ್ತಾ ಸಾಂಸ್ಥಿಕ ಕ್ವಾರಂಟೈನ್‌ ವಿನಾಯ್ತಿ?: ಮತ್ತೆ ಕೊರೋನಾ ಸ್ಫೋಟ ಸಾಧ್ಯತೆ

*  ಹೈರಿಸ್ಕ್‌ ದೇಶಗಳಿಂದ ಬಂದವರಿಗೆ ಹೋಂ ಕ್ವಾರಂಟೈನ್‌ಗೆ ಅವಕಾಶ
*  ಊರುಗಳಿಗೆ ತೆರಳಿದವರಿಗೆ 7 ದಿನ ಬಳಿಕ ಸೋಂಕು ದೃಢ
*  ಸೋಂಕಿತರ ಸಂಪರ್ಕದಲ್ಲಿ ಇರುವವರ ಪತ್ತೆ ದೊಡ್ಡ ಸವಾಲು
 

Is Is Mistake Institutional Quarantine Exemption to Who Came From Foreign to Bengaluru grg
Author
Bengaluru, First Published Dec 13, 2021, 6:18 AM IST

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಡಿ.13):  ಕೊರೋನಾ(Coronavirus) ಸೋಂಕು ಹೆಚ್ಚಿರುವ ದೇಶಗಳಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್‌ನಿಂದ(Institutional Quarantine) ವಿನಾಯ್ತಿ ನೀಡಿರುವುದೇ ತಪ್ಪಾಯಿತೇ ಎಂಬ ಪ್ರಶ್ನೆ ತಜ್ಞರನ್ನು ಕಾಡುತ್ತಿದೆ!

ರಾಜ್ಯದಲ್ಲಿ(Karnataka) ರೂಪಾಂತರಿ ಒಮಿಕ್ರೋನ್‌(Omicron) ಸೋಂಕು ದೃಢಪಟ್ಟನಂತರದಿಂದ (ಡಿ.1ರಿಂದಿಚೇಗೆ) ಹೈರಿಸ್ಕ್‌ ದೇಶಗಳಿಂದ ರಾಜ್ಯಕ್ಕೆ ಆಗಮಿಸಿದ ಪ್ರಯಾಣಿಕರ(Passengers) ಸಂಖ್ಯೆ ಆರು ಸಾವಿರಕ್ಕೂ ಅಧಿಕವಿದೆ. ಈ ಪೈಕಿ ಸೋಂಕು ದೃಢಪಟ್ಟಏಳು ಮಂದಿ ಹೊರತು ಪಡಿಸಿ ಮಿಕ್ಕವರೆಲ್ಲಾ ರಾಜ್ಯದ ವಿವಿಧೆಡೆ ಹಂಚಿಹೋಗಿದ್ದು, ತಮ್ಮ ಊರುಗಳಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಈ ಮಧ್ಯೆ ಒಮಿಕ್ರೋನ್‌ ಹಾವಳಿ ಹೆಚ್ಚಿರುವ ಹೈರಿಸ್ಕ್‌ ದೇಶಗಳಿಂದ ಬಂದು ಹೋಂ ಕ್ವಾರಂಟೈನಲ್ಲಿರುವ ಪ್ರಯಾಣಿಕರಿಗೆ ಸೋಂಕು ದೃಢಪಡುತ್ತಿದೆ. ಅಷ್ಟೇ ಅಲ್ಲದೇ ಒಬ್ಬರಲ್ಲಿ ರೂಪಾಂತರಿ ಪತ್ತೆಯಾಗಿರುವುದು ತಜ್ಞರ ಆಂತಕಕ್ಕೆ ಕಾರಣವಾಗಿದೆ.

ಕೊರೋನಾ ಮೊದಲ ಮತ್ತು ಎರಡನೇ ಅಲೆಗಳಲ್ಲಿ ವಿಮಾನ ನಿಲ್ದಾಣಗಳೇ ಸೋಂಕಿನ ಹೆಬ್ಬಾಗಿಲು ಎಂದು ಅರಿತಿದ್ದ ರಾಜ್ಯ ಸರ್ಕಾರವು(Government of Karnataka) ವಿದೇಶದಿಂದ(Foreign) ಬಂದ ಪ್ರಯಾಣಿಕರಿಗೆ ಏಳು ದಿನ ಸಾಂಸ್ಥಿಕ ಕ್ವಾರಂಟೈನ್‌ ವಿಧಿಸಿ ಆ ಬಳಿಕ ಮನೆಗಳಿಗೆ ಕಳುಹಿಸುತ್ತಿತ್ತು. ಆದರೆ, ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ನೆಗೆಟಿವ್‌ ಬಂದರೆ ಹೋಂ ಕ್ವಾರಂಟೈನ್‌ ಕಳುಹಿಸಲಾಗುತ್ತಿದೆ. ಇದರಿಂದ ಪ್ರಯಾಣ ಸಂದರ್ಭದಲ್ಲಿ ಸೋಂಕು ತಗುಲಿದ್ದರೆ ಅಥವಾ ಸೊಂಕು ಪ್ರಾರಂಭಿಕ ಹಂತದಲ್ಲಿದ್ದವರಿಗೆ 4-5 ದಿನ ಬಳಿಕ ಹೋಂ ಕ್ವಾರಂಟೈನ್‌ ಸಂದರ್ಭದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಈ ಪ್ರಕರಣಗಳೇ ಸೋಂಕು ಸ್ಥಳೀಯವಾಗಿ ವ್ಯಾಪಿಸುವ ಸಾಧ್ಯತೆಗಳಿವೆ.

Corona Update: ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಪತ್ತೆ, ಕೊರೋನಾ ಅಂಕಿ-ಸಂಖ್ಯೆ ಇಲ್ಲಿದೆ

6,250 ಮಂದಿ ಆಗಮನ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡಿ.1ರಿಂದ 12ವರೆಗೂ 18 ಸಾವಿರಕ್ಕೂ ಅಧಿಕ ಪ್ರಯಾಣಿಕರು ಆಗಮಿಸಿದ್ದಾರೆ. ಈ ಪೈಕಿ ಅಮೆರಿಕ, ಯೂರೋಪ್‌ ಹಾಗೂ ಆಫ್ರಿಕಾ ಭಾಗದ 17ಕ್ಕೂ ಅಧಿಕ ಹೈರಿಸ್ಕ್‌ ದೇಶಗಳಿಂದ 6,245 ಪ್ರಯಾಣಿಕರು ಆಗಮಿಸಿದ್ದಾರೆ. ಇವರಲ್ಲಿ ಕೇವಲ ಏಳು ಮಂದಿಗೆ ಸೋಂಕು ದೃಢಪಟ್ಟಹಿನ್ನೆಲೆ ಆಸ್ಪತ್ರೆ ದಾಖಲಿಸಿದ್ದು, ಮಿಕ್ಕವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಆ ರೀತಿ ಮನೆಗೆ ತೆರಳಿರುವ ಪ್ರಯಾಣಿಕರಿಗೆ ಏಳನೇ ದಿನ ಸೋಂಕು ಪರೀಕ್ಷೆ(Covid Test) ಮಾಡಿಸುತ್ತಿದ್ದು, ಕೆಲವರಲ್ಲಿ ಸೋಂಕು ದೃಢಪಡುತ್ತಿದೆ.

ಕ್ವಾರಂಟೈನ್‌ ನಿಯಮ ಪಾಲನೆಗೆ ನಿರ್ಲಕ್ಷ್ಯ

ಹೋಂ ಕ್ವಾರಂಟೈನ್‌ ನಿಯಮ ಮೀರಿ ಪ್ರವಾಸ ಅಥವಾ ಬೇರೆ ಊರುಗಳಿಗೆ ತೆರಳುತ್ತಿರುವುದು ಗಮನಕ್ಕೆ ಬಂದಿದೆ. ವಾರದ ಬಳಿಕ ಕಡ್ಡಾಯವಾಗಿ ನಡೆಸುವ ಸೋಂಕು ಪರೀಕ್ಷೆಗೂ ಹಿಂದೇಟು ಹಾಕುತ್ತಿದ್ದಾರೆ. ‘ಒಂದು ವೇಳೆ ಸೋಂಕು ದೃಢಪಟ್ಟರೆ ಸಂಪರ್ಕಿತರ ಸಂಖ್ಯೆ ಹೆಚ್ಚಿರುತ್ತದೆ. ಪತ್ತೆ ಮತ್ತು ಅವರ ಪರೀಕ್ಷೆ ಹೆಚ್ಚು ಸಮಯ ಹಿಡಿಯುತ್ತಿದೆ. ಹಲವರು ಹೋಂ ಕ್ವಾರಂಟೈನ್‌ ಸರಿಯಾಗಿ ಪಾಲಿಸುತ್ತಿಲ್ಲ’ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

Covid Vaccination : 8 ಕೋಟಿ ದಾಟಿದ ಕೊರೋನಾ ಲಸಿಕೆ ವಿತರಣೆ

ಸಾಂಸ್ಥಿಕ ಕ್ವಾರಂಟೈನ್‌ಗೆ ನಗರದಲ್ಲಿ ಇದೆ ವ್ಯವಸ್ಥೆ

ಕೊರೋನಾ ಸೋಂಕು ಲಘು ಲಕ್ಷಣಗಳನ್ನು ಹೊಂದಿರುವವರಿಗೆ ಚಿಕಿತ್ಸೆ(Treatment) ನೀಡಲೆಂದು ನಗರದ ವೈದ್ಯಕೀಯ ಕಾಲೇಜು, ಸಭಾಂಗಣಗಳು, ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ, ಹಜ್‌ ಭವನ ಸೇರಿದಂತೆ ಹಲವು ಕಡೆ 10 ಸಾವಿರಕ್ಕೂ ಅಧಿಕ ಮಂದಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ವ್ಯವಸ್ಥೆ ಇದೆ. ಅಲ್ಲದೇ, ಮೊದಲ ಮತ್ತು ಎರಡನೇ ಅಲೆ ವೇಳೆ ಅವಕಾಶ ನೀಡಿದಂತೆ ಸ್ವಂತ ಖರ್ಚಿನಲ್ಲಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರಲು ಅವಕಾಶ ನೀಡಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿವೆ.

ಸಿಂಗಸಂದ್ರದಲ್ಲಿ ದುಬೈನಿಂದ ಬಂದು ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಗೆ ಒಂದು ವಾರದ ಬಳಿಕ ಸೋಂಕು ದೃಢಪಟ್ಟಿದೆ. ಐಸೋಲೇಷನ್‌ ಮಾಡಿ, ಗಂಟಲು ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ. ಆತನ ಸಂಪರ್ಕದಲ್ಲಿದ್ದರ ಪತ್ತೆ ಮಾಡಿ ಪರೀಕ್ಷೆ ಮಾಡಲಾಗುತ್ತಿದೆ ಅಂತ ಬೆಂಗಳೂರು ನಗರ ಜಿಲ್ಲೆ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ ಗೂಳೂರು ತಿಳಿಸಿದ್ದಾರೆ.  
 

Follow Us:
Download App:
  • android
  • ios