ಹಾವೇರಿ(ಅ.7): ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲಕರ ತರಬೇತಿ ಶಾಲೆ ವತಿಯಿಂದ 2019-20ನೇ ಸಾಲಿನ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕ್ರಿಯಾ ಯೋಜನೆಯಡಿ ಮೀಸಲಾತಿ ವಿಧಾನಸಭಾ ಕ್ಷೇತ್ರಗಳಾದ ಹುಬ್ಬಳ್ಳಿ ಪೂರ್ವ, ಶಿರಹಟ್ಟಿ, ಸವಣೂರು, ಹಾವೇರಿ, ರಾಯಬಾಗ, ಮುಧೋಳ, ಯಮಕನಮರಡಿ ಕ್ಷೇತ್ರಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ 134 ಫಲಾನುಭವಿಗಳಿಗೆ ಭಾರಿ ವಾಹನ ಚಾಲನಾ ತರಬೇತಿ ಮತ್ತು 135 ಫಲಾನುಭವಿಗಳಿಗೆ ಉಚಿತ ಲಘು ವಾಹನ ಚಾಲನಾ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವ ದಿನಾಂಕಕ್ಕೆ 21 ವರ್ಷ ಗರಿಷ್ಠ 40 ವರ್ಷ ಮೀರಿರಬಾರದು. ಎಸ್ಸೆಸ್ಸೆಲ್ಸಿ ಉತ್ತೀರ್ಣದ ಅಂಕಪಟ್ಟಿಯ ಎರಡು ಕಲರ್‌ ಝರಾಕ್ಸ್‌ ಪ್ರತಿ, ಲಘು ವಾಹನಾ ಚಾಲನಾ ಪರವಾನಗಿಯನ್ನು ಪಡೆದು ಕನಿಷ್ಠ ಒಂದು ವರ್ಷ ಪೂರೈಸಿರಬೇಕು. ಈ ಪರವಾನಗಿಯ ಎರಡು ಕಲರ್‌ ನಕಲು ಪ್ರತಿ, 8 ಪಾಸ್‌ ಪೋರ್ಟ್‌ ಅಳತೆಯ ಫೋಟೋಗಳು ಹಾಗೂ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಒಂದು ನಕಲು ಪ್ರತಿ, ಆಧಾರ ಕಾರ್ಡ್‌ ಹಾಗೂ ಎರಡು ಕಲರ್‌ ನಕಲು ಪ್ರತಿ ಸಲ್ಲಿಸಬೇಕು.

ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವ ದಿನಕ್ಕೆ 18 ವರ್ಷ ಗರಿಷ್ಠ 40 ವರ್ಷ ಮೀರಿರಬಾರದು. ಎಸ್ಸೆಸ್ಸೆಲ್ಸಿ ಉತ್ತೀರ್ಣ/ಅನುತ್ತೀರ್ಣ ಹೊಂದಿರುವ ಅಂಕಪಟ್ಟಿಯ ಎರಡು ಕಲರ್‌ ಝರಾಕ್ಸ್‌ ಪ್ರತಿ, ಎಂಟು ಪಾಸ್‌ ಪೋರ್ಟ್‌ ಅಳತೆಯ ಫೋಟೋಗಳು, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಒಂದು ನಕಲು ಪ್ರತಿ, ಆಧಾರ ಕಾರ್ಡ್‌ ಹಾಗೂ ಎರಡು ಕಲರ್‌ ನಕಲು ಪ್ರತಿ ಸಲ್ಲಿಸಬೇಕು.

ನಿರುದ್ಯೋಗಿಗಳಿಗೊಂದು ಶುಭ ಸುದ್ದಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯೊಂದಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ಪ್ರಾಂಶುಪಾಲರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಪ್ರಾದೇಶಿಕ ತರಬೇತಿ ಕೇಂದ್ರ, ಗೋಕುಲ ರಸ್ತೆ, ಹುಬ್ಬಳ್ಳಿ ಇಲ್ಲಿಗೆ ತಮ್ಮ ಅರ್ಜಿಯನ್ನು ದಾಖಲೆಗಳ ಜೆರಾಕ್ಸ್‌ ಪ್ರತಿ ಸಹಿತ ಕೂಡಲೇ ಸಲ್ಲಿಸಬಹುದಾಗಿದೆ. 

ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ:0836-2332128ನ್ನು ಸಂಪರ್ಕಿಸಬಹುದೆಂದು ಹುಬ್ಬಳ್ಳಿ ವಾಕರಸಾ ಸಂಸ್ಥೆ ಕೇಂದ್ರ ಕಚೇರಿ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.