ಆಂತರಿಕ ಸರ್ವೆಯಿಂದ BJP ಫುಲ್ ಖುಷ್, ವಿಶ್ವನಾಥ್‌ಗೆಷ್ಟು ಮತ..?
ಉಪಚುನಾವಣೆ ಸಮೀಪಿಸಿದ್ದು, ಮೈಸೂರಿನಲ್ಲಿ ಆಂತರಿಕ ಸರ್ವೆ ನೀಡಿರುವ ವರದಿ ಬಿಜೆಪಿಯನ್ನು ಫುಲ್ ಖುಷ್ ಮಾಡಿದೆ. ಆಂತರಿಕ ಸರ್ವೆ ವರದಿ ಶ್ರೀರಾಮುಲು ಕೈ ಸೇರಿದ್ದು, ವಿಶ್ವನಾಥ್ ಪಡೆಯಲಿರುವ ಮತಗಳ ಬಗ್ಗೆಯೂ ನಮೂದಿಸಲಾಗಿದೆ. ಯಾರಿಗೆ, ಎಷ್ಟು..?
ಮೈಸೂರು(ನ.30): ಉಪಚುನಾವಣೆ ಸಮೀಪಿಸಿದ್ದು, ಮೈಸೂರಿನಲ್ಲಿ ಆಂತರಿಕ ಸರ್ವೆ ನೀಡಿರುವ ವರದಿ ಬಿಜೆಪಿಯನ್ನು ಫುಲ್ ಖುಷ್ ಮಾಡಿದೆ. ಆಂತರಿಕ ಸರ್ವೆ ವರದಿ ಶ್ರೀರಾಮುಲು ಕೈ ಸೇರಿದ್ದು, ವಿಶ್ವನಾಥ್ ಪಡೆಯಲಿರುವ ಮತಗಳ ಬಗ್ಗೆಯೂ ನಮೂದಿಸಲಾಗಿದೆ.
ಹುಣಸೂರು ಉಪಚುನಾವಣಾ ಕಣ ರಂಗೇರಿದ್ದು, ಆಂತರಿಕ ಸರ್ವೆ ಬಿಜೆಪಿಗೆ ಖುಷಿ ತಂದಿದೆ. ಸರ್ವೇ ವರದಿ ಸಚಿವ ಶ್ರೀರಾಮುಲು ಕೈ ಸೇರಿದ್ದು, ಸರ್ವೆ ಪ್ರಕಾರ ವಿಶ್ವನಾಥ್ 95 ಸಾವಿರ ಮತಗಳನ್ನು ಪಡೆಯಲಿದ್ದಾರೆ.
ಸಂಜೆ ವಿಶ್ವನಾಥ್ ದಾಖಲೆ ಬಿಡುಗಡೆ ಮಾಡ್ತೇನೆ: ಬಾಂಬ್ ಸಿಡಿಸಿದ ಸಾರಾ..!
ಈ ಬಾರಿಯೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ 83 ಸಾವಿರ ಮತಕ್ಕೆ ತೃಪ್ತಿಪಟ್ಟುಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಸರ್ವೆ ನೀಡಿದೆ. ಬಿಜೆಪಿ ಆಂತರಿಕ ಸರ್ವೆಯಲ್ಲಿ ಜೆಡಿಎಸ್‌ಗೆ ಮೂರನೇ ಸ್ಥಾನ ಲಭಿಸಿದ್ದು, ಬಿಜೆಪಿ ಸರ್ವೆ ಪ್ರಕಾರ ಜೆಡಿಎಸ್‌ಗೆ ಕೇವಲ 22 ಸಾವಿರ ಮತಗಳು ದೊರೆಯಲಿವೆ.
ಆಂತರಿಕ ಸರ್ವೆ ಕುರುಬ ಮತಗಳು ವಿಶ್ವನಾಥ್ ಕೈ ಹಿಡಿಯುವ ಸೂಚನೆ ತೋರಿಸಿದ್ದು, ಕುರುಬ ಸಮುದಾಯದ ಮತಗಳು ಬಿಜೆಪಿಗೆ ಶೇಕಡ 75, ಕಾಂಗ್ರೆಸ್ ಶೇಕಡ 20 ಜೆಡಿಎಸ್‌ಗೆ ಜೆಡಿಎಸ್ 5 ರಂತೆ ಹಂಚಿಹೋಗಲಿದೆ. ಒಕ್ಕಲಿಗ ಮತಗಳು ಜೆಡಿಎಸ್ ಶೇಕಡ 50, ಕಾಂಗ್ರೆಸ್ ಗೆ ಶೇಕಡ 25 ಹಾಗೂ ಬಿಜೆಪಿಗೆ ಶೇಕಡ 25 ಸಿಗಲಿದೆ.
ಅಮೆರಿಕದಲ್ಲಿ ಶೂಟೌಟ್: ಮೈಸೂರು ವಿದ್ಯಾರ್ಥಿ ಬಲಿ
ಬ್ರಾಹ್ಮಣ ಮತಗಳು ನೂರಕ್ಕೆ ನೂರು ಬಿಜೆಪಿಗೆ ಬರಲಿದ್ದು, ಶೇಕಡ 80ರಷ್ಟು ಲಿಂಗಾಯತ ಮತಗಳುಬಿಜೆಪಿ ಕೈ ಹಿಡಿಯಲಿದೆ. ನಾಯಕ ಸಮುದಾಯದ ಶೇಕಡ 70 ಮತಗಳು ಬಿಜೆಪಿಗೆ ಲಭಿಸಲಿವೆ. ಶೇಕಡ 20 ಮತಗಳು ಕಾಂಗ್ರೆಸ್ ಹಾಗೂ ಶೇಕಡ 10 ಜೆಡಿಎಸ್ ಪಾಲಾಗಲಿದೆ. ಮೈಸೂರು ಮೂಲದ ಏಜೆನ್ಸಿ ಮೂಲಕ ಬಿಜೆಪಿ ಸರ್ವೆ ಮಾಡಿಸಿತ್ತು.
ಬೈಎಲೆಕ್ಷನ್: ನಕಲಿ ಅಬಕಾರಿ ಅಧಿಕಾರಿ ಬಂಧನ