ಪಕ್ಷದಿಂದಲೇ ನಾನು ಚುನಾವಣೆಯಲ್ಲಿ ಸೋತೆ : ಕಾಂಗ್ರೆಸ್ ಮುಖಂಡ
ಪಕ್ಷದ ಆಂತರಿಕ ಸಮಸ್ಯೆಯಿಂದ ನಾನು ಎರಡು ಬಾರಿ ಚುನಾವಣೆಯಲ್ಲಿ ಸೋತೆ ಎಂದು ಕಾಂಗ್ರೆಸ್ ಮುಖಂಡರೋರ್ವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸವಣೂರು (ಮಾ.08): ಪಕ್ಷದ ಆಂತರಿಕ ಸಮಸ್ಯೆಗಳಿಂದ ಎರಡು ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಎಂ. ಕುಬೇರಪ್ಪ, ಈ ಭಾರಿ ಎಲ್ಲರು ಸಂಘಟಿತವಾಗಿದ್ದು ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು, ಮುಖಂಡರು ಆಸಕ್ತಿ ವಹಿಸಿ ಈ ಬಾರಿ ಪದವೀಧರರ ಹೆಚ್ಚಿನ ನೋಂದಣಿ ಮಾಡಿಸಿದ್ದಾರೆ. ಹಾವೇರಿ, ಗದಗ, ಉತ್ತರಕನ್ನಡ, ಧಾರವಾಡ ಜಿಲ್ಲೆಗಳ ಪಕ್ಷದ ಕಾರ್ಯಕರ್ತ ರೊಂದಿಗೆ ಈ ಪ್ರಚಾರ ನಡೆಸಿದ್ದು ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದರು.
ಕಳೆದೆರಡು ಚುನಾವಣೆಯಲ್ಲಿ ಸರಿಯಾದ ತಯಾರಿ ನಡೆಸದ ಪರಿಣಾಮ ಸೋಲಬೇ ಕಾಯಿತು. ಆದರೆ, ಈ ಬಾರಿ ಪಕ್ಷವು ಮುಂಚಿತವಾಗಿ ಟಿಕೆಟ್ ಘೋಷಿಸಿದ್ದು ವರವಾಗಿದೆ. ಇದರೊಂದಿಗೆ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಸಂಘಟಿತರಾಗಿ ಪ್ರಚಾರ ಕೈಗೊಂಡಿದ್ದೇವೆ. ಈ ಬಾರಿ ಬದಲಾವಣೆ ಬಯಿಸಿದ್ದು ನನ್ನನ್ನು ಬೆಂಬಲಿಸಲು ಮುಂದಾಗಿದ್ದಾರೆ. ಹೀಗಾಗಿ ಈ ಬಾರಿ ನನ್ನ ಗೆಲುವು ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.
HDKಗೆ ಇನ್ನೆರಡು ಬಾರಿ ಸಿಎಂ, ಜಿಟಿಡಿ ಹೇಳಿಕೆ ಗೂಡಾರ್ಥ!..
ಹಾವೇರಿ ಯ ಜಿಲ್ಲೆಯ ರಾಣಿಬೆನ್ನೂರಿನ ನನಗೆ ತವರು ಜಿಲ್ಲೆಯಲ್ಲಿ ಅಪಾರ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಇತರೆ ಪಕ್ಷಗಳು ಅಭ್ಯರ್ಥಿ ಘೋಷಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಪ್ಪ ತಿಪ್ಪಕ್ಕನವರ, ಪುರಸಭೆ ಸದಸ್ಯ ಅಜೀಂ ಮಿರ್ಜಾ, ಎಚ್.ಎಚ್. ಮುಲ್ಲಾ, ಬಿ. ಮಹಾಂತೇಶ, ಎಸ್.ಎಚ್. ಹುಚ್ಚಗೊಂಡರ, ಸೋಮಂತ ಕಣವಿ, ವೀರಯ್ಯ ಕಲ್ಮಠ, ನವೀನ ಬಂಡಿವಡ್ಡರ ಇದ್ದರು