ಲಾಕ್‌ಡೌನ್: ಬಾಗಲಕೋಟೆಯಲ್ಲಿ ಸಿಲುಕಿಕೊಂಡ ಅಂತಾರಾಜ್ಯ ಕಾರ್ಮಿಕರು..!
ಬಾಗಲಕೋಟೆಯ ಹೊರವಲಯದ ಮಲ್ಲಯ್ಯನ ಗುಡಿ ಬಳಿ ಶೆಡ್ ಸಿಕ್ಕಿಹಾಕಿಕೊಂಡ ಕಾರ್ಮಿಕರು| ಓಡಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯದಿಂದ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕರು| ಇಲ್ಲಿಯವರೆಗೆ ಇತರರು ನೀಡಿದ ಆಹಾರವೇ ವರದಾನವಾಗಿದ್ದು, ಇದೀಗ ಅತಂತ್ರವಾದ ಕಾರ್ಮಿಕರು|
ಬಾಗಲಕೋಟೆ(ಮೇ.01): ನಮ್ಮ ರಾಜ್ಯಕ್ಕೆ ನಮ್ಮನ್ನು ಕಳಿಸಿಕೊಡಿ ಎಂದು ಅಂತಾರಾಜ್ಯ ವಲಸೆ ಕಾರ್ಮಿಕರು ಮನವಿ ಮಾಡಿಕೊಳ್ಳುತ್ತಿರುವ ಘಟನೆ ಇಂದು(ಶುಕ್ರವಾರ) ನಡೆದಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಓಡಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯದಿಂದ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕರು ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ನಗರದ ಹೊರವಲಯದ ಮಲ್ಲಯ್ಯನ ಗುಡಿ ಬಳಿ ಶೆಡ್‌ನಲ್ಲಿ ಸುಮಾರು 10 ಜನ ಕಾರ್ಮಿಕರು ಲಾಕ್‌ಡೌನ್ ಆದಾಗಿನಿಂದ ಕಾಲ ಕಳೆಯುತ್ತಿದ್ದಾರೆ. ಇವರೆಲ್ಲ ರೈಲ್ವೆ ಇಲಾಖೆಯ ಗುತ್ತಿಗೆ ಕೆಲಸಕ್ಕೆಂದು ಬಾಗಲಕೋಟೆಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಪುತ್ರನಿಗೆ ಮಹಾಮಾರಿ ಕೊರೋನಾ ಸೋಂಕು: ಹೃದಯಾಘಾತದಿಂದ ತಾಯಿ ಸಾವು
ದೇಶದಲ್ಲಿ ಏಕಾಏಕಿ ಲಾಕ್‌ಡೌನ್ ಆದ ಪರಿಣಾಮ ಇವರೊಂದಿಗೆ ಇದ್ದ ಕಾಂಟ್ರ್ಯಾಕ್ಟರ್, ಮ್ಯಾನೇಜರ್ ಎಲ್ಲರೂ ಕಾಲ್ಕಿತ್ತಿದ್ದಾರೆ. ಹೀಗಾಗಿ ಈ ಬಡ ಕೂಲಿ ಕಾರ್ಮಿಕರು ಅತಂತ್ರರಾಗಿದ್ದಾರೆ. ದಿನದ ಮೂರು ಹೊತ್ತು ಆಹಾರಕ್ಕಾಗಿ ಕಷ್ಟ ಪಡುತ್ತಿದ್ದಾರೆ.