ನಾಗರಹೊಳೆಯಲ್ಲಿ ಪ್ರವಾಸಿಗರಿಗೆ ವಿಮಾ ಸೌಲಭ್ಯ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರ ಹಿತದೃಷ್ಟಿಯಿಂದ ಇದೇ ಮೊದಲ ಬಾರಿಗೆ ವಿಮೆ ಜಾರಿಗೊಳಿಸಲಾಗಿದೆ ಎಂದು ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್ ಚಿಕ್ಕನರಗುಂದ ಹೇಳಿದ್ದಾರೆ.

Insurance facility for tourists in rural Nagarhole snr

  ಹುಣಸೂರು :  ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರ ಹಿತದೃಷ್ಟಿಯಿಂದ ಇದೇ ಮೊದಲ ಬಾರಿಗೆ ವಿಮೆ ಜಾರಿಗೊಳಿಸಲಾಗಿದೆ ಎಂದು ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್ ಚಿಕ್ಕನರಗುಂದ ಹೇಳಿದ್ದಾರೆ.

ಶ್ರೀಮಂತ ಜೀವ ವೈವಿದ್ಯತೆಯನ್ನು ಹೊಂದಿರುವ ನಾಗರಹೊಳೆ ಉದ್ಯಾನವನದಲ್ಲಿ ಈ ಹಿಂದಿನಿಂದಲೂ ವನ್ಯಜೀವಿ ಪ್ರವಾಸೋದ್ಯಮವನ್ನು ಕಿಯಾಶೀಲ ಚಟುವಟಿಕೆಗಳೊಂದಿಗೆ ಅನುಷ್ಠಾನಗೊಳಿಸುತ್ತ ಖ್ಯಾತಿ ಗಳಿಸಿದೆ. ಪ್ರವಾಸಿಗರ ಮೆಚ್ಚಿನ ತಾಣವಾಗಿರುವ ನಾಗರಹೊಳೆ ಉದ್ಯಾನವನಕ್ಕೆ ಪ್ರತಿವರ್ಷ ಸುಮಾರು 1.25 ಲಕ್ಷಗಳಿಂದ 1.50 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ.

ಹುಲಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ಬಂಡೀಪುರ ನಂಬರ್ ಒನ್, ನಾಗರಹೊಳೆ ಸೆಕೆಂಡ್

ಉದ್ಯಾನವನದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಸಫಾರಿ ಆಯೋಜಿಸಲಾಗುತ್ತದೆ. ಇದೀಗ ಪ್ರವಾಸಿಗರ ಹಿತರಕ್ಷಣೆಯಿಂದ ಸಫಾರಿ ವೇಳೆ ಆಗಬಹುದಾದ ಅನಾಹುತಗಳನ್ನು ಸರಿ ದೂಗಿಸಲು ಇಲಾಖೆಯು ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ ಕಂಪನಿಯ (ವಿಮೆ ಸಂಖ್ಯೆ 0706022723107894900) ಸಹಯೋಗದಲ್ಲಿ ಉದ್ಯಾನವನಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರಿಗೂ ತಲಾ 5 ಲಕ್ಷ ರು. ಗಳ ವಿಮಾ ಸೌಲಭ್ಯ ಕಲ್ಪಿಸಲುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಇಲಾಖೆಯು ಒಂದು ಕೋಟಿ ರು. ಗಳನ್ನು ಮೀಸಲಿಟ್ಟಿದೆ ಎಂದು ಅವರು ತಿಳಿಸಿದ್ದಾರೆ.

 ನಾಗರಹೊಳೆಯಲ್ಲಿ ವನ್ಯಜೀವಿ ಸಪ್ತಾಹ

69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಾಗರಹೊಳೆ ವಲಯ ಕೇಂದ್ರದಲ್ಲಿ ಅ. 8ರಂದು ವನ್ಯಜೀವಿ ಸಂರಕ್ಷಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ನಿವಾರಣೆಯಲ್ಲಿ ಪತ್ರಿಕಾ ಮತ್ತು ಮಾಧ್ಯಮದ ಪಾತ್ರದ ಕುರಿತು ಕಾರ್ಯಾಗಾರ ಆಯೋಜಿಸಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಹೇಳಿದ್ದಾರೆ.

ನಾಗರಹೊಳೆ: ಕಾಡಂಚಿನ ಜಮೀನಿನಲ್ಲಿ ಹುಲಿಹೆಜ್ಜೆ ಪತ್ತೆ; ಗ್ರಾಮಸ್ಥರಲ್ಲಿ ಆತಂಕ!

ಬೆಳಗ್ಗೆ 11ಕ್ಕೆ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಉದ್ಘಾಟಿಸಲಿದ್ದು, ಮುಖ್ಯಅತಿಥಿಯಾಗಿ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ಕುಮಾರ್ ತ್ರಿಪಾಠಿ ಭಾಗವಹಿಸಲಿದ್ದಾರೆ. ಮೈಸೂರು ಜಿಲ್ಲಾಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ಜಿಲ್ಲಾ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ ಕೆ. ದೀಪಕ್, ಹುಣಸೂರು, ಕೊಡಗು, ಎಚ್.ಡಿ. ಕೋಟೆ ಪತ್ರಕರ್ತರ ಸಂಘದ ಅಧ್ಯಕ್ಷರು, ವಿವಿಧ ಗ್ರಾಪಂ ವರಿಷ್ಠರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಡಿಸಿಎಫ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios