Asianet Suvarna News Asianet Suvarna News

ಬೀದರ್: ಪತ್ರಕರ್ತರಿಗೆ ಅವಮಾನಿಸಿದ ಕಾಂಗ್ರೆಸ್‌ ಪ್ರಜಾಧ್ವನಿ ವೇದಿಕೆ

ಪತ್ರಕರ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎಂಬುವುದನ್ನೇ ಮರೆತು ಬಿಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪತ್ರಕರ್ತರನ್ನ ಕಡೆಗಣಿಸಿದಾರೆ. 

Insulted Journalists During Congress Convention in Bidar grg
Author
First Published Feb 5, 2023, 2:30 AM IST

ವರದಿ: ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೀದರ್

ಬೀದರ್(ಫೆ.05): ಹುಮನಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಕಾರ್ಯಕ್ರಮಕ್ಕೆ ಪತ್ರಕರ್ತರನ್ನ ಸ್ವಾಗತ ಮಾಡಿಕೊಳ್ಳದೇ ಕಾಂಗ್ರೆಸ್ ಪಕ್ಷ ಪತ್ರಕರ್ತರಿಗೆ ಅವಮಾನಗೊಳಿಸಿದ ಘಟನೆ ನಿನ್ನೆ(ಶನಿವಾರ) ನಡೆದಿದೆ. 

ನಗರದ ಥೇರು ಮೈದಾನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಿದ್ದರಾಮಯ್ಯ ದೀಪ ಬೆಳಗಿಸುವ‌ ಮೂಲಕ ಚಾಲನೆ ನೀಡಿದರು. ಬಳಿಕ ಪ್ರಜಾಧ್ವನಿ ವೇದಿಕೆ ವತಿಯಿಂದ ಎಲ್ಲರನ್ನ ಸ್ವಾಗತ ಮಾಡಿಕೊಳ್ಳಲು ಆಗಮಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರ್ ಮಿಯಾ ಮಾಜಿ ಸಿಎಂ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಕ್ಷೇತ್ರದ ಶಾಸಕ ರಾಜಶೇಖರ್ ಪಾಟೀಲ್ ಸೇರಿದಂತೆ ಎಲ್ಲಾ ನಾಯಕರನ್ನ ವೇದಿಕೆ ಮೇಲೆ ಮುಖ ನೋಡಿ ನೋಡಿ ಸ್ವಾಗತ ಮಾಡಿಕೊಂಡರು.

ಹೋಟೆಲ್‌ನಿಂದ ಆಡಳಿತ ನಡೆಸೋರಿಗೆ ಅಧಿಕಾರ ಬೇಡ: ಎಚ್‌ಡಿಕೆಗೆ ಟಾಂಗ್‌ ಕೊಟ್ಟ ಸಿದ್ದು

ಪಕ್ಕದಲ್ಲೇ ಇದ್ದ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ್ ಅವರ ನೆನಪಿಸುತ್ತಿದ್ದ ಹೆಸರನ್ನ ಕೇಳಿ ವಿಜಯ್ ಸಿಂಗ್, ಅಶೋಕ್ ಖೇಣಿ, ಕೊನೆಯದಾಗಿ ಧನರಾಜ್ ತಾಳಂಪಳ್ಳಿ ಸೇರಿದಂತೆ ಮತ್ತಿತ್ತರ ನಾಯಕರಿಗೆ ಸ್ವಾಗತ ಮಾಡಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಿರುವ ಕಾರ್ಯಕರ್ತರು, ಜನ ಸಾಮಾನ್ಯರಿಗೆ ಸ್ವಾಗತ ಮಾಡಿಕೊಂಡಿದರು.

ಆದರೆ ಕೊನೆಗೆ ಪತ್ರಕರ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎಂಬುವುದನ್ನೇ ಮರೆತು ಬಿಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪತ್ರಕರ್ತರನ್ನ ಕಡೆಗಣಿಸಿದಾರೆ. ಇವರ ವರ್ತನೆಗೆ ಹಲವು ಹಿರಿಯ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಹುಮನಾಬಾದ್‌ನಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಯಾತ್ರೆ ಆಯೋಜಿಸಿದ ಬ್ಲಾಕ್ ಕಾಂಗ್ರೆಸ್ ಸಮಿತಿ ಪತ್ರಕರ್ತರಿಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದಾರೆ. 

Follow Us:
Download App:
  • android
  • ios