Asianet Suvarna News Asianet Suvarna News

ಬೆಸ್ಕಾಂನಿಂದ ಗ್ರಾಹಕ ಸ್ನೇಹಿ ಡಿಜಿಟಲ್ ‌ಮೀಟರ್ ಅಳವಡಿಕೆ: ಏನಿದರ ವಿಶೇಷತೆ?

ಡಿಜಿಟಲ್ ಮೀಟರ್‌ಗಳನ್ನು ಗ್ರಾಹಕರಿಗೆ ಉಚಿತವಾಗಿ ಅಳವಡಿಸಲಾಗುತ್ತಿದ್ದು, ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ 

Installation of Consumer Friendly Digital Meter by BESCOM in Bengaluru grg
Author
Bengaluru, First Published Jul 27, 2022, 10:08 AM IST

ವರದಿ-ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ‌ನ್ಯೂಸ್, ಬೆಂಗಳೂರು

ಬೆಂಗಳೂರು(ಜು.27):  ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಬೆಸ್ಕಾಂ ವತಿಯಿಂದ ಗ್ರಾಹಕ ಸ್ನೇಹಿ ಡಿಜಿಟಲ್ ಮೀಟರ್ ಅಳವಡಿಕೆ ಮಾಡಲು ಮುಂದಾಗಿದೆ. ಈಗಾಗಲೇ BMAZ ಗ್ರಾಹಕರಿಗೆ ಡಿಎಲ್‌ಎಂಎಸ್‌ ಸ್ಟ್ಯಾಟಿಕ್ ಡಿಜಿಟಲ್ ಮಾಪನವನ್ನ ಈಗಾಗಲೇ ಕೆಲ ಏರಿಯಾಗಳಲ್ಲಿ ಅಳವಡಿಕೆ ‌ಮಾಡಲಾಗಿದೆ ಅಂತ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. BMAZ - ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವಲಯದ ಗ್ರಾಹಕರಿಗೆ ತಾವು ಬಳಸುವ ವಿದ್ಯುತ್ ಪ್ರಮಾಣದ ನಿಖರ ಮಾಹಿತಿ ಹಾಗೂ ಅದನ್ನ ಪಡೆಯಲು ಡಿಜಿಟಲ್ ಮಾಪನಗಳನ್ನು ನೀಡಲಾಗುತ್ತಿದೆ. ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್ ಎಂಬ ಡಿಜಿಟಲ್ ಮಾಪನವನ್ನ ಅಳವಡಿಕೆ ಮಾಡಲಾಗಿದೆ.

ಇನ್ನೂ BMAZ ವ್ಯಾಪ್ತಿಯಲ್ಲಿ 17,68,000 ಎಲೆಕ್ಟ್ರೊ ಮೆಕಾನಿಕಲ್ ಮೀಟರ್‌ಗಳನ್ನ ಅಳವಡಿಕೆ ‌ಮಾಡಲಾಗಿದ್ದು ಇವುಗಳನ್ನು ಡಿಎಲ್ಎಮ್ಎಸ್ ಸ್ಟ್ಯಾಟಿಕ್  ಡಿಜಿಟಲ್ ಮೀಟರ್ ಗೆ ಬದಲಾವಣೆ ಕಾರ್ಯ ಜುಲೈ ತಿಂಗಳಲ್ಲಿ ಆರಂಭಗೊಳಿಸಲಾಗಿದೆ ಎಂದು ಅಧಿಕಾರಿಗಳು ‌ಮಾಹಿತಿ ನೀಡಿದ್ದಾರೆ. ಆಲ್ಲದೆ  ಬೆಸ್ಕಾಂ ವ್ಯಾಪ್ತಿಯ ರಾಜಾಜಿನಗರ, ಆರ್‌ಆರ್‌ ನಗರ, ಇಂದಿರಾನಗರ ಮತ್ತು ವೈಟ್ ಫೀಲ್ಡ್  ಈ ಪ್ರದೇಶಗಳಲ್ಲಿ ಈಗಾಗಲೇ ಡಿಜಿಟಲ್ ಮೀಟರ್ ಅಳವಡಿಕೆ‌ ಮಾಡಲಾಗಿದೆ. ಅಲ್ಲದೆ 16,000 ಸಿಂಗಲ್ ಫೇಸ್ ಮತ್ತು 3 ಫೇಸ್ ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ನಗರದಲ್ಲಿ ಪ್ರತಿನಿತ್ಯ 700 ರಿಂದ 900 ಮೀಟರ್ ಗಳನ್ನು ಅಳವಡಿಕೆ ಮಾಡಲಾಗುತ್ತಿದೆ.
ಆಲ್ಲದೆ ಒಂದು ವಿಭಾಗದಲ್ಲಿ ಮೀಟರ್ ಅಳವಡಿಕೆ ಕಾರ್ಯ ಪೂರ್ಣಗೊಂಡ ಬಳಿಕ ತದನಂತರ ಇನ್ನೊಂದು ವಿಭಾಗದಲ್ಲಿ ಅಳವಡಿಕೆ ಕಾರ್ಯ ಆರಂಭ ಮಾಡಲಾಗುತ್ತೆ.

ರಾಜ್ಯದ ಜನತೆಗೆ ವಿದ್ಯುತ್ ಶಾಕ್, ಜುಲೈ 1ರಿಂದ ದರ‌ ಏರಿಕೆ, ಕೆಇಆರ್‌ಸಿ ಒಪ್ಪಿಗೆ

ಡಿಜಿಟಲ್ ಮೀಟರ್‌ಗಳನ್ನು ಗ್ರಾಹಕರಿಗೆ ಉಚಿತವಾಗಿ ಅಳವಡಿಸಲಾಗುತ್ತಿದ್ದು, ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ ಅಂತ ಬೆಸ್ಕಾಂ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ನೂತನ ಡಿಜಿಟಲ್ ಮೀಟರ್ ಕುರಿತು ಬೆಸ್ಕಾಂ ಸ್ಪಷ್ಟಣೆ ನೀಡಿದ್ದು ಯೋಜನೆಯ ಒಟ್ಟು ಮೊತ್ತ 285.16 ಕೋಟಿ ರೂಪಾಯಿಯಾಗಲಿದೆ. 
 

Follow Us:
Download App:
  • android
  • ios