ಉತ್ತರಕನ್ನಡ: ವಿಕ್ರಮಾದಿತ್ಯದ ಸಾಹಸಗಾಥೆಯ ಮ್ಯೂಸಿಯಂ..!

ಯುದ್ಧ ನೌಕೆ ಮುಂದಿನ ವರ್ಷಗಳಲ್ಲಿ ನಿವೃತ್ತಿ ಕಾಣಲಿರುವುದರಿಂದ ಇದರ ನಿವೃತ್ತಿಗೂ ಮುನ್ನ ಈ ನೌಕೆಯ ಒಳಗೆ ಮ್ಯೂಸಿಯಂ ಸ್ಥಾಪಿಸಿ ಸಾರ್ವಜನಿಕರಿಗೆ ವಿಕ್ರಮಾದಿತ್ಯದ ಇತಿಹಾಸ ತಿಳಿಸುವ ಕಾರ್ಯಕ್ಕೆ ಮುಂದಾದ ನೌಕಾಪಡೆ

INS Vikramaditya  Aircraft Museum in Karwar grg

ಉತ್ತರಕನ್ನಡ(ಅ.11):  ಏಷ್ಯಾದಲ್ಲಿಯೇ ಅತೀ ದೊಡ್ಡ ವಿಮಾನ ವಾಹಕ ಯುದ್ಧ ನೌಕೆಯಾಗಿರುವ ವಿಕ್ರಮಾದಿತ್ಯದ ಒಳಗೆ ಹೊಸದೊಂದು ಮ್ಯೂಸಿಯಂ ಅನ್ನು ನೌಕಾಪಡೆ ಸ್ಥಾಪಿಸಿದ್ದು, ಇದು ಎಲ್ಲರ ಗಮನ ಸೆಳೆಯಲಾರಂಭಿಸಿದೆ.

ವಿಕ್ರಮಾದಿತ್ಯ ಭಾರತೀಯ ನೌಕಾಪಡೆಯ ಕಾರ್ಯಾಚರಣೆಗೆ ಸೇರಿ ಎಂಟು ವರ್ಷಗಳಾಗಿದ್ದು, 284 ಮೀಟರ್ ಉದ್ದ, 60 ಮೀಟರ್ ಎತ್ತರ ಹೊಂದಿದೆ. ಅಲ್ಲದೇ, 34 ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಏಕಕಾಲದಲ್ಲಿ ಹೊರುವ ಸಾಮರ್ಥ್ಯ ಹೊಂದಿದೆ. 2013ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಸೇರ್ಪಡೆಗೊಂಡು 2014ರ ಜೂನ್ ಗೆ ಕಾರವಾರದಲ್ಲಿ ನೆಲೆ ಕಂಡು ತನ್ನ ಸೇವೆ ಆರಂಭಿಸಿದ ವಿಕ್ರಮಾದಿತ್ಯ, ಇತ್ತೀಚಿನವರೆಗೆ ದೇಶದ ಏಕೈಕ ಯುದ್ಧವಿಮಾನ ವಾಹಕ ನೌಕೆಯಾಗಿತ್ತು. ಆದರೆ, ಸದ್ಯ ಐಎನ್ಎಸ್ ವಿರಾಟ್ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಬಳಿಕ ವಿಕ್ರಮಾದಿತ್ಯದ ಮೇಲಿನ ಅವಲಂಬನೆ ಕೊಂಚ ಕಡಿಮೆಯಾಗಲಿದೆ.‌ ಈ ಯುದ್ಧ ನೌಕೆ ಮುಂದಿನ ವರ್ಷಗಳಲ್ಲಿ ನಿವೃತ್ತಿ ಕಾಣಲಿರುವುದರಿಂದ ಇದರ ನಿವೃತ್ತಿಗೂ ಮುನ್ನ ಈ ನೌಕೆಯ ಒಳಗೆ ಮ್ಯೂಸಿಯಂ ಸ್ಥಾಪಿಸಿ ಸಾರ್ವಜನಿಕರಿಗೆ ವಿಕ್ರಮಾದಿತ್ಯದ ಇತಿಹಾಸ ತಿಳಿಸುವ ಕಾರ್ಯಕ್ಕೆ ಇದೀಗ ನೌಕಾಪಡೆ ಮುಂದಾಗಿದೆ.

ಉತ್ತರಕನ್ನಡ: ಯುಪಿ ಮೂಲದ ಬ್ಯಾಂಕ್‌ ಮ್ಯಾನೇಜರ್‌ಗೆ ಕನ್ನಡ ಕಲಿಯುವಂತೆ ಕರವೇ ಎಚ್ಚರಿಕೆ

'ಬಾಕು'ನಿಂದ 'ಅಡ್ಮಿರಲ್ ಗೋರ್ಷ್ಕೋವ್', ಬಳಿಕ ಇಂದಿನ 'ವಿಕ್ರಮಾದಿತ್ಯ' ವರೆಗಿನ ಈ ನೌಕೆಯ ಪ್ರಯಾಣವನ್ನು ಈ ಮ್ಯೂಸಿಯಂ ಕಣ್ಣಿಗೆ ಕಟ್ಟಿಕೊಡಲಿದೆ. ಭೂತ, ವರ್ತಮಾನ ಮತ್ತು ಭವಿಷ್ಯಕ್ಕಾಗಿ ಈ ಮ್ಯೂಸಿಯಂ ಸಮರ್ಪಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.
 

Latest Videos
Follow Us:
Download App:
  • android
  • ios