ಉತ್ತರಕನ್ನಡ: ಯುಪಿ ಮೂಲದ ಬ್ಯಾಂಕ್‌ ಮ್ಯಾನೇಜರ್‌ಗೆ ಕನ್ನಡ ಕಲಿಯುವಂತೆ ಕರವೇ ಎಚ್ಚರಿಕೆ

ಸ್ಥಳೀಯ ಗ್ರಾಹಕರೊಂದಿಗೆ ಕನ್ನಡ ಕಲಿಯುವುದಿಲ್ಲ, ಮಾತನಾಡುವುದಿಲ್ಲ ಎಂದು ಹೇಳಿರುವುದನ್ನು ತಿಳಿದು ಬ್ಯಾಂಕ್‌ನ ವ್ಯವಸ್ಥಾಪಕರಿಗೆ ಕನ್ನಡ ಕಲಿತು ವ್ಯವಹರಿಸುವಂತೆ ಎಚ್ಚರಿಸಿದ ಕರ್ನಾಟಕ ರಕ್ಷಣಾ ವೇದಿಕೆ 

Learn Kannada KARVE Instruct to Uttar Pradesh Based Bank Manager at Kumta grg

ಉತ್ತರಕನ್ನಡ(ಅ.11):  ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಇಂಡಿಯನ್ ಓವರ್‌ಸೀಸ್‌ ಬ್ಯಾಂಕಿನ ವ್ಯವಸ್ಥಾಪಕ ಉತ್ತರ ಪ್ರದೇಶ ಮೂಲದ ರಾಕೇಶ್ ರಂಜನ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಕಲಿಯುವಂತೆ ಎಚ್ಚರಿಸಿದೆ. 

ಸ್ಥಳೀಯ ಗ್ರಾಹಕರೊಂದಿಗೆ ಕನ್ನಡವನ್ನು ಕಲಿಯುವುದಿಲ್ಲ, ಮಾತನಾಡುವುದಿಲ್ಲ ಎಂದು ಹೇಳಿರುವುದನ್ನು ತಿಳಿದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಬ್ಯಾಂಕ್‌ನ ವ್ಯವಸ್ಥಾಪಕರಿಗೆ ಕನ್ನಡ ಕಲಿತು ವ್ಯವಹರಿಸುವಂತೆ ಎಚ್ಚರಿಸಲಾಗಿದೆ.

ಅಂಗನವಾಡಿಗೆ ಜಾಗ ಲಭ್ಯವಾದರೆ ಕಟ್ಟಡ ನಿರ್ಮಾಣ: ಕಾಗೇರಿ

ಈ ಉದ್ಯೋಗಿಯು ಕಳೆದ ಮೂರು ವರ್ಷದಿಂದ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದು, ಒಂದು ಅಕ್ಷರ ಕನ್ನಡವನ್ನು ಕೂಡಾ ಕಲಿತಿರದಿರುವುದು ವಿಷಾದನೀಯ. ಮುಂದಿನ ದಿನಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಲ್ಲೂ ಕನ್ನಡದಲ್ಲಿ ವ್ಯವಹಿಸುವಂತೆ ಒತ್ತಾಯಿಸಿ ರಕ್ಷಣಾ ವೇದಿಕೆಯಿಂದ ಹೋರಾಟ ನಡೆಸಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios