ಬರದ ನಾಡಿಗೆ ಕಾಲಿಟ್ಟ ಕಾಶ್ಮೀರಿ ಆ್ಯಪಲ್: ವಿಜಯಪುರದಲ್ಲಿ ಸೇಬು ಬೆಳೆದು ಸೈ ಎನಿಸಿಕೊಂಡ ರೈತ

*ಗುಮ್ಮನಟಗರಿಯಲ್ಲಿ ಸೇಬು ಬೆಳೆದು ಸೈ ಎನಿಸಿಕೊಂಡ ರೈತ
*ಇದು ವಿಜಯಪುರ ಜಿಲ್ಲೆಯ ಕೋಲ್ಹಾರ ರೈತನ ಯಶೋಗಾಥೆ
*9ಏಕರೆ ಭೂಮಿ, 30 ತಹರೇವಾರಿ ಹಣ್ಣು ಬೆಳೆದ ರೈತ
 

Innovative Farmer Grows Kashmiri Apples in Vijayapura Kolhar mnj

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಏ.22): ಸೇಬು ಹಣ್ಣು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಬೆಳೆದಿರೋದು ಕಾಮನ್, ನಮ್ಮ ಕಡೆಗಳಲ್ಲಿ ದ್ರಾಕ್ಷಿ, ಮಾವು ಬೆಳೆದಂತೆಲ್ಲ ಅಲ್ಲಿ ಸೇಬು ಬೆಳೆಯಲಾಗುತ್ತೆ. ಕಾಶ್ಮೀರದ ಆಪಲ್‌ಗೆ ಬಲು ಬೇಡಿಕೆ ಇದೆ. ಸದ್ಯ ವಿಷಯ ಏನಂದ್ರೆ ಇನ್ಮುಂದೆ ಗುಮ್ಮಟನಗರಿ ವಿಜಯಪುರದ (Vijayapura) ಸೇಬುಗೆ ಬೇಡಿಕೆ ಶುರುವಾದ್ರು ಅಚ್ಚರಿ ಪಡಬೇಕಿಲ್ಲ. ಅರೇ ಅದ್ ಹೇಗೆ ಸಾಧ್ಯ ಅಂತ್ತಿದ್ರೆ ಈ ಸ್ಟೋರಿ ಓದಿ

ಕಾಶ್ಮೀರ ಸೇಬು (Kashmiri Apples) ಬರದನಾಡು ವಿಜಯಪುರ ಜಿಲ್ಲೆಗೂ ಕಾಲಿಟ್ಟಿದೆ. ವಿಜಯಪುರ ಜಿಲ್ಲೆ ದ್ರಾಕ್ಷಿ, ಲಿಂಬು ಕಣಜಕ್ಕೆ ಫೇಮಸ್ ಆಗಿತ್ತು. ಇದೀಗ ಬರದ ನಾಡಿನಲ್ಲೂ  ಸೇಬು ಬೆಳೆದು ರೈತನೋರ್ವ ಸೈ ಎನಿಸಿಕೊಂಡಿದ್ದಾನೆ. 

ವಿಜಯಪುರ ಜಿಲ್ಲೆಯಲ್ಲಿ ಪ್ರಗತಿಪರ ರೈತನೊಬ್ಬ (Farmer)ಕಾಶ್ಮೀರಿ ಸೇಬು ಬೆಳೆದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾನೆ. ಅರೇ  ಕಾಶ್ಮೀರದ ಹಿಮಪ್ರದೇಶಗಳ ವಾತಾವರಣದಲ್ಲಿ ಬೆಳೆಯೋ ಸೇಬನ್ನು ಬರಪೀಡಿತ ಜಿಲ್ಲೆಯಲ್ಲಿ ಬೆಳೆದಿದ್ದಾರಾ ಅಂತ ಅಚ್ಚರಿಯಾಗುತ್ತೆ ಅಲ್ವಾ? ಇದೆ ಈಗಿರುವ ಅಸಲಿ ಕಹಾನಿ

ಕೊಲ್ಹಾರದ ಪ್ರಗತಿಪರ ರೈತನಿಂದ ಸಾಧನೆ: ವಿಜಯಪುರ ಜಿಲ್ಲೆಯ  ಕೋಲ್ಹಾರದ  ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ ಅವ್ರು ಪುತ್ರ ಸಚಿನ್ ಓದಿರೋದು ಡಿಪ್ಲೊಮಾ ಅಗ್ರಿ. ಎಲ್ಲರಂತೆ ಇವ್ರು ಡಿಪ್ಲೊಮಾ ಅಗ್ರಿ ಕೋರ್ಸ್ ಮಾಡಿ ಉದ್ಯೋಗದತ್ತ ಒಲವು ತೋರಿದ್ರು. ಆದ್ರೆ ತಂದೆ ಸಿದ್ದಪ್ಪ ಬಾಲಗೊಂಡ ಪ್ರೇರಣೆಯಿಂದ ಸಂಶೋಧನಾತ್ಮಕ ಕೃಷಿ ಮಾಡ್ತಿದ್ದಾರೆ. ಕಪ್ಪು ನೆಲದಲ್ಲಿ ಸೇಬು ಬೆಳೆದಿದ್ದಾರೆ. 

ಇದನ್ನೂ ಓದಿ: Raita Ratna Award 2022: ಸಾವಯವ ಕೃಷಿ ಸಾಧಕಿ ಟ್ರ್ಯಾಕ್ಟರ್‌ ಮಹದೇವಕ್ಕ

ಸಮಶೀತೋಷ್ಣ ಪ್ರದೇಶದಲ್ಲಿ ಮಾತ್ರ ಸೇಬನ್ನು ಬೆಳೆಯಲಾಗುತ್ತೆ. ಸೇಬು ಬೆಳವಣಿಗೆಗೆ 4 ರಿಂದ 21 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಟಾಂಶ ಸೂಕ್ತ, ಅಲ್ಲದೇ  ವಾರ್ಷಿಕವಾಗಿ 100 ರಿಂದ 124 ಸೆ.ಮಿ ನಷ್ಟು ಮಳೆ ಬೇಕಾಗುತ್ತೆ. ಆದರೆ ಬರ ಪೀಡಿತ ಜಿಲ್ಲೆಯಲ್ಲಿ ಕಪ್ಪು ಮಣ್ಣಿನಲ್ಲಿ ರೈತ ಸಿದ್ದಪ್ಪ ಬಾಲಗೊಂಡ ಪುತ್ರ ಸಚಿನ್ ಸೇಬು ಬೆಳೆಯುವ ಮೂಲಕ‌ ಇತರರಿಗೆ  ಮಾದರಿಯಾಗಿದ್ದಾರೆ. 

ಹಿಮಾಚಲ ಪ್ರದೇಶದಿಂದ ಮಾರ್ಗದರ್ಶನ:  ಹಿಮಾಚಲ ಪ್ರದೇಶದಿಂದ (Himachal Pradesh) ಸೇಬು ಬೆಳೆಯಲು ಮಾರ್ಗದರ್ಶನ ಪಡೆದು ಉತ್ಕೃಷ್ಟ ಸೇಬು ಬೆಳೆದು ಇದೀಗ ವಿಜಯಪುರ ಸೇರಿದಂತೆ ಸ್ಥಳೀಯ ಮಾರುಕಟ್ಟೆಗೆ ಕಳುಹಿಸ್ತಿದ್ದಾರೆ. ಕೃಷಿ ಲಾಭದಾಯಕ ಅಲ್ಲಂದ್ರು. ಆದ್ರೆ ರೈತರು ವಿಭಿನ್ನ ಬಗೆಯ ಕೃಷಿ ಮಾಡಿ ಆದಾಯ ಪಡೆಯಬಹುದು. 

9 ಎಕರೆ ಜಮೀನಿನಲ್ಲಿ 30 ತಹರೇವಾರಿ ಹಣ್ಣು ಬೆಳೆದು, ಪ್ರತಿ ತಿಂಗಳು ಆದಾಯ ಬರುವಂತೆ ಪ್ಲ್ಯಾನ್ ಮಾಡಿದ್ದೇವೆ. ಸೇಬು,ಮಾವು. ಹೀಗೆ ಸೀಸನ್ ವಾರು ಮಾರುಕಟ್ಟೆಗೆ ಹಣ್ಣು ಕಳುಹಿಸ್ತೀದ್ದೇವೆ. ಇದ್ರಿಂದ ವಾರ್ಷಿಕ 30ಲಕ್ಷ ಆದಾಯ ನಿರೀಕ್ಷೆಯಲ್ಲಿದ್ದೇವೆ ಅನ್ನೋದು ಸಚಿನ್ ಬಾಲಗೊಂಡರ ಹೆಮ್ಮೆ

ಸೇಬು ಮಾತ್ರ ಅಲ್ಲ, ಅಚ್ಚರಿಯ ಹಣ್ಣುಗಳ ಬೆಳೆದ ಯುವ ರೈತ:  ಇನ್ನು ಸಚಿನ್ ಬಾಲಗೊಂಡ ಅವ್ರ ತೋಟದಲ್ಲಿ ಯಾವ ಹಣ್ಣು ಇಲ್ಲ ಅನ್ನೋ ಹಾಗೆಯೇ ಇಲ್ಲ. 9ಎಕರೆಯಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ಸೇಬು, ಜಾಮ್, ಡ್ರ್ಯಾಗನ್ ಫ್ಲೋಟ್, ಖರ್ಜೂರ, ಪೇರಲ, ನೇರಳೆ, ಹುಣಸೆ, ಹಲಸು, ವಾಟರ್ ಸೇಬು, ಸ್ಟಾರ್ ಫ್ರೂಟ್ಸ್, ದಾಳಿಂಬೆ, ಸ್ವೀಟ್ ಹುಣಸೆ, ಸೀತಾಫಲ, ಮೋಸಂಬಿ ಸೇರಿದಂತೆ 30ತರಹದ ಹಣ್ಣು ಬೆಳೆಯುತ್ತಿದ್ದಾರೆ.

ಇದನ್ನೂ ಓದಿDakshina Kannada: ಜನಾಕರ್ಷಣೆಯ ಕೇಂದ್ರವಾದ ತಿರುಮಲೇಶ್ವರ ಭಟ್ಟರ ಪ್ರಯೋಗಶೀಲ ಕೃಷಿ..!

ಸೇಬು ಭಾರತದ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಾಂಡ್, ಪಂಜಾಬ್, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ ಸೇರಿದಂತೆ ದಕ್ಷಿಣ ಭಾರತದ ತಮಿಳುನಾಡಿನ‌ ನೀಲಗಿರಿ ಬೆಟ್ಟದಲ್ಲಿ‌ ಮಾತ್ರ ಈ ಸೇಬು ಬೆಳೆಯುತ್ತಾರೆ.

ಉ.ಕರ್ನಾಟಕದಲ್ಲಿ ಸೇಬು ಬೆಳೆದ ಮೊದಲಿಗ: ಉತ್ತರ ಕರ್ನಾಟಕದಲ್ಲಿ  ಮೊದಲ ಬಾರಿಗೆ ಕೋಲ್ಹಾರದ ಯುವ ರೈತ ಸಚಿನ್ ಸಿದ್ದಪ್ಪ  ಬಾಲಗೊಂಡ ಒಂದು ಎಕರೆ ಹೊಲದಲ್ಲಿ ಪ್ರಾಯೋಗಿಕವಾಗಿ ಸೇಬು ಬೆಳೆದು ಸ್ಥಳೀಯ ರೈತರಲ್ಲಿ ಹೊಸ ಆಶಾಭಾವ ಮೂಡಿಸಿದ್ದಾರೆ. ಒಂದು ಎಕರೆಯಲ್ಲಿ ಸುಮಾರು 300 ಸೇಬು ಗಿಡಗಳನ್ನು ಎರಡು ವರ್ಷದ ಹಿಂದೆಯೇ ನಾಟಿ ಮಾಡಿದ್ದು ಇದೀಗ ಫಸಲು ಬಂದಿದೆ. 

ಪ್ರತಿ ಗಿಡದಲ್ಲಿ 10 ರಿಂದ 30 ಕಾಯಿ ಹಿಡಿದಿದೆ. ಸೇಬು ಬೆಳೆಗೆ ಅಲ್ಪ ನೀರು ಬೇಕಾಗುತ್ತೆ, ರೋಗಬಾಧೆಯೂ ಕಡಿಮೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದಾಗಿದೆ. ಇವ್ರ ಸೇಬು ಬೆಳೆ ನೋಡಲು ರೈತರು ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟ್ರದಿಂದಲೂ ಬರ್ತಿದ್ದಾರೆ. ಅವರಿಗೆ ಸೇಬು ಬೆಳೆಯ ಬಗ್ಗೆ ಮಾಹಿತಿ ನೀಡಿ ಬೆಳೆಯಲು ಪ್ರೋತ್ಸಾಹ ನೀಡ್ತಿದ್ದಾರೆ ಸಚಿನ್.

ಇತರೆ ರೈತರಿಗು ಮಾದರಿಯಾದ ಸೇಬು ಬೆಳೆ: ಬರದ‌ ನಾಡಲ್ಲು ಆಫಲ್ ಬೆಳೆದು ಅಚ್ಚರಿ ಮೂಡಿಸಿರುವ ಯುವ ರೈತ ಸಚಿನ್ ಸಾಧನೆಗೆ ಜಿಲ್ಲೆಯ ಜನ ಹೆಮ್ಮೆ ಪಡ್ತಿದ್ದಾರೆ. ಕಾಶ್ಮೀರದಲ್ಲಿ ಬೆಳೆಯೋ ಆಫಲ್ ಮರ ಬರದ ಊರಲ್ಲಿ ಕಂಡು ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಎನ್ತಿದ್ದಾರೆ.. ಈ ಮೂಲಕ ಬಿಸಿಲಿನ ಭಾಗದಲ್ಲೂ ಸೇಬು ಬೆಳೆಯಬಹುದು ಅಂತ ವಿಜಯಪುರದ ರೈತ ತೋರಿಸಿಕೊಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಇತರ ರೈತರು ಸೇಬು ಬೆಳೆಯಲು ಪ್ರೇರಣೆ ಆಗಿದೆ

Latest Videos
Follow Us:
Download App:
  • android
  • ios