ಹಂಪಿಯಲ್ಲಿ ಪ್ರವಾಸಿಗರನ್ನೇ ನೆಚ್ಚಿ ಜೀವನ ನಡೆಸುತ್ತಿದ್ದ ಪ್ರವಾಸಿ ಮಾರ್ಗದರ್ಶಿ (ಗೈಡ್‌)ಗಳ ಬದುಕು ದುಸ್ತರ ಜನತಾ ಕರ್ಫ್ಯೂ ಹಾಗೂ ಲಾಕ್‌ಡೌನ್‌ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಹಂಪಿ ಗೈಡ್‌ಗಳು ಗೈಡ್‌ಗಳ ಖಾತೆಗೆ ತಲಾ 10 ಸಾವಿರ ಜಮೆ ಮಾಡಿದ ಸುಧಾಮೂರ್ತಿ

ಹೊಸಪೇಟೆ(ಮೇ.20): ಜನತಾ ಕರ್ಫ್ಯೂ ಹಾಗೂ ಲಾಕ್‌ಡೌನ್‌ನಿಂದಾಗಿ ಹಂಪಿಯಲ್ಲಿ ಪ್ರವಾಸಿಗರನ್ನೇ ನೆಚ್ಚಿ ಜೀವನ ನಡೆಸುತ್ತಿದ್ದ ಪ್ರವಾಸಿ ಮಾರ್ಗದರ್ಶಿ (ಗೈಡ್‌)ಗಳ ಬದುಕು ದುಸ್ತರವಾಗಿದೆ. ಇದನ್ನರಿತ ಇನ್ಫೋಸಿಸ್‌ ಫೌಂಡೇಶನ್‌ ಗೈಡ್‌ಗಳ ನೆರವಿಗೆ ಧಾವಿಸಿದೆ. ಇನ್ಫೋಸಿಸ್‌ ಫೌಂಡೇಶನ್‌ ಮೂಲಕ ಸುಧಾಮೂರ್ತಿ ಅವರು 100 ಗೈಡ್‌ಗಳಿಗೆ ತಲಾ 10 ಸಾವಿರವನ್ನು ಅವರ ಖಾತೆಗಳಿಗೆ ಜಮೆ ಮಾಡಿದ್ದಾರೆ. ಪ್ರವಾಸಿ ಮಾರ್ಗದರ್ಶಿಗಳು ಕೂಡ ಅವರ ಔದಾರ್ಯವನ್ನು ಪ್ರಶಂಸಿಸುತ್ತಿದ್ದಾರೆ.

ಹಂಪಿಯ ನೆಲದ ಮಹಿಮೆ ಹಾಗೂ ವಿಜಯನಗರ ಸಾಮ್ರಾಜ್ಯದ ವೈಭವವನ್ನು ದೇಶ-ವಿದೇಶಿ ಪ್ರವಾಸಿಗರಿಗೆ ನಿತ್ಯವೂ ಗೈಡ್‌ಗಳು ಸಾರುತ್ತಾರೆ. ಈ ಮೂಲಕ ತಮ್ಮ ಬದುಕುಕಟ್ಟಿಕೊಂಡಿದ್ದಾರೆ. ಆದರೆ, ಕಳೆದ ವರ್ಷ ಲಾಕ್‌ಡೌನ್‌ ಹಾಗೂ ಈ ವರ್ಷದ ಜನತಾ ಕರ್ಫ್ಯೂ ಮತ್ತು ಸೆಮಿಲಾಕ್‌ಡೌನ್‌, ಸ್ಥಳೀಯ ಲಾಕ್‌ಡೌನ್‌ ಇವರ ಬದುಕು ಕಸಿದುಕೊಂಡಿದೆ. 

ಕೊರೋನಾ ಹೋರಾಟಕ್ಕೆ '100 ಕೋಟಿ' ಬಲ ತುಂಬಿದ ಇನ್ಫೋಸಿಸ್ ಸುಧಾ ಮೂರ್ತಿ!

ಕೊರೋನಾದಿಂದಾಗಿ ಪ್ರವಾಸೋದ್ಯಮ ಕೂಡ ನೆಲಕಚ್ಚುತ್ತಿದೆ. ಹೀಗಾಗಿ ಗೈಡ್‌ಗಳ ಬದುಕು ಕೂಡ ಅಯೋಮಯವಾಗಿದೆ. ಹಂಪಿಯಲ್ಲಿ ಪ್ರವಾಸೋದ್ಯಮ ಸ್ಥಗಿತಗೊಂಡು ತಮಗೆ ಬದುಕು ನಡೆಸಲು ಕಷ್ಟವಾಗಿರುವ ಬಗ್ಗೆ ಇನ್ಫೋಸಿಸ್‌ ಫೌಂಡೇಶನ್‌ನ ಸುಧಾಮೂರ್ತಿ ಅವರಿಗೆ ಇಲ್ಲಿನ ಪ್ರವಾಸಿ ಮಾರ್ಗದರ್ಶಿಗಳು ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿ ಇನ್ಫೋಸಿಸ್‌ ನೆರವಿಗೆ ಧಾವಿಸಿರುವುದನ್ನು ಪ್ರವಾಸಿ ಮಾರ್ಗದರ್ಶಿಗಳು ಶ್ಲಾಘಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona