ಕೊರೋನಾ ವಾರಿಯರ್ಸ್ ಪತ್ರಕರ್ತರಿಗೆ ಲಸಿಕೆ, ವಾರ್ತಾ ಇಲಾಖೆಯಿಂದ ಪತ್ರ

ಮಾಧ್ಯಮದ ಸಿಬ್ಬಂದಿಗೆ ಕೊರೋನಾ ವಾರಿಯರ್ಸ್  ಸ್ಥಾನಮಾನ/ ಮಾಧ್ಯಮ ಸಿಬ್ಬಂದಿಗೆ ಕೂಡಲೆ ಲಸಿಕೆ ನೀಡಲು ಮನವಿ/ ವಾರ್ತಾ ಇಲಾಖೆಯಿಂದ ಆರೋಗ್ಯ ಇಲಾಖೆಗೆ ಪತ್ರ

Information Dept letter to Health dept Journalists To Be Vaccinated On Priority mah

ಬೆಂಗಳೂರು(ಮೇ  07)  ಜನರಲ್ಲಿ ಕೊರೋನಾಕ್ಕೆ ಸಂಬಂಧಿಸಿ ಜಾಗೃತಿ ಮೂಡಿಸುತ್ತಲೆ ಬಂದಿರುವ ಮಾಧ್ಯಮದ ಸಿಬ್ಬಂದಿಯನ್ನು ಕರ್ನಾಟಕ ಸರ್ಕಾರ ಫ್ರಂಟ್  ಕೊರೋನಾ ವಾರಿಯರ್ಸ್ ಎಂದು ಹೇಳಿದೆ. ಅವರಿಗೂ ಲಸಿಕೆ ನೀಡುತ್ತೇವೆ ಎಂದು ಹೇಳಿತ್ತು. 

ಇದರ ಮುಂದುವರಿದ ಭಾಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ.ಎಸ್ ಹರ್ಷ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಕೆವಿ ತ್ರಿಲೋಕ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ. 

ಕರ್ನಾಟಕ ಕಂಪ್ಲೀಟ್ ಲಾಕ್; ಏನಿರುತ್ತೆ? ಏನಿರಲ್ಲ?

ಮಾಧ್ಯಮದ ಸಿಬ್ಬಂದಿಗಳಿಗೆ, ಪತ್ರಕರ್ತರಿಗೆ ಲಸಿಕೆ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.  ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು, ನೊಡಲ್ ಅಧಿಕಾರಿ ನೇಮಕ ಮಾಡಬೇಕು ಎಂದು ಆರೋಗ್ಯ ಇಲಾಖೆಯನ್ನು ಕೇಳಿಕೊಳ್ಳಲಾಗಿದೆ.

ಮಾಧ್ಯಮ ಸಿಬ್ಬಂದಿ ಸಮನ್ವಯಕ್ಕಾಗಿ ಸಮಿತಿ ರಚನೆ ಮಾಡಬೇಕು ಎಂಬ ವಿಚಾರವನ್ನು ಹೇಳಿದ್ದು  ಸಮನ್ವಯ ಸಮಿತಿ ಮೂಲಕ  ಮಾಧ್ಯಮ ಪ್ರತಿನಿಧಿಗಳ ಪಟ್ಟಿ ಅಂತಿಮವಾಗಲಿದೆ. 

"

 

Latest Videos
Follow Us:
Download App:
  • android
  • ios