ತಾಯತ ಮಾರುವವನ ಬಳಿ ಸಿಕ್ಕಿದ್ದು ಅತ್ಯಮೂಲ್ಯ ವಸ್ತುಗಳು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 12:20 PM IST
Indradhanush sold illegally: Amulet seller caught trading in endangered species
Highlights

ಸಮುದ್ರದ ಅಳಿವಿನಂಚಿನ ಪ್ರಭೇದವೆಂದೆ ಹೆಸರುವಾಸಿಯಾದ ಇಂದ್ರಧನುಷ್ ಎಂಬ 130  ಪ್ರಭೇದಗಳನ್ನು ಉತ್ತರ ಪ್ರದೇಶದ ಮಧುಕುಮಾರ್ ಎಂಬಾತ ಯಶವಂತಪುರದ ಆರ್ ಎಂಸಿ ಯಾರ್ಡ್ ಬಳಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ. 

ಬೆಂಗಳೂರು[ಆ.10]:  ತಾಯತ ಮಾರುತ್ತಿದ್ದ ವ್ಯಾಪಾರಿಯೊಬ್ಬನ ಬಳಿ ಸಮುದ್ರದ ಅಳಿವಿನಂಚಿನಲ್ಲಿರುವ 130 ಇಂದ್ರಧನುಷ್ ಪ್ರಭೇದಗಳನ್ನು ಬೆಂಗಳೂರು ಆರ್ ಎಂಸಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಮಧು ಕುಮಾರ್ ಬಂಧಿತ ಆರೋಪಿ. ಬಂಧಿತನು ಉತ್ತರ ಪ್ರದೇಶದ ಮಥುರಾದ ವ್ಯಾಪಾರಿಯೊಬ್ಬನಿಗೆ ಮಾರಾಟ ಮಾಡಲು ಇಂದ್ರಧನುಷ್ ಪ್ರಭೇದಗಳನ್ನು ಸಂಗ್ರಹಿಸಿಕೊಂಡಿದ್ದ.

ಸಮುದ್ರದಲ್ಲಿ ದೊರಕುವ ಈ ಪ್ರಭೇದಗಳು ಅಳಿವಿನಂಚಿನಲ್ಲಿದ್ದು ಶ್ವೇತ ಹಾಗೂ ಕೆಂಪು ಬಣ್ಣದಲ್ಲಿರುತ್ತವೆ. ಮೃತಪಟ್ಟ ನಂತರ ಹಸಿರು ಬಣ್ಣಕ್ಕೆ ತಿರುಗುತ್ತವೆ. ಬಂಧಿತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ದೂರು ದಾಖಲಿಸಲಾಗಿದೆ. 

ಇಂಗ್ಲಿಷ್ ನಲ್ಲಿ ಈ ಸುದ್ದಿ ಓದಲು ಕ್ಲಿಕ್ಕಿಸಿ : Indradhanush sold illegally: Amulet seller caught trading in endangered species 

loader