ಮೈಸೂರು(ಡಿ.04): ವಸತಿ ಶಾಲೆಯಲ್ಲಿ ವಿದ್ಯಾರ್ಥಿನೊರ್ವ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸಮೀಪದ ಕæ.ಆರ್‌.ನಗರ ತಾಲೂಕು ಭೇರ್ಯದ ಕುಪ್ಪಳ್ಳಿ ಗ್ರಾಮದಲ್ಲಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಡೆದಿದೆ. ವಸತಿ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗೌತಮ್‌ (14) ಮೃತ ವಿದ್ಯಾರ್ಥಿ.

ಈತ ಕೆ.ಆರ್‌. ನಗರ ತಾಲೂಕು ಚುಂಚನಕಟ್ಟೆಹೋಬಳಿಯ ಸಾಲೆಕೊಪ್ಪಲುವಿನ ಶಿವಣ್ಣ ಮತ್ತು ರೇಖಾ ದಂಪತಿ ಪುತ್ರ. 2019-20ನೇ ಸಾಲಿನಿಂದ 8ನೇ ತರಗತಿಗೆ ಕುಪ್ಪಳ್ಳಿ ವಸತಿ ಶಾಲೆಗೆ ದಾಖಲಾಗಿದ್ದ. ತಡರಾತ್ರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜತೆ ಊಟ ಮುಗಿಸಿಕೊಂಡು ಶಾಲಾ ಕೊಠಡಿಯೊಳಗೆ 30 ವಿದ್ಯಾರ್ಥಿಗಳ ಜತೆಯಲ್ಲಿ ಮಲಗಿದ್ದಾನೆ. ಬೆಳಗ್ಗೆ ಈತನ ಸ್ನೇಹಿತರು ಎಂದಿನಂತೆ ಎಬ್ಬಿಸಲು ಹೋದಾಗ ಎಷ್ಟೇ ಎಬ್ಬಿಸಿದರೂ ಎದ್ದೇಳದಿದ್ದಾಗ ಪಕ್ಕದ ಕೊಠಡಿಯಲ್ಲಿದ್ದ ಶಿಕ್ಷಕಿ ಹಾಗೂ ಶುಶೂಶ್ರಕಿಯರಿಗೆ ತಿಳಿಸಿದ್ದಾರೆ. ಅವರು ಬಂದು ನೋಡಿದಾಗ ವಿದ್ಯಾರ್ಥಿ ಗೌತಮ್‌ ಮೃತಪಟ್ಟಿರುವುದು ಕಂಡು ಬಂದಿದೆ.

ಮಂಡ್ಯ: ಮಾಜಿ ಸಚಿವ ರೇವಣ್ಣ ಪುತ್ರನ ವಿರುದ್ಧ FIR

ಕೂಡಲೇ ಸಂಬಂಧಿಸಿದ ಪೋಷಕರಿಗೆ ಹಾಗೂ ಸಾಲಿಗ್ರಾಮ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನುಮಾನಸ್ಪಾದವಾಗಿ ಮೃತಪಟ್ಟವಿದ್ಯಾರ್ಥಿ ಗೌತಮ್‌ನ ಪೋಷಕರು ನಮ್ಮ ಮಗ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯವನ್ನು ದೊರಕಿಸಿ ಕೊಡಿ ಎಂದು ಸಾಲಿಗ್ರಾಮ ಪೊಲೀಸರಿಗೆ ದೂರು ನೀಡಿದ್ದಾರೆ.

ಶಾಸಕರ ಭೇಟಿ:

ಕುಪ್ಪಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಗೆ ಮಾಜಿ ಸಚಿವ ಶಾಸಕ ಸಾ.ರಾ. ಮಹೇಶ್‌ ಭೇಟಿ ನೀಡಿ, ಮೃತ ವಿದ್ಯಾರ್ಥಿ ಗೌತಮ್‌ನ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ನಂತರ ಎಸ್ಪಿ ಸಿ.ಬಿ. ರಿಷ್ಯಂತ್‌ ಅವರ ಜತೆಯಲ್ಲಿ ಚರ್ಚಿಸಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ಶವವನ್ನು ಮೈಸೂರಿಗೆ ಕೊಂಡೊಯ್ದು ಐವರು ವೈದ್ಯರ ತಂಡದೊಂದಿಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಎಂದಿದ್ದಾರೆ.

ಬೆಳಗಾವಿಯಲ್ಲಿ ಹನಿಟ್ರ್ಯಾಪ್‌ ಗ್ಯಾಂಗ್‌: 6 ಮಂದಿ ಅರೆಸ್ಟ್

ಮೃತ ಗೌತಮ್‌ನ ಪೋಷಕರಿಗೆ ನಿಮ್ಮ ಮಗನ ಸಾವಿನ ಬಗ್ಗೆ ಯಾವುದೇ ಸಂಶಯ ಬೇಡ, ಮರಣೋತ್ತರ ಪರೀಕ್ಷೆಯ ವರದಿ ಬರಲಿ, ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸೂಕ್ತ ತನಿಖೆ ಮಾಡಿಸುತ್ತೇನೆ, ಅನುಮಾನಾಸ್ಪದ ಸಾವಿನ ಬಗ್ಗೆ ಸತ್ಯಾಂಶ ಹೊರ ಬರುತ್ತದೆ ಎಂದು ತಿಳಿಸಿದರು. ಶಾಸಕರು ವಸತಿ ಶಾಲೆಯಲ್ಲಿ ವಾರ್ಡನ್‌ ಇರಬೇಕಿತ್ತು. ಆದರೆ ಕರ್ತವ್ಯ ನಿರತ ಒಬ್ಬ ಶಿಕ್ಷಕಿ ಹಾಗೂ ಶುಶ್ರೂಶಕಿ ಇದ್ದಾರೆ. ಏಕೆ ವಾರ್ಡನ್‌ ಇರಲಿಲ್ಲ ಸಮಗ್ರ ತನಿಖೆ ನಡೆಸಿ ಎಂದಿದ್ದಾರೆ.

ಕುಪ್ಪಳ್ಳಿ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಗೆ 10 ಎಕರೆ ಜಮೀನು ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಈಗಾಗಲೇ 10 ಕೋಟಿ ಹಣ ಬಿಡುಗಡೆಯಾಗಿದೆ, ಇದರಲ್ಲಿ ಯಾವುದೇ ಅನುಮಾನ ಬೇಡ, ಅತಿ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗುತ್ತದೆ, ಅಲ್ಲಿಯವರೆಗೆ ಈ ವಸತಿ ಶಾಲೆಯನ್ನು ಮೇಲೂರು ಅಥವಾ ಎಲ್ಲಿ ಸೌಲಭ್ಯವಿದೆ ಅಲ್ಲಿಗೆ ವರ್ಗಾಯಿಸಿ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಯವರಿಗೆ ಸೂಚಿಸಿದ್ದಾರೆ.

ಒಲ್ಲದ ಹೆಂಡ್ತಿಯನ್ನು ಭೀಕರವಾಗಿ ಕೊಂದು ಕಥೆ ಕಟ್ಟಿದ ಗಂಡ : ಕೊನೆಗೂ ಸಿಕ್ಕಿಬಿದ್ದ

ಎಸ್ಪಿ ರಿಷ್ಯಂತ್‌ ಅವರು ವಿದ್ಯಾಥಿ ಗೌತಮ್‌ ಅನುಮಾನಾಸ್ಪದ ಸಾವಿನ ಬಗ್ಗೆ ಆತನ ಸ್ನೇಹಿತರ ಜತೆಯಲ್ಲಿ ಚರ್ಚಿಸಿದರು. ಸರ್ಕಲ್‌ ಇನ್‌ಸ್ಪೆಕ್ಟರ್‌ ಪಿ.ಕೆ. ರಾಜು, ತಹಸೀಲ್ದಾರ್‌ ಮಂಜುಳಾ, ಜಿಲ್ಲಾ ಹಿಂದುಳಿದ ವರ್ಗದ ಜಿಲಾಧಿಕಾರಿ ಬಿಂದ್ಯಾ, ಎಸ್‌ಐ ಚೇತನ್‌, ಮಾದಪ್ಪ, ತಾಲೂಕು ಬಿಸಿಎಂ ಅಧಿಕಾರಿ ಮಹೇಶ್‌, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅಶೋಕ್‌, ವಸತಿ ಶಾಲೆಯ ಪ್ರಾಂಶುಪಾಲ ಹೇಮಂತ್‌, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಧನಂಜಯ, ಜೆಡಿಎಸ್‌ ಮುಖಂಡರಾದ ಅನೀಫ್‌ಗೌಡ, ಗೌತಮ, ಗ್ರಾಪಂ.ಸದಸ್ಯ ತುಳಸಿ ರಾಮೇಗೌಡ, ಮೃತ ವಿದ್ಯಾರ್ಥಿಯ ಸಂಬಂಧಿಕರು, ಪೋಷಕರು ಇದ್ದರು.