Asianet Suvarna News Asianet Suvarna News

ಬೆಂಗಳೂರು: ಏರ್‌ಪೋರ್ಟ್‌ನಲ್ಲಿ ಜ.31 ರಿಂದ ಇಂದಿರಾ ಕ್ಯಾಂಟೀನ್‌ ಶುರು?

ಟ್ಯಾಕ್ಸಿ ಚಾಲಕರು ಸಲ್ಲಿಸಿದ್ದ ಬೇಡಿಕೆಯಂತೆ ಸರ್ಕಾರ ಬಿಬಿಎಂಪಿಗೆ ಎರಡು ಇಂದಿರಾ ಕ್ಯಾಂಟೀನ್ ನಿರ್ಮಿಸುವಂತೆ ಆದೇಶಿಸಿತ್ತು. ಪ್ರಿಕಾಸ್ಟ್ ಮಾದರಿಯಲ್ಲಿ ಸದ್ಯ ಒಂದು ಕ್ಯಾಂಟೀನ್ ಕಟ್ಟಡ ನಿರ್ಮಿಸಲಾಗುತ್ತಿದೆ. ₹1.30 ಕೋಟಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್‌ ಜತೆಗೆ ಅಡುಗೆ ಮನೆಯನ್ನೂ ಪ್ರಿಕಾಸ್ಟ್ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಕ್ಯಾಂಟೀನ್‌ಗೆ ವ್ಯಕ್ತವಾಗುವ ಸ್ಪಂದನೆ ಆಧರಿಸಿ ಮತ್ತೊಂದು ಕ್ಯಾಂಟೀನ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. 

Indira canteen to be start at the International Airport from January 31st in Bengaluru grg
Author
First Published Jan 26, 2024, 1:01 PM IST | Last Updated Jan 26, 2024, 1:01 PM IST

ಬೆಂಗಳೂರು(ಜ.26):  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕರು ಸೇರಿ ದಂತೆ ಸಾರ್ವಜನಿಕರಿಗೆ ಕಡಿಮೆ ಬೆಲೆ ಯಲ್ಲಿ ಆಹಾರ ದೊರೆಯಲು ನಿರ್ಮಿ ಸಲಾಗುತ್ತಿರುವ ಇಂದಿರಾ ಕ್ಯಾಂಟೀನ್ ಜ.31ರಂದು ಸಾಧ್ಯತೆಯಿದೆ. ಉದ್ಘಾಟನೆಗೊಳ್ಳುವ

ಟ್ಯಾಕ್ಸಿ ಚಾಲಕರು ಸಲ್ಲಿಸಿದ್ದ ಬೇಡಿಕೆಯಂತೆ ಸರ್ಕಾರ ಬಿಬಿಎಂಪಿಗೆ ಎರಡು ಇಂದಿರಾ ಕ್ಯಾಂಟೀನ್ ನಿರ್ಮಿಸುವಂತೆ ಆದೇಶಿಸಿತ್ತು. ಪ್ರಿಕಾಸ್ಟ್ ಮಾದರಿಯಲ್ಲಿ ಸದ್ಯ ಒಂದು ಕ್ಯಾಂಟೀನ್ ಕಟ್ಟಡ ನಿರ್ಮಿಸಲಾಗುತ್ತಿದೆ. ₹1.30 ಕೋಟಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್‌ ಜತೆಗೆ ಅಡುಗೆ ಮನೆಯನ್ನೂ ಪ್ರಿಕಾಸ್ಟ್ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಕ್ಯಾಂಟೀನ್‌ಗೆ ವ್ಯಕ್ತವಾಗುವ ಸ್ಪಂದನೆ ಆಧರಿಸಿ ಮತ್ತೊಂದು ಕ್ಯಾಂಟೀನ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಸದ್ಯ ಕ್ಯಾಂಟೀನ್ ಮತ್ತು ಅಡುಗೆ ಮನೆ ಯನ್ನು ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿನ 7ನೇ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇಂದಿರಾ ಕ್ಯಾಂಟೀನಲ್ಲಿ ಸಿರಿಧಾನ್ಯ ಊಟ: ಸಿಎಂ ಸಿದ್ದರಾಮಯ್ಯ

50 ಹೊಸ ಕ್ಯಾಂಟೀನ್ ನಿರ್ಮಾಣ ವಿಳಂಬ

ವಿಧಾನಸೌಧ, ಎಂಎಸ್ ಕಟ್ಟಡ ಸೇರಿದಂತೆ ಪ್ರಮುಖ ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣಗಳು, ಹೊಸ ವಾಡ್ ೯ಗಳಲ್ಲಿ ಹೊಸದಾಗಿ 50 ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೂ ಬಿಬಿಎಂಪಿ ಯೋಜಿಸಿದೆ. ಈ ಹಿಂದಿನ ನಿರ್ಧಾರದಂತೆ ಜ.26ರೊಳಗೆ 50 ಹೊಸ ಕ್ಯಾಂಟೀನ್‌ಗಳನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲು ಯೋಜಿಸಲಾಗಿತ್ತು. ಆದರೆ, ಅದಕ್ಕೆ ಯೋಜನೆ ಸೂಕ್ತ ರೀತಿಯಲ್ಲಿ ಕಾರ್ಯಗತಗೊಳ್ಳದ ಕಾರಣ ಫೆಬ್ರವರಿ ಅಂತ್ಯದೊಳಗೆ ಹೊಸ 50 ಕ್ಯಾಂಟೀನ್‌ಗಳನ್ನು ನಿರ್ಮಿಸಿ, ಜನರ ಸೇವೆಗೆ ನೀಡಲು ಬಿಬಿಎಂಪಿ ನಿರ್ಧರಿಸಿದೆ.

Latest Videos
Follow Us:
Download App:
  • android
  • ios