ಬೆಂಗಳೂರು [ಆ.11] : ರಾಜ್ಯದ ಬಡ ಜನರ ಹಸಿವು ನೀಗಿಸಲು ಆರಂಭವಾದ ಇಂದಿರಾ ಕ್ಯಾಂಟೀನ್ ಗೆ ಇದೀಗ ಕಂಟಕ ಎದುರಾಗಿದೆ. 

ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಸೂಚನೆ ಸಿಗದಿದ್ದಲ್ಲಿ ಆಗಸ್ಟ್ 15ಕ್ಕೆ ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚುವ ಸಂಭವವಿದೆ. 

ಇಂದಿರಾ ಕ್ಯಾಂಟೀನ್ ಟೆಂಡರ್ ಇದೇ ಆಗಸ್ಟ್ 15ಕ್ಕೆ ಮುಗಿಯಲಿದ್ದು, ಹೊಸ ಟೆಂಟರ್ ಗೆ ಅನುಮೋದನೆ ನೀಡದಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. 

ಬಿಬಿಎಂಪಿಗೆ ಹೊರೆಯಾದ ಇಂದಿರಾ ಕ್ಯಾಂಟೀನ್‌!

ಈಗಾಗಲೇ ನಾಲ್ವರು ಟೆಂಡರ್ ನಲ್ಲಿ ಭಾಗವಹಿಸಿದ್ದು,  ಆಗಸ್ಟ್ 15ಕ್ಕೆ  ಟೆಂಡರ್ ಪ್ರಕ್ರಿಯ ಫೈನಲ್ ಆಗುವುದು ಅನುಮಾನವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭವಾದ ಇಂದಿರಾ ಕ್ಯಾಂಟೀನ್ ಯೋಜನೆಗೆ ಬ್ರೇಕ್ ಬೀಳುತ್ತಾ ಎನ್ನುವ ಅನುಮಾನ ವ್ಯಕ್ತವಾಗಿದೆ.