ಈ ಬೋಯಿಂಗ್‌ನಿಂದ ಗ್ರಾಹಕರಿಗೆ ಆರಾಮದಾಯಕ ಪ್ರಯಾಣ ದೊರೆಯಲಿದೆ. ಇದಷ್ಟೇ ಅಲ್ಲದೆ, ಬೇರೆ ವಿಮಾನಗಳಂತೆ ಇದು ಹೆಚ್ಚು ಶಬ್ಧ ಮಾಡುವುದಿಲ್ಲ. ಶೇ.50ರಷ್ಟು ಕಡಿಮೆ ಶಬ್ಧ ಮಾಡಲಿದ್ದು, ಶಬ್ಧ ಮಾಲಿನ್ಯವನ್ನು ತಡೆಯಲಿದೆ: ಆಕಾಸ್‌ ಏರ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್‌ ದುಬೆ 

ಬೆಂಗಳೂರು(ಆ.03): ಭಾರತದಲ್ಲಿ ಮೊದಲ ಬಾರಿಗೆ ಕಡಿಮೆ ಹೊಗೆ ಹೊರಸೂಸುವ, ದೇಶದಲ್ಲೇ ಮೊದಲ ಪರಿಸರ ಸ್ನೇಹಿ ಬೋಯಿಂಗ್‌ ಹೊಂದಿರುವ 20ನೇ ವಿಮಾನವನ್ನು ಆಕಾಸ್‌ ಏರ್‌ಲೈನ್‌ ಮಂಗಳವಾರ ಪರಿಚಯಿಸಿದೆ.

ಈ ಕುರಿತು ಮಾತನಾಡಿದ ಆಕಾಸ್‌ ಏರ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್‌ ದುಬೆ, ಆಕಾಸ ವಿಮಾನಯಾನ ಪ್ರಾರಂಭಗೊಂಡ ಒಂದೇ ವರ್ಷದಲ್ಲಿ ತನ್ನ ವಿಮಾನಗಳ ಸಂಖ್ಯೆಯನ್ನು 20ಕ್ಕೆ ಹೆಚ್ಚಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಆಗಿದೆ. ಅಲ್ಲದೆ, ಮೊದಲ ಬಾರಿಗೆ ಬೋಯಿಂಗ್‌ 737 ಎಂಎಕೆ ವಿಮಾನ ಪಡೆದ ಸಂಸ್ಥೆಯೂ ನಮ್ಮದಾಗಿದೆ. ಈ ಬೋಯಿಂಗ್‌ನ ವಿಶೇಷತೆ ಎಂದರೆ. ಇದು ಸಾಮಾನ್ಯ ಎಂಜಿನ್‌ಗಿಂತ ಶೇ.20ರಷ್ಟು ಕಡಿಮೆ ಇಂಧನ ಉಗುಳಲಿದ್ದು, ಹೆಚ್ಚು ಪರಿಸರ ಸ್ನೇಹಿ ವಿಮಾನವಾಗಲಿದೆ. ಇಂಧನ ದಕ್ಷತೆಯನ್ನು ಸಹ ಇದು ಕಾಪಾಡಿಕೊಳ್ಳಲು ಹೆಚ್ಚು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ. 

ಬೆಂಗಳೂರು: ಆಕಾಸ ಏರ್‌ ವಿಮಾನಗಳಲ್ಲಿ ನಿತ್ಯ 13,000 ಮಂದಿ ಯಾನ

ಈ ಬೋಯಿಂಗ್‌ನಿಂದ ಗ್ರಾಹಕರಿಗೆ ಆರಾಮದಾಯಕ ಪ್ರಯಾಣ ದೊರೆಯಲಿದೆ. ಇದಷ್ಟೇ ಅಲ್ಲದೆ, ಬೇರೆ ವಿಮಾನಗಳಂತೆ ಇದು ಹೆಚ್ಚು ಶಬ್ಧ ಮಾಡುವುದಿಲ್ಲ. ಶೇ.50ರಷ್ಟು ಕಡಿಮೆ ಶಬ್ಧ ಮಾಡಲಿದ್ದು, ಶಬ್ಧ ಮಾಲಿನ್ಯವನ್ನು ತಡೆಯಲಿದೆ ಎಂದು ವಿವರಿಸಿದರು.