Asianet Suvarna News Asianet Suvarna News

3 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ, ಇಂದಿರಾ ಕ್ಯಾಂಟೀನ್‌ಗೆ ಉದ್ಘಾಟನೆ ಭಾಗ್ಯ

ರಾಜ್ಯದ ಹಲವು ಕಡೆ ಜನರು ಇಂದಿರಾ ಕ್ಯಾಂಟೀನ್ ಬಳಸುತ್ತಿದ್ದರೂ ಮಡಿಕೇರಿಯಲ್ಲಿ ಮಾತ್ರ ಇನ್ನು ಉದ್ಘಾಟನೆಯಾಗಬೇಕಷ್ಟೆ. ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕ್ಯಾಂಟೀನ್ ಕಾಮಗಾರಿ ಮುಗಿದು ಕೊನೆಗೂ ಉದ್ಘಾಟನೆ ಭಾಗ್ಯ ದೊರೆಯಲಿದೆ.

indiara canteen inauguration in kodagu
Author
Bangalore, First Published Dec 17, 2019, 9:48 AM IST

ಮಡಿಕೇರಿ(ಡಿ.17): ಕಳೆದ ಮೂರ ವರ್ಷಗಳಿಂದ ವಿರಾ​ಜ​ಪೇ​ಟೆ​ಯಲ್ಲಿ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟೀನ್‌ಗೆ ಕಾಯಕಲ್ಪ ದೊರೆತಿದ್ದು ಬುಧ​ವಾರ ಉದ್ಘಾಟನೆಗೆ ಸಿದ್ಧತೆಗಳು ನಡೆದಿವೆ.

ವಿಧಾನಸಭಾ ಚುನಾವಣೆಗೂ ಮೊದಲು ರಾಜ್ಯದ ಎಲ್ಲ ಜಿಲ್ಲೆಗಳು ತಾಲೂಕುಗಳ ಪ್ರಮುಖ ಕೇಂದ್ರಗಳಿಗೆ ಮಂಜೂರಾಗಿದ್ದ ಇಂದಿರಾ ಕ್ಯಾಂಟೀನ್‌ ವೀರಾಜಪೇಟೆಗೂ ಮಂಜೂರಾಗಿತ್ತು. ವಿರಾಜಪೇಟೆಗೆ ಇಂದಿರಾ ಕ್ಯಾಂಟೀನ್‌ ಮಂಜೂರಾಗಿದ್ದರೂ ಕ್ಯಾಂಟೀನ್‌ಗೆ ಸೂಕ್ತ ಜಾಗದ ಆಯ್ಕೆಗೆ ಸುಮಾರು ಎಂಟು ತಿಂಗಳ ಕಾಲಾವಕಾಶ ಬೇಕಾಯಿತು.

ಲಾಠಿ ಚಾರ್ಜ್: ಪ್ರತಿಭಟನಾಕಾರರನ್ನು ಹೊತ್ತುಯ್ದು ಬಸ್ಸಿಗೆ ಹತ್ತಿಸಿದ ಪೊಲೀಸರು..!

ವಿರಾ​ಜ​ಪೇ​ಟೆ-ಗೋಣಿ​ಕೊಪ್ಪ ರಸ್ತೆಯಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣದ ಮುಂಭಾಗದಲ್ಲಿರುವ ಸಾರಿಗೆ ಸಂಸ್ಥೆಗೆ ಸೇರಿದ ಖಾಲಿ ಜಾಗದಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಜಾಗ ಗೊತ್ತು ಪಡಿಸಲಾದರೂ ಸಾರಿಗೆ ಸಂಸ್ಥೆಯ ಪುತ್ತೂರು ಉಪ ವಿಭಾಗದ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರಿಂದ ಜಾಗ ಹಸ್ತಾಂತರಕ್ಕೆ ಹಾಗೂ ಅದೇ ಜಾಗದಲ್ಲಿದ್ದ ಭಾರಿ ಮರವೊಂದನ್ನು ಕೆಡವಲು ವಿವಾದದಿಂದ ಮತ್ತಷ್ಟುವಿಳಂಬವಾಯಿತು.

ಆಗಿನ ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಿಂದ ಜಾಗ ತೆರವು ಮಾಡಲಿದ್ದ ಎಲ್ಲ ಅಡೆ ತಡೆಗಳು ಅಂತಿಮಗೊಂಡ ನಂತರ 2018ರ ಏಪ್ರಿಲ್‌​ನಲ್ಲಿ ಆಗಿನ ಉಸ್ತುವಾರಿ ಸಚಿವ ಸೀತಾರಾಂ ಅವರಿಂದ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಯಿತು. 2019ರ ಡಿಸೆಂಬರ್‌ ಮೊದಲ ವಾರದಲ್ಲಿ ಇಂದಿರಾ ಕ್ಯಾಂಟೀನ್‌ ಕಟ್ಟಡದ ಕಾಮಗಾರಿ ಪೂರ್ಣಗೊಂಡ ಬಳಿಕ ಈಗ ಪ್ರಾರಂಭೋತ್ಸವ ನಡೆಯಲಿದೆ.

ಕೋಟಿ ರು.ವೆ​ಚ್ಚ:

ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್‌ 18ರಂದು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಲಿದ್ದು ಈ ಕ್ಯಾಂಟೀನ್‌ನಲ್ಲಿ ಊಟಕ್ಕೆ ರು. 10, ಬೆಳಗಿನ ಉಪಹಾರಕ್ಕೆ ರು. 5 ವಿಧಿಸಲಾಗುವುದು. 18ರಂದು ಬೆಳಗ್ಗೆ 10ಗಂಟೆಗೆ ಶಾಸಕ ಕೆ.ಜಿ.ಬೋಪಯ್ಯ ಈ ಕ್ಯಾಂಟೀನ್‌ನ್ನು ಉದ್ಘಾಟಿಸಲಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್‌ ತಿಳಿಸಿದ್ದಾರೆ.

'ಎಂಟಿಬಿಗೆ BJPಯಲ್ಲಿ ಸ್ಥಾನ ಮಾನ ಕೊಡಲು ಸಾಧ್ಯವೇ ಇಲ್ಲ'..!

ಇಂದಿರಾ ಕ್ಯಾಂಟೀನ್‌ಗೆ ಕುಡಿಯುವ ನೀರು ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಯಾಂಟೀನ್‌ ನಡೆಸುವ ಗುತ್ತಿಗೆದಾರರು ರಿಯಾಯಿತಿ ದರದಲ್ಲಿ ಆಹಾರ ಪೊರೈಸುವುದರೊಂದಿಗೆ ಕ್ಯಾಂಟಿನ್‌ ತಯಾರಿಸುವ ಪ್ರತಿ ದಿನದ ಮೆನುವನ್ನು ಕ್ಯಾಂಟಿನ್‌ನ ಮುಂದಿನ ಫಲಕದಲ್ಲಿ ಪ್ರಕಟಿಸಲು ಸೂಚನೆ ನೀಡಲಾಗಿದೆ ಎಂದು ಪಟ್ಟಣ ಪಂಚಾಯತಿ ​ಅ​ಭಿ​ಯಂತ​ರ ಎನ್‌.​ಪಿ.​ಹೇ​ಮ್‌​ಕು​ಮಾರ್‌ ತಿಳಿಸಿದ್ದಾರೆ.

-ಮಂಜುನಾಥ್‌ ಟಿ ಎನ್‌.

Follow Us:
Download App:
  • android
  • ios