ಕಳೆದ 25 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆಲಮಟ್ಟಿ-ಇಳಕಲ್ಲ-ಕುಷ್ಟಗಿ ನೂತನ ರೈಲು ಮಾರ್ಗದ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಮಾಜಿ ಶಾಸಕ ದೊಡ್ಡನಗೌಡ ಪಾಟೀಲರ ನೇತೃತ್ವದಲ್ಲಿ ಹೋರಾಟ ಸಮಿತಿಯು ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಿದ್ದು, ಸಚಿವರು ಶೀಘ್ರ ಮಂಜೂರಾತಿಗೆ ಭರವಸೆ ನೀಡಿದ್ದಾರೆ.
ಬಾಗಲಕೋಟೆ: ಕಳೆದ 25 ವರ್ಷಗಳಿಂದ ಆಲಮಟ್ಟಿ ಕೊಪ್ಪಳ ನೂತನ ರೈಲು ಮಾರ್ಗ ಮಂಜೂರ ಮಾಡುವಂತ್ತೆ ಕೇಂದ್ರ ಸರ್ಕಾರಕ್ಕೆ ಹಾಗೂ ರೈಲು ಸಚಿವರಿಗೆ ಮತ್ತು ಸಂಸದ ಪಿ.ಸಿ.ಗದ್ದಿಗೌಡರ ಇವರಿಗೆ ಇಳಕಲ್ಲ ಜನತೆ ಮನವಿ ಕೊಟ್ಟು ನೂತನ ರೈಲು ಮಾರ್ಗ ಮಂಜೂರ ಮಾಡಲು ದೇಹಲಿ ತನಕ ಹೋಗಿ ಒತ್ತಾಯಿಸಿತ್ತು ಆದರೆ ಕನ್ನಡಪ್ರಭ ಪತ್ರಿಕೆಯು ಯುವಕರು ಮುದಕರಾದರು ಇಳಕಲ್ಲಿಗೆ ರೈಲು ಬರಲೇ ಇಲ್ಲ ಎಂದು ಸುದ್ದಿಯನ್ನು ಈ ಹಿಂದೆ ಪ್ರಕಟಿಸಿತ್ತು.
ಆದರೆ ಅದಕ್ಕೂ ಸಂಸದರು, ಸಚಿವರು ಹಾಗು ಸರಕಾರ ನಿರಾಶೇ ಮಾಡಿದೆ ಆದರೆ ಈ ಹಿಂದೆ ಸರಕಾರ ಆಲಮಟ್ಟಿ ಇಳಕಲ್ಲ ಕುಷ್ಟಗಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಡಿಪಿಆರ್ ಮಾಡಿದೆ ಎಂದು ತಿಳಿದು ಬಂದಿತ್ತು.
ಕಾಮಗಾರಿ ಆರಂಭಕ್ಕೆ ಒತ್ತಾಯ
ಆದರೆ ಇಲ್ಲಿಯವರೆಗೂ ಈ ಕಾರ್ಯದ ಬಗ್ಗೆ ಎನು ಆಗದೆ ಇರುವದರಿಂದ ಇಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಇವರ ನೇತ್ರತ್ವದಲ್ಲಿ ಕೊಪ್ಪಳಕ್ಕೆ ಆಗಮಿಸಿದ ರಾಜ್ಯ ರೇಲ್ವೆ ಸಚಿವ ಸೋಮಣ್ಣ ಇವರಿಗೆ ಸಂಸದ ಪಿ.,ಸಿ.ಗದ್ದಿಗೌಡರ ಇವರ ಸಮ್ಮುಖದಲ್ಲಿ ರೇಲ್ವೆ ಹೋರಾಟ ಸಮಿತಿ ಮತ್ತೆ ಮನವಿ ಕೊಟ್ಟು ಆದಷ್ಟು ವೇಗವಾಗಿ ಈ ಭಾಗದ ರೃಲು ಕಾಮಗಾರಿಯನ್ನು ಮಂಜೂರ ಮಾಡಿಸಿ ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿತು.
ಮನವಿ ಸ್ತಿಕಾರ ಮಾಡಿದ ಸಚಿವ ಸೋಮಣ್ಣ ಇವರು ಈ ಭಾಗದ ಜನರ ತೊಂದರೆ ನನಗೆ ಅರಿವಾಗಿದೆ ಈ ವಿಷಯವನ್ನು ರೇಲ್ವೆ ಸಮಿತಿಯಲ್ಲಿ ಮಂಡಿಸಿ ಆದಷ್ಟು ತಿವ್ರವೆ ಮಂಜೂರ ಮಾಡುವದಾಗಿ ಭರವಸೆ ಕೊಟ್ಟರು. ಆದರೆ ಈ ಹಿಂದೆ ಗದಗ ಗಜೇಂದ್ರಗಡ ಇಳಕಲ್ಲ ಮುದಗಲ್ಲ ಹಾಗು ಲಿಂಗಸೂರ ದಿಂದ ವಾಡಿಗೆ ಹೋಗುವ ರೃಲು ಮಾರ್ಗ ಮಾಡುವ ಯೋಜನೆ ಇತ್ತು ಆದರೆ ಯಾರೋ ಮಾಡಿದ ತಪ್ಪನಿಂದ ಇಂದು ಆ ಮಾರ್ಗ ಬಾಣಾಪುರ ಕುಷ್ಟಗಿ ಆಗಿದೆ ಎಂದು ಜನತೆ ಆರೋಪಿಸುತಿದ್ದಾರೆ ಎಂದು ಸಚಿವರಿಗೆ ಜನತೆ ತಿಳಿಸಿದರು.
ಮನವಿ ಕೊಡುವ ಸಮಿತಿಯಲ್ಲಿ ರೈಲು ಹೋರಾಟ ಸಮಿತಿಯ ಅದ್ಯಕ್ಷ ಶರಣಪ್ಪ ಅಕ್ಕಿ, ಜಿ.ಪಿ.ಪಾಟೀಲ, ಎಂ.ವಿ.ಪಾಟೀಲ, ಟಿ.ಎಚ್.ಕುಲಕರ್ಣಿ, ಚೋಳಪ್ಪ ಇಚಿಡಿ, ಚಂದ್ರಶೇಖರ ಎಕಬೋಟೆ ಸೇರಿದಂತೆ ಇತರರು ಉಪಸ್ತಿತರಿದ್ದರು.


