ಹುಬ್ಬಳ್ಳಿ(ಮೇ.09): ಕಿಮ್ಸ್‌ನಲ್ಲಿ ಕೋವಿಡ್‌-19 ಸಂಬಂಧಿ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನಡೆಸಲು ಐಸಿಎಂಆರ್‌(ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌) ಅನುಮತಿ ನೀಡಿದೆ. ಈ ಮೂಲಕ ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಹುಬ್ಬಳ್ಳಿಯಲ್ಲಿ ಮಾತ್ರ ಪ್ಲಾಸ್ಮಾ ಥೆರಪಿಗೆ ಅವಕಾಶ ಸಿಕ್ಕಂತಾಗಿದೆ.

ಏನಿದು ಪ್ಲಾಸ್ಮಾ ಚಿಕಿತ್ಸೆ?: 

ಕೋವಿಡ್‌-19ರಿಂದ ಗುಣಮುಖರಾದವರ ದೇಹದ ರಕ್ತದಲ್ಲಿ ಪ್ರತಿರೋಧ ಕಣಗಳು ಸೃಷ್ಟಿ ಆಗಿರುತ್ತದೆ. ರೋಗದಿಂದ ಗುಣಮುಖರಾದವರ ದುಗ್ಧರಸ (ಪ್ಲಾ​ಸ್ಮಾ)ದಲ್ಲಿರುವ ಪ್ರತಿರೋಧ ಕಣಗಳನ್ನು ತೆಗೆದುಕೊಂಡು ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಸೋಂಕಿನಿಂದ ಗುಣಮುಖನಾದ ವ್ಯಕ್ತಿಯಿಂದ ಎರಡು ಡೋಸ್‌ನಷ್ಟು ಪ್ರತಿರೋಧ ಕಣಗಳನ್ನು ತೆಗೆದು ಒಬ್ಬ ರೋಗಿಗೆ ಒಂದು ಡೋಸ್‌ನಂತ ಇಬ್ಬರಿಗೆ ನೀಡಲಾಗುತ್ತದೆ. ಹೀಗೆ ಒಬ್ಬ ಸೋಂಕಿತ ಗುಣಮುಖ ವ್ಯಕ್ತಿಯಿಂದ ಇಬ್ಬರು ರೋಗಿಗಳಿಗೆ ಪ್ರತಿರೋಧ ಕಣಗಳನ್ನು ನೀಡಿ ಗುಣಪಡಿಸಬಹುದು.

ಪ್ಲಾಸ್ಮಾ ಚಿಕಿತ್ಸೆಗೆ ಒಬ್ಬ ರೋಗಿಯೂ ಸಿಗುತ್ತಿಲ್ಲ!

ಬೆಂಗಳೂರಲ್ಲಿ ಪ್ಲಾಸ್ಮಾ ಥೆರಪಿಗೆ ಈಗಾಗಲೇ ಅನುಮತಿ ಸಿಕ್ಕಿದ್ದರೆ ದುಗ್ಧರಸದ ಪ್ರತಿರೋಧ ಕಣಗಳನ್ನು ತೆಗೆದುಕೊಂಡಿಟ್ಟಿದ್ದರೂ ಈವರೆಗೂ ಸೂಕ್ತ ರೋಗಿ ಸಿಗದ ಕಾರಣ ಈ ಪ್ರಯೋಗ ಇನ್ನೂ ನಡೆಸಲು ಸಾಧ್ಯವಾಗಿಲ್ಲ.