Asianet Suvarna News Asianet Suvarna News

'ಹಿಂದೂ- ಮುಸ್ಲಿಮರು ಒಂದಾದ್ರೆ ಭಾರತ ಬಲಾಢ್ಯ'

*   ಭಾರತದಲ್ಲಿ ಎಲ್ಲ ಜಾತಿಯವರು ಬದುಕುತ್ತಾರೆ, ಇಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಭಾರತೀಯರೇ
*   ಯಾವ ಧರ್ಮವೂ ವೈರತ್ವವನ್ನು ತಿಳಿಸಿಕೊಡುವುದಿಲ್ಲ
*   ಟಿಪ್ಪು ಸುಲ್ತಾನ್‌ ಅಖಂಡ ಭಾರತದ ಕನಸುಗಾರ
 

India Will be Strong If Hindu Muslims Are One Says Moulana Jakriya grg
Author
Bengaluru, First Published Nov 15, 2021, 1:40 PM IST
  • Facebook
  • Twitter
  • Whatsapp

ಮಹಾಲಿಂಗಪುರ(ನ.15):  ಭಾರತ(India) ದೇಶದಲ್ಲಿ ಹಿಂದೂ(Hindu) ಮುಸ್ಲಿಮರು(Muslim) ಒಂದಾಗಿ ನಡೆದರೆ ನಮ್ಮ ದೇಶವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟೆಏಕೆ ದುಷ್ಕರ್ಮಿಗಳು ನಮ್ಮ ದೇಶವನ್ನು ಕಣ್ಣೆತ್ತಿ ನೋಡಲು ಸಾಧ್ಯವಿಲ್ಲ ಎಂದು ಮೌಲಾನಾ ಜಕ್ರಿಯಾ(Moulana Jakriya) ಹೇಳಿದರು.

ಶುಕ್ರವಾರ ಬೆಳಗ್ಗೆ ಪಟ್ಟಣದ ಮೊಹಮ್ಮದಿಯಾ ಅಂಜುಮನ್‌ ಕಮಿಟಿ ಕಚೇರಿಯಲ್ಲಿ ಮುಸ್ಲಿಮರು ಏರ್ಪಡಿಸಿದ್ದ ಸರ್‌ ಅಲ್ಲಾಮಾ ಮೊಹಮ್ಮದ ಇಕ್ಬಾಲ್‌, ಹಜರತ ಟಿಪ್ಪು ಸುಲ್ತಾನ(Tipu Sultan), ಡಾ. ಮೌಲಾನಾ ಅಬುಲ್‌ ಕಲಾಂ(Dr Moulana Abul Kalam Azad) ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

Bitcoin Scam| ಸಿಎಂ ಬೊಮ್ಮಾಯಿ ಬಿಜೆಪಿ ನಾಯ​ಕರ ಹೆಸರು ಹೇಳಲಿ: ಸಿದ್ದ​ರಾ​ಮ​ಯ್ಯ

ನಾವು ಇಂಥ ಮಹಾತ್ಮರ ಜಯಂತಿ(Jayanti)  ಆಚರಣೆಗಳನ್ನು ಮಾಡುವುದು, ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನವು ದೃಷ್ಟಿಯಿಂದ ಮಾತ್ರ. ಭಾರತದಲ್ಲಿ ಎಲ್ಲ ಜಾತಿಯವರು ಬದುಕುತ್ತಾರೆ. ಇಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಭಾರತೀಯರೇ. ಹಿಂದೂ ಮುಸ್ಲಿಮರು ಒಂದಾಗಿರುವ ತನಕ ಭಾರತ ಯಾರ ಗುಲಾಮರಾಗಿರುವುದಿಲ್ಲ. ನಮ್ಮ ದೇಶವನ್ನು ಒಡೆಯುವ ತಾಕತ್ತು ಯಾರಿಗೂ ಬರುವುದಿಲ್ಲ. ಟಿಪ್ಪು ಸುಲ್ತಾನರು ಬರೀ ಬ್ರಿಟಿಷರಿಗೆ(British) ಸಹಾಯ ಮಾಡುವ ಜನರನ್ನು ದ್ವೇಷಿಸಿದರೆ ಹೊರತು. ನಮ್ಮ ದೇಶದ ಉಳಿವಿಗಾಗಿ ಹೋರಾಟ ಮಾಡುವವರನ್ನಲ್ಲ. ಒಟ್ಟು ಬ್ರಿಟಿಷರನ್ನು ಭಾರತದಿಂದ ಹೊರ ಓಡಿಸಬೇಕು ಎನ್ನವುದು ಟಿಪ್ಪುವಿನ ಗುರಿಯಾಗಿತ್ತು ಎಂದರು.

ಕನ್ನಡದ(Kannada)  ಕಬೀರ ಇಬ್ರಾಹಿಂ ಸುತಾರ ಮಾತನಾಡಿ, ಟಿಪ್ಪು ಸುಲ್ತಾನರು ಅಖಂಡ ಭಾರತದ ಕನಸುಗಾರರು. ಟಿಪ್ಪು ಸುಲ್ತಾನರ ವೈರತ್ವ ಭಾರತದೊಳಗಿರುವ ಸಂಸ್ಥಾನಿಗಳ ಜೊತೆ ಅಲ್ಲ. ನಮ್ಮನ್ನು ಒಡೆದು ಆಳುವ ನೀತಿ ಬಳಸಿದ ಬ್ರಿಟಿಷರನ್ನು ಹೊಡೆದು ಓಡಿಸುವುದೇ ಅವರ ಜೀವನದ ಉದ್ದೇಶವಾಗಿತ್ತು. ಟಿಪ್ಪು ಬ್ರಿಟಿಷರ ವಿರುದ್ಧ ಸೋತರೆ ಅದು ಅವರ ಸೋಲಲ್ಲ, ಗೆಲುವಿನ ಹಾದಿಯಾಗಿತ್ತು. ನಮ್ಮವರನ್ನು ನಂಬಿಯೇ ನಾವು ಹಾನಿಗೊಳಗಾಗಿದ್ದೇವೆ. ಟಿಪ್ಪು ಸುಲ್ತಾನರನ್ನು ಸಮರ್ಥರನ್ನಾಗಿ ಮಾಡಬೇಕೆಂದು ಅವರ ತಂದೆ ಹೈದರಲ್ಲಿ ಸರ್ವ ಧರ್ಮ ಸಮನ್ವಯಿ ನನ್ನ ಮಗ ಆಗಬೇಕು ಎಂದು ಎಲ್ಲ ಗ್ರಂಥಗಳನ್ನು ಅಧ್ಯಯನ ಮಾಡಿಸಿದ್ದರು. ಭಾರತವನ್ನು ಬೇರೆ ದೇಶದವರಿಗೆ ಆಳಲು ಬಿಡುವುದಿಲ್ಲ ಎನ್ನುವ ಮನೋಭಾವ ಟಿಪ್ಪುರದ್ದು. ಕಾರಣ ಇಂಥ ಮಹಾತ್ಮರು ನಡೆದು ಹೋದ ಹಾದಿಯಲ್ಲಿ ನಾವು ಬದುಕಬೇಕು, ಯಾವ ಧರ್ಮವು(Religion) ವೈರತ್ವವನ್ನು ತಿಳಿಸಿಕೊಡುವುದಿಲ್ಲ. ಆದ್ದರಿಂದ ನಾವು ನಮ್ಮ ಧರ್ಮವನ್ನು ನಮ್ಮ ಜೊತೆಗಿಟ್ಟು ನಮ್ಮ ಸ್ನೇಹವನ್ನು ಮಾತ್ರ ಎಲ್ಲರ ಜೋತೆಗೆ ಹಂಚಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಇದಕ್ಕೂ ಮುನ್ನ ಅಲ್ಲಮ ಇಕ್ಬಾಲ್‌, ಟಿಪ್ಪು ಸುಲ್ತಾನ, ಡಾ. ಮೌಲಾನಾ ಅಬುಲ್‌ ಕಲಾಂ ಇವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಆಚರಣೆ ಮಾಡಿದರು. ಶಿಕ್ಷಕ ಎ.ಎನ್‌. ತಿಮ್ಮಾಪೂರ ಮೂರು ಜನ ಮಹಾತ್ಮರ ಜೀವನ ಚರಿತ್ರೆ ಮತ್ತು ಅವರು ಈ ದೇಶಕ್ಕೆ ಬಿಟ್ಟು ಹೋದ ಕೊಡುಗೆ, ತತ್ವಾದರ್ಶದ ಬಗ್ಗೆ ಶಾಲಾ ಮಕ್ಕಳಿಗೆ, ಗಣ್ಯರಿಗೆ ತಿಳಿಸಿದರು.

Karnataka Politics| 'ಬಿಜೆಪಿಯವರೇ ದಲಿತರ ಪರವಾಗಿಲ್ಲ'

ಕಾಂಗ್ರೆಸ್‌(Congress) ಮುಖಂಡ ಎಸ್‌.ಎಂ. ಉಳ್ಳೆಗಡ್ಡಿ, ರಾಜ್ಯ ರೈತ ಸಂಘದ ಸಂಚಾಲಕ ಗಂಗಾಧರ ಮೇಟಿ ಮಾತನಾಡಿ, ಯಾರು ಈ ದೇಶದಲ್ಲಿ ಹುಟ್ಟಿರುತ್ತಾರೆ ಅವರಿಗೆ ಈ ದೇಶದ ಉಳಿವಿಗಾಗಿ ಹೋರಾಟ ಮಾಡುವ ಹಕ್ಕಿದೆ. ರಾಜಕಾರಣದ(Politics) ಹಿತಾಸಕ್ತಿಯಿಂದ ಜಾತಿ, ಜಾತಿಯಲ್ಲಿ ಭೇದ ಭಾವ ತರಸಿ, ಜಾತಿಗಳಲ್ಲಿ ದ್ವೇಶಭಾವನೆ ಬಿತ್ತುತ್ತಿದ್ದಾರೆ. ಎಲ್ಲರೂ ನಾಗರಿಕರಾದಾಗ ಮಾತ್ರ ನಮ್ಮ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಸಜನಸಾಬ ಪೆಂಡಾರಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಜಾವೇದ ಭಾಗವಾನ, ಸೈಯದ ಯಾದವಾಡ, ಜಮೀರ ಯಕ್ಷಂಬಿ, ನಜೀರ ಅತ್ತಾರ, ಎ.ಐ.ಮುಜಾವರ, ಗಣಿ ಸನದಿ, ಸಲಿಂ ಕರೋಶಿ, ಯಾಸೀನ ಅತ್ತಾರ, ಬಂದು ಸಿಂದಗಿ, ಇಲಾಯಿ ಬಳಗಾರ, ಗೈಬು ಪೆಂಡಾರಿ, ಬಾಬು ಸನದಿ, ಎಸ್‌.ಡಿ ಖಾಜಿ, ರಸುಲ ಪೆಂಡಾರಿ, ಎಸ್‌.ಕೆ. ಪೆಂಡಾರಿ, ದಾವಲ ನಗಾರ್ಜಿ, ರಜಾಕ ಜಮಖಂಡಿ, ಯಾಸೀನ ಪಾಂಡು ಸೇರಿದಂತೆ ಹಲವರು ಇದ್ದರು. ನಜೀರ ಝಾರೆ ಸ್ವಾಗತಿಸಿದರು. ಮೀರಾ ತಟಗಾರ ನಿರೂಪಿಸಿ, ವಂದಿಸಿದರು.
 

Follow Us:
Download App:
  • android
  • ios