ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿರುವ ಭಾರತ

ಸರ್ಕಾರದ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಕೇಂದ್ರ ರೇಷ್ಮೆ ಸಂಶೋಧನೆ  ಮತ್ತು ತರಬೇತಿ ಸಂಸ್ಥೆಯಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ಮತ್ತು ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

India is progressing in every field snr

 ಮೈಸೂರು :  ಸರ್ಕಾರದ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಕೇಂದ್ರ ರೇಷ್ಮೆ ಸಂಶೋಧನೆ  ಮತ್ತು ತರಬೇತಿ ಸಂಸ್ಥೆಯಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ಮತ್ತು ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ಡಾ.ಎಸ್. ಗಾಂಧಿ ದಾಸ್ ಉದ್ಘಾಟಿಸಿ, ಸರ್ಕಾರದ ಸ್ವಚ್ಛತಾ ಹಿ ಸೇವಾ ಅಭಿಯಾನದ ಪ್ರತಿಜ್ಞೆಯನ್ನು ಬೋಧಿಸಿದರು. ಇದೇ ವೇಳೆ ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ನಾಲ್ವರು ಪೌರ ಕಾರ್ಮಿಕರನ್ನು ಗೌರವಿಸಲಾಯಿತು.

ನಂತರ ಡಾ.ಎಸ್. ಗಾಂಧಿ ದಾಸ್ ಮಾತನಾಡಿ, ಬ್ರಿಟಿಷರು ದೇಶವನ್ನು ಲೂಟಿ ಮಾಡಿದ್ದಾರೆ ಮತ್ತು ಭಾರತೀಯ ಸಂಸ್ಕೃತಿಯನ್ನು ಟೀಕಿಸುವ ಮೂಲಕ ಅವರ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸಿದರು. ಅಂದಿನಿಂದ ಅವರು ಭಾರತದಲ್ಲಿನ ಬಯಲು ಮೂತ್ರ ವಿಸರ್ಜನೆ ಮತ್ತು ಮಲವಿಸರ್ಜನೆಯನ್ನು ಟೀಕಿಸಿದ್ದರು. ಆದರೆ, ಇಂದು ಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದ್ದು, ಸರ್ಕಾರ ಸ್ವಚ್ಛತಾ ಪ್ರಚಾರ ಮಾಡುತ್ತಿದೆ ಎಂದರು.

ಈ ನಿಟ್ಟಿನಲ್ಲಿ ಸಿಎಸ್ಆರ್ ಟಿಐ ಗೋಪಾಲಪುರ ಗ್ರಾಮವನ್ನು ದತ್ತು ಪಡೆದು, ಆ ಗ್ರಾಮಕ್ಕೆ ಅವಶ್ಯಕ ಸ್ವಚ್ಛತಾ ಸಾಮಗ್ರಿಗಳನ್ನು ಸರಬರಾಜು ಮಾಡಿ ಗ್ರಾಮಸ್ಥರಲ್ಲಿ ಮತ್ತು ಶಾಲಾ ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಅವರು ಹೇಳಿದರು.

ದೊಡ್ಡವರಿಂದಲೆ ತೆರಿಗೆ ವಸೂಲಿ ಕಷ್ಟ

ಬೆಂಗಳೂರು (ಆ.05): ತೆರಿಗೆ ಕಾನೂನುಗಳು ಸರಳವಾದಷ್ಟು ಸಾಮಾನ್ಯರಿಗೆ ಅನುಕೂಲವಾಗಲಿದ್ದು, ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೆ, ದೇಶ ಅಭಿವೃದ್ಧಿ ಆಗುತ್ತಿದೆ ಎಂದರ್ಥ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ತೆರಿಗೆ ಸಲಹೆಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಆರ್ಥಿಕ ಬೆಳವಣಿಗೆ ಹೊಂದಲ ಬಯಸುತ್ತಾನೆ. ನಾನು ಹಣಕಾಸು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ನಾನು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮನಸು ಮಾಡಿದರೆ ಯಾವುದು ಕಷ್ಟವಲ್ಲ ಎಂದು ಯೋಚಿಸಿ ಕಾರ್ಯ ಪ್ರವೃತ್ತನಾದೆ. ಮೂರು ತಿಂಗಳಲ್ಲಿ ಶೇ.70 ರಷ್ಟು ಆದಾಯ ಹೆಚ್ಚಳ ಮಾಡಿದೆ. ರಾಜ್ಯದ ಆದಾಯ ಹೆಚ್ಚಿಸಿ ಎರಡು ವರ್ಷದ ಅವಧಿಯಲ್ಲಿ ಸರಪ್ಲಸ್ ಬಜೆಟ್ ಮಂಡನೆ ಮಾಡಿದೆ. ಈಗಿನ ಸರ್ಕಾರ ಉಚಿತ ಯೋಜನೆಗಳಿಗೆ ಹೆಚ್ಚಿನ ಹಣ ವೆಚ್ಚ ಮಾಡುತ್ತಿದ್ದು, ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತದೆ ಎಂದು ಹೇಳಿದರು.

ಕುಮಾರಸ್ವಾಮಿ ಹೊಸ ಬಾಂಬ್‌: 15 ಪರ್ಸೆಂಟ್‌ ಕಮೀಷನ್‌ ಆಧಾರದಲ್ಲಿ ಬಿಬಿಎಂಪಿ 710 ಕೋಟಿ ರೂ. ಹಣ ಬಿಡುಗಡೆ

ಆರಂಭದಲ್ಲಿ ವಿರೋಧಿಸಿದ್ದ ಜಿಎಸ್‌ಟಿ ಈಗ ಎಲ್ಲರಿಗೂ ಒಪ್ಪಿತ: ರಾಜ್ಯದ ಆರ್ಥಿಕತೆ ಹೆಚ್ಚಿಸಲು ಸಹಕಾರ ನೀಡಿದ  ತೆರಿಗೆದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ.‌ ಆರ್ಥಿಕತೆ ಬೆಳವಣಿಗೆಯಲ್ಲಿ ತೆರಿಗೆದಾರರ ಪಾತ್ರ ಮಹತ್ವದ್ದಾಗಿದೆ. ಅಂತಿಮವಾಗಿ ದೇಶದ ಅಭಿವೃದ್ಧಿ ಆಗಬೇಕು. ಅದರಲ್ಲಿ ತೆರಿಗೆದಾರರ ಪಾತ್ರ ಮುಖ್ಯವಾಗಿದೆ‌. ಆರ್ಥಿಕತೆ ಯಾವುದೇ ಒತ್ತಡವಿಲ್ಲದೇ ಬೆಳೆಯುವಂತಾಗಬೇಕು. ಆದಾಗ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರ  5 ಟ್ರಿಲಿಯನ್ ಡಾಲರ್ ಗುರಿ ಮುಟ್ಟುವ‌ ಕನಸು  ಸಾಧ್ಯವಾಗಲಿದೆ. ಆರಂಭದ ದಿನಗಳಲ್ಲಿ ಬಹುತೇಕರು ಜಿಎಸ್ ಟಿ ಯನ್ನು ವಿರೋಧಿಸಿದ್ದರು. ಆದರೆ, ಈಗ ಎಲ್ಲರು ಒಪ್ಪಿಕೊಂಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ‌ ಎಂದು ತಿಳಿಸಿದರು.

ದೊಡ್ಡವರಿಂದ ತೆರಿಗೆ ವಸೂಲಿ ಕಷ್ಟ: ಒಂದು ದೇಶದ ಜಿಡಿಪಿಯನ್ನು ಅಳೆಯುವುದು ಹೇಗೆ ಎನ್ನುವುದು ಪ್ರಶ್ನೆ, ಆರ್ಥಿಕ ತಜ್ಞರು ಜಿಡಿಪಿಯನ್ನು ಕ್ಲಿಷ್ಟಮಯಗೊಳಿಸುತ್ತಾರೆ‌. ಕೆಲವರಿಗೆ ಕಾನೂನಿನ ಅರಿವಿಲ್ಲದೆ ತೆರಿಗೆ ಕಟ್ಟದೇ ಉಳಿಯುತ್ತಾರೆ.‌ ಕೆಲವರಿಗೆ ಕಾನೂನಿನ ಮಾಹಿತಿ ಇದ್ದರೂ ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸಣ್ಣವರು ಹೆಚ್ಚು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾರೆ. ಅವರಿಗೆ 1,000 ರೂಪಾಯಿ ಹೆಚ್ಚಿಗೆ ತೆರಿಗೆ ಕಟ್ಟಿ ಎಂದರೆ ಕಟ್ಟುತ್ತಾರೆ. ಆದರೆ, ದೊಡ್ಡವರಿಗೆ ಒಂದು ಕೋಟಿ ರೂ.‌ ತೆರಿಗೆ ಹೆಚ್ಚಳವಾದರೆ ಅವರಿಂದ ತೆರಿಗೆ ಸಂಗ್ರಹ ಮಾಡುವುದಕ್ಕೆ ಚಾಲೆಂಜ್ ಎದುರಾಗುತ್ತದೆ ಎಂದು ಹೇಳಿದರು. 

ತೆರಿಗೆ ಕಾನೂನುಗಳು ಸರಳ ಆಗಿರಬೇಕು: ತೆರಿಗೆ ಕಾನೂನುಗಳು ಸರಳವಾಗಬೇಕು. ದೇಶದ ಆರ್ಥಿಕತೆಯನ್ನು ತೆರಿಗೆ ಸಂಗ್ರಹದ ಮೂಲಕ ಅಳೆಯಲಾಗುವುದು. ತೆರಿಗೆ ಸಂಗ್ರಹ ಹೆಚ್ಚಾದರೆ ದೇಶ ಅಭಿವೃದ್ಧಿ ಯಾಗುತ್ತಿದೆ ಎಂದು ಅರ್ಥ. ಆಡಳಿತ ನಡೆಸುವವರು ಕಾನೂನು ಜಾರಿ ಮಾಡುತ್ತೇವೆ. ಅದನ್ನು ಅರ್ಥ ಮಾಡಿಕೊಂಡು, ಜಾರಿಗೆ ತರುವ ಕೆಲಸವನ್ನು ತೆರಿಗೆ ಸಲಹೆಗಾರರು ಮಾಡುತ್ತಿದ್ದು, ತೆರಿಗೆ ಸಲಹೆಗಾರರು ಸರ್ಕಾರದ ಭಾಗವಾಗಿದ್ದು, ವ್ಯಾಪಾರಿ ಸಮುದಾಯದ ಭಾಗವಾಗಿಯೂ ಕೆಲಸ ಮಾಡುತ್ತಿದ್ದು, ದ್ವಿಪಾತ್ರ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು. 

ರೇಷ್ಮೆ ಕೃಷಿ ತ್ಯಾಜ್ಯವನ್ನು ನಿರ್ವಹಿಸಲು ಸಿಎಸ್‌ಆರ್‌ ಟಿಐ ವಿಜ್ಞಾನಿಗಳು ಅದರ ಬಳಕೆ ಮತ್ತು ದ್ವಿ ಉತ್ಪನ್ನ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸಂಸ್ಥೆಯ ಆವರಣದ ಮುಂದೆ ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನ ನಡೆಸಲಾಯಿತ್ತು. ಒಪಿಎನ್ ಸಿಂಗ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಸಂಸ್ಥೆಯ ಹಿರಿಯ ವಿಜ್ಞಾನಿಗಳಾದ ಡಾ.ಕೆ.ಬಿ. ಚಂದ್ರಶೇಖರ್, ಡಾ.ಆರ್. ಭಾಗ್ಯ, ಡಾ.ಎಂ.ಕೆ. ರಘುನಾಥ್ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios