Semiconductor Fabrication Unit ಮೈಸೂರಿನಲ್ಲಿ ದೇಶದ ಮೊದಲ ಯೂನಿಟ್, 23 ಕೋ ಬಂಡವಾಳ!
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದೇಶದಲ್ಲೇ ಮೊಟ್ಟ ಮೊದಲ ಎಲೆಕ್ಟ್ರಾನಿಕ್ ಉಪಕರಣಗಳ ತಯಾರು ಮಾಡುವ (ಮೈಕ್ರೋಚಿಪ್) ಸೆಮಿ ಕಂಡಕ್ಟರ್ ಕೋರ್ ಯೂನಿಟ್ ಆರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣನ್ಯೂಸ್
ಮೈಸೂರು(ಮೇ.3): ಇದು ದೇಶದಲ್ಲೇ ಆರಂಭ ಆಗುತ್ತಿವರು ಮೊದಲ ಉತ್ಪಾದನಾ ಘಟಕ. ಭಾರತ ಸರ್ಕಾರ ಇಸ್ರೇಲ್ (Israel) ದೇಶದೊಂದಿಗೆ ಮಾಡಿಕೊಂಡ ಒಪ್ಪಂದದ ಫಲ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಈ ಘಟಕ ಸ್ಥಾಪನೆ ಆಗಲು ಸಾಧ್ಯವಾಗಿದೆ. ಇದರೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 10 ಸಾವಿರ ಮಂದಿಗೆ ಉದ್ಯೋಗ ಲಭಿಸುವ ಭಾಗ್ಯ ಬಂದಿದೆ.
ಹಲವು ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆದಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು (Mysuru) ನಗರದಲ್ಲಿ ದೇಶದಲ್ಲೇ ಮೊಟ್ಟ ಮೊದಲ ಎಲೆಕ್ಟ್ರಾನಿಕ್ ಉಪಕರಣಗಳ ತಯಾರು ಮಾಡುವ (ಮೈಕ್ರೋಚಿಪ್) ಸೆಮಿ ಕಂಡಕ್ಟರ್ ಕೋರ್ ಯೂನಿಟ್ (semiconductor fabrication unit) ಆರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ಸಾಂಸ್ಕೃತಿಕ ನಗರಿ, ಸ್ವಚ್ಚ ನಗರಿ ಮೈಸೂರಿಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.
ಭಾರತ ಹಾಗೂ ಇಸ್ರೇಲ್ ನಡುವೆ ಪರಸ್ಪರ ಒಪ್ಪಂದವಾಗಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮೊದಲ ಸೆಮಿಕಂಡಕ್ಟರ್ ಯೂನಿಟ್ ಸ್ಥಾಪನೆಯಾಗಲಿದೆ. ಬದಲಾದ ಕಾಲಕ್ಕೆ ತಕ್ಕಂತೆ ಹೊಸ ಹೊಸ ಉಪಕರಣಗಳನ್ನು ತಯಾರುಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ರಾಜ್ಯದ ಯುವ ಸಮೂಹ ಸಿದ್ಧವಾಗುತ್ತಿದೆ. ಇದು ನೇರವಾಗಿ ಎಂಜಿನಿಯರಿಂಗ್ ಓದಿದ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ.
KOLARA ಬಸವ ಜಯಂತಿ ಆಚರಣೆಯಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ
ನೇರವಾಗಿ 2 ಸಾವಿರ, ಪರೋಕ್ಷವಾಗಿ 10 ಸಾವಿರ ಮಂದಿಗೆ ಉದ್ಯೋಗ: ಇನ್ನು ಇಸ್ರೇಲ್‌ನ ಐಎಸ್ಎಂಸಿ ಅನಲಾಗ್ ಫ್ಯಾಬ್ ಕಂಪನಿ ಸ್ಥಾಪಿಸಲು ಮೈಸೂರಿನಲ್ಲಿ 150 ಎಕರೆ ಜಾಗ ಬೇಕಿದೆ. ಒಟ್ಟು ಬಂಡವಾಳ 23 ಕೋಟಿಗಳಷ್ಟಿದ್ದು, 6 ತಿಂಗಳಲ್ಲಿ ಯೋಜನೆ ಕಾರ್ಯಾರಂಭ ಗುರಿ ಇದೆ. ಮೈಸೂರಿನಲ್ಲಿ ಯೂನಿಟ್ ಸ್ಥಾಪನೆಯಿಂದ ಈ ಭಾಗದ 2 ಸಾವಿರ ಜನರಿಗೆ ನೇರ ಉದ್ಯೋಗ ಸಿಗಲಿದ್ದು, ಪರೋಕ್ಷವಾಗಿ 10 ಸಾವಿರ ಮಂದಿ ನೆರವು ಪಡೆಯಲಿದ್ದಾರೆ ಎನ್ನಲಾಗಿದೆ.
ಎಲೆಕ್ಟ್ರಾನಿಕ್ ಬಿಡಿ ಭಾಗಗಳನ್ನು ತಯಾರು ಮಾಡಲು ಕಚ್ಚಾ ವಸ್ತುಗಳು ದೊರೆಯುವುದೇ ಸೆಮಿ ಕಂಡಕ್ಟರ್ ಯೂನಿಟ್ ನಿಂದ. ಇಂತಹ ಯೂನಿಟ್ ಮೈಸೂರಿನಲ್ಲಿ ಆರಂಭ ಮಾಡುವುದರಿಂದ ಬೇರೆಯವರನ್ನು ದೇಶವು ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಇತರರ ಆಶ್ರಯ ಬೇಡುವುದು ತಪ್ಪುತ್ತದೆ. ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್, ಆಟೋಮೊಬೈಲ್, ಸಿಸಿಟಿವಿ ಉತ್ಪಾದನೆಗೆ ಕಚ್ಚಾ ಪದಾರ್ಥಗಳು ಸೆಮಿ ಕಂಡಕ್ಟರ್ ಯೂನಿಟ್‌ನಿಂದ ಸಿಗಲಿವೆ.
ಇನ್ನು ಸೆಮಿ ಕಂಡಕರ್ ಕೋರ್ ಯೂನಿಟ್ ಘಟಕ ಆರಂಭಿಸಲು ಅಕ್ಕಪಕ್ಕದ ರಾಜ್ಯಗಳು ಇನ್ನಿಲ್ಲದ ಪ್ರಯತ್ನ ನಡೆಸಿದ್ದವು. ಆದರೂ ಅವೆಲ್ಲವನ್ನು ಮೀರಿ ಕರ್ನಾಟಕ ಈ ಯೋಜನೆ ಪಡೆಯಲು ಸಫಲವಾಗಿದೆ. ಅದರಲ್ಲೂ ಐಟಿ ಹಬ್ ಅನ್ನು ಬೆಂಗಳೂರಿಂದಾಚೆಗೆ ವಿಸ್ತರಿಸುವ ರಾಜ್ಯ ಸರ್ಕಾರದ ಕಣ್ಣಿಗೆ ಮೈಸೂರು ಮುಂಚೂಣಿಯಲ್ಲಿ ಕಂಡಿದೆ. ಘಟಕಕ್ಕೆ ಬೇಕಾದ ನೀರು, ವಿದ್ಯುತ್, ರಸ್ತೆ, ರೈಲು, ವಿಮಾನ ಈಗೆ ಎಲ್ಲಾ ಸೇವೆಗಳು ಮೈಸೂರಿನಲ್ಲಿ ಹೇರಳವಾಗಿವೆ. ಇದರ ಜೊತೆಗೆ ಇನ್ಫೋಸಿಸ್, ವಿಪ್ರೋ, ಎಲ್ ಅಂಡ್ ಟಿಯಂತಹ ಎಂಎನ್‌ಸಿ ಕಂಪೆನಿಗಳು ಇಲ್ಲಿವೆ. ಈ ಕಾರಣಕ್ಕಾಗಿ ಮೈಸೂರು ಆಯ್ಕೆ ಆಗಿದೆ ಎನ್ನಲಾಗುತ್ತಿದೆ.
Udupi ಬರಗಾಲದಲ್ಲೂ ಎಂದೂ ಬತ್ತದ ಕೆರೆಯ ವಿಸ್ಮಯ!
ಪ್ರಧಾನಿ ಮೋದಿ, ಐಟಿ ಬಿಟಿ ಸಚಿವ ರಾಜೀವ್ ಚಂದ್ರಶೇಖರ್‌ಗೆ ಧನ್ಯವಾದ ತಿಳಿಸಿದ ಸಂಸದ: ನಮ್ಮ ದೇಶದಲ್ಲಿ ಸೆಮಿಕಂಡಕ್ಟರ್ ತಯಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ 75 ಸಾವಿರ ಕೋಟಿ ಮೀಸಲಿಟ್ಟ ಪ್ರಧಾನಿ ನರೇಂದ್ರ ಮೋದೀಜಿ ಮತ್ತು ಮೈಸೂರಿಗೆ ದೇಶದ ಮೊಟ್ಟಮೊದಲ ಸೆಮಿಕಂಡಕ್ಟರ್ ಫ್ಯಾಬ್ ಪ್ಲಾಂಟ್ ನೀಡಿದ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai), ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಮತ್ತು ಐಟಿಬಿಟಿ ಸಚಿವರಾದ ಡಾ. ಅಶ್ವಥನಾರಾಯಣ ಗೆ ಸಮಸ್ತ ಮೈಸೂರಿಗರ ಪರವಾಗಿ ಸಂಸದ ಪ್ರತಾಪ್ ಸಿಂಹ ಧನ್ಯವಾದ ತಿಳಿಸಿದ್ದಾರೆ.
ತಾವು ಯಾಕಾಗಿ ವಿಮಾನ ನಿಲ್ದಾಣದ ರನ್ವೇ ವಿಸ್ತರಣೆಗಾಗಿ ಅಂಗಲಾಚಿದೆ ಮತ್ತು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿ ಎದುರಾಗ ಸಂಘರ್ಷದ ಹಾದಿ ತುಳಿದೆ ಎಂಬುದು ಬಹುಶಃ ನಿಮಗೆ ಈಗ ಅರ್ಥವಾಗಬಹುದು. ಕಳೆದ 8 ವರ್ಷಗಳಿಂದ ರೋಡು, ರೈಲು ಮತ್ತು ಏರ್ ಕನ್ನೆಕ್ಟಿನಿಟಿ ಅಂತ ಹೋರಾಡಿದ್ದು ಇಂಥದ್ದೊಂದು ಅಭಿವೃದ್ಧಿ ಪರ್ವಕ್ಕಾಗಿ ಬಂಧುಗಳೇ. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ಅಂತ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.