ಧಾರವಾಡ: ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಬಾಲಕ

*   ಸಂಸ್ಥೆಗೆ ಬಾಲಕನ ನೆನಪಿನ ಶಕ್ತಿಯ ವೀಡಿಯೋ ಅಪ್‌ಲೋಡ್‌
*   ಪ್ರಮಾಣಪತ್ರ ಹಾಗೂ ಮೆಡಲ್‌ ಕಳುಹಿಸಿದ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಸಂಸ್ಥೆ
*   ಬಾಲಕನಲ್ಲಿ ವಿಭಿನ್ನ ಪ್ರತಿಭೆ ಗುರುತಿಸಿದ್ದ ಮನೋವಿಜ್ಞಾನ ವಿಷಯದ ಪ್ರಾಧ್ಯಾಪಕರು 

India Book of Record Included iin Rocord Book to Dharwad Boy Aryan Name grg

ಧಾರವಾಡ(ಸೆ.26): ಮೂರುವರೆ ವರ್ಷದ ಆರ್ಯನ್‌ ದೇಸಾಯಿಗೌಡರ ಎಂಬ ಬಾಲಕನ ನೆನಪಿನ ಶಕ್ತಿಗೆ ಇಂಡಿಯಾ ಬುಕ್‌ ಆಫ್‌ರೆಕಾರ್ಡ್ಸ್‌(India Book of Records) ಸಂಸ್ಥೆಯು ತನ್ನ ರೆಕಾರ್ಡ್‌ ಬುಕ್‌ನಲ್ಲಿ ಈತನ ಹೆಸರನ್ನೂ ಸೇರ್ಪೆಡೆ ಮಾಡಿದೆ.

ಈ ಕುರಿತು ಶನಿವಾರ ಬಾಲಕನ ತಾಯಿ ಉಮಾ, ತಂದೆ ಉಮೇಶಗೌಡ ದೇಸಾಯಿಗೌಡರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿ, ಕೋವಿಡ್‌(Covid19) ಹಿನ್ನೆಲೆಯಲ್ಲಿ ಆಗಸ್ಟ್‌ ತಿಂಗಳಲ್ಲಿ ಸಂಸ್ಥೆಗೆ ಬಾಲಕನ ನೆನಪಿನ ಶಕ್ತಿಯ ವೀಡಿಯೋಗಳನ್ನು ಅಪ್‌ಲೋಡ್‌ ಮಾಡಲಾಗಿತ್ತು. ಇವುಗಳನ್ನು ಗಮನಿಸಿದ ಸಂಸ್ಥೆಯು ಆ. 25ರಂದು ರೆಕಾರ್ಡ್‌ನಲ್ಲಿ ಹೆಸರು ಸೇರ್ಪಡೆ ಮಾಡಿದ್ದು, 2 ದಿನಗಳ ಹಿಂದೆ ಪ್ರಮಾಣಪತ್ರ ಹಾಗೂ ಮೆಡಲ್‌ ಕಳುಹಿಸಿದೆ ಎಂದರು.

India Book of Record Included iin Rocord Book to Dharwad Boy Aryan Name grg

ಬೀದರ್: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ 21 ತಿಂಗಳ ಮಗು 

3 ವರ್ಷ 7 ತಿಂಗಳ ಆರ್ಯನ್‌ 90 ದೇಶಗಳ ರಾಜಧಾನಿ, 18 ಪಕ್ಷಿಗಳು, 20 ಕಾಡು ಪ್ರಾಣಿಗಳು, ದೇಹದ 20 ಅವಯವಗಳು, 13 ಬಣ್ಣ, 16 ಸಾಕು ಪ್ರಾಣಿಗಳು, 18 ಆಹಾರ ಪದಾರ್ಥಗಳು, 106 ಬಹು ಚಿಹ್ನೆಗಳು (ಲೋಗೊ), 25 ತರಕಾರಿಗಳು ಹಾಗೂ 17 ವಾಹನಗಳನ್ನು ಕೆಲ ಕ್ಷಣಗಳಲ್ಲೇ ಗುರುತಿಸುವ ಸಾಮರ್ಥ್ಯ ಹೊಂದಿದ್ದಾನೆ. ಈ ವಸ್ತುಗಳನ್ನು ಗುರುತಿಸುವಂತಹ 47 ವೀಡಿಯೋಗಳನ್ನು ಸಂಸ್ಥೆಗೆ ಕಳುಹಿಸಲಾಗಿತ್ತು. ಅವುಗಳನ್ನು ಗಮನಿಸಿ ಆತನ ಹೆಸರನ್ನು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸೇರ್ಪಡೆ ಮಾಡಿದ್ದಾರೆ ಎಂದರು.

ತಾವು ಮನೋವಿಜ್ಞಾನ ವಿಷಯದ ಪ್ರಾಧ್ಯಾಪಕರು ಇರುವ ಕಾರಣ ಈತನಲ್ಲಿ ವಿಭಿನ್ನ ಪ್ರತಿಭೆ(Talent) ಅಡಗಿದೆ ಎಂಬುದನ್ನು 2ನೇ ವರ್ಷದಲ್ಲೇ ಗುರುತಿಸಿದ್ದೆವು. ಬಳಿಕ ಆತನಿಗೆ ಒಂದೊಂದೇ ವಸ್ತುಗಳನ್ನು ತೋರಿಸಿ ಅವುಗಳ ಪರಿಚಯ ಮಾಡಿ ಪದೇ ಪದೇ ಕೇಳಲಾಗುತ್ತಿತ್ತು. ಯಾವುದೇ ಸಂದರ್ಭದಲ್ಲಿ ಕೇಳಿದರೂ ಆತ ಥಟ್ಟನೆ ಹೇಳುತ್ತಿದ್ದ. ಇದೇ ಕಾರಣಕ್ಕೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ನೋಂದಣಿ ಮಾಡಲಾಗಿತ್ತು ಎಂದರು.

Latest Videos
Follow Us:
Download App:
  • android
  • ios