ಸ್ವತಂತ್ರವಾಗಿ ನಿಂತ ಅಭ್ಯರ್ಥಿಗಳು BJP ಸಂಪರ್ಕದಲ್ಲಿ

  • ಸ್ವತಂತ್ರವಾಗಿ ನಿಂತ ಅಭ್ಯರ್ಥಿಗಳು ನಮ್ಮ ಸಂಪರ್ಕದಲ್ಲಿದ್ದಾರೆ
  • ರಾಜಕೀಯ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ
independent candidates contact with bjp in hubli dharwad corporation snr

ಹುಬ್ಬಳ್ಳಿ (ಸೆ.13):  ಹುಧಾ ಮಹಾನಗರ ಪಾಲಿಕೆಯಲ್ಲಿ ಮೇಯರ್‌, ಉಪಮೇಯರ್‌ ನಮ್ಮವರೇ ಆಗಲಿದ್ದಾರೆ. ಸ್ವತಂತ್ರವಾಗಿ ನಿಂತ ಅಭ್ಯರ್ಥಿಗಳು ನಮ್ಮ ಸಂಪರ್ಕದಲ್ಲಿದ್ದಾರೆ. 69ನೇ ವಾರ್ಡ್‌ನಿಂದ ಗೆದ್ದ ದುರ್ಗಮ್ಮ ಬಿಜವಾಡ್‌ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ದುರ್ಗಮ್ಮ ಸ್ವತಂತ್ರ್ಯವಾಗಿ ಸ್ಪರ್ಧಿಸಿದ್ದರು. ಬಂಡಾಯ ಆಗಿದಕ್ಕೆ ಅವರ ವಿರುದ್ಧ ಕ್ರಮ ಜರುಗಿಸಲಾಗಿತ್ತು. ಆದರೆ, ರಾಜಕೀಯ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹೀಗಾಗಿ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದರು.

ಅರುಣ್‌ ಸಿಂಗ್‌ ಭೇಟಿಯಾದ ಜಗದೀಶ್‌ ಶೆಟ್ಟರ್‌: ಕಾರಣ?

ಇನ್ನು, ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಸಂಪೂರ್ಣವಾಗಿ ತೃಪ್ತಿ ತಂದಿಲ್ಲ. ನಾವು ಉತ್ತಮ ಫಲಿತಾಂಶಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇವೆ. ಕಡಿಮೆ ಮತದಾನ ಆಗಿದ್ದು ಕೂಡ ನಮಗೆ ಹಿನ್ನಡೆ ಆಗಲು ಕಾರಣವಾಯಿತು. ಟಿಕೆಟ್‌ ಹಂಚಿಕೆ ವೇಳೆಯ ಗೊಂದಲ ಕೂಡ ಸಮಸ್ಯೆ ಆಗಿದೆ ಎಂದರು.

ಗಣೇಶೋತ್ಸಕ್ಕೆ 11 ದಿನ ಅವಕಾಶ ಪ್ರಯತ್ನ :  ಬೆಂಗಳೂರಿನಂತೆ ಹುಧಾ ಮಹಾನಗರದಲ್ಲೂ ಗಣೇಶೋತ್ಸವ ನಡೆಸಲು 11 ದಿನಗಳ ಕಾಲ ನಡೆಸಲು ಅವಕಾಶ ನೀಡಲು ಅವಕಾಶ ನೀಡುವ ಬಗ್ಗೆ ಅಹವಾಲು ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು ಅವರು ಜಿಲ್ಲಾಧಿಕಾರಿ ಜತೆ ಚರ್ಚಿಸುವುದಾಗಿ ಹೇಳಿದ್ದಾರೆ. ಗಣೇಶೋತ್ಸವ ಆಚರಣೆ 5 ದಿನದಿಂದ 11 ದಿನಕ್ಕೆ ವಿಸ್ತರಣೆಗೆ ಅವಕಾಶ ಸಿಗುವ ಭರವಸೆ ಇದೆ ಎಂದು ಜಗದೀಶ ಶೆಟ್ಟರ್‌ ಹೇಳಿದರು.

Latest Videos
Follow Us:
Download App:
  • android
  • ios