Asianet Suvarna News Asianet Suvarna News

Air Pollution| ದೀಪಾವಳಿ ಪಟಾಕಿಯಿಂದ ವಾಯು ಮಾಲಿನ್ಯ ಹೆಚ್ಚಳ..!

*  ಬೆಂಗಳೂರು ನಗರದಲ್ಲಿ ಸಾಮಾನ್ಯ ದಿನಗಳಲ್ಲೇ ಮಾಲಿನ್ಯ ಅಧಿಕ
*  ವಾಯು ಗುಣಮಟ್ಟ ಸೂಚ್ಯಾಂಕ ಶೇ.54.8
*  ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳು
 

Increasing Air Pollution From Deepavali Fireworks in Bengaluru grg
Author
Bengaluru, First Published Nov 10, 2021, 7:44 AM IST

ಬೆಂಗಳೂರು(ನ.10):  ಕಳೆದ ದೀಪಾ​ವ​ಳಿ(Deepavali)​ ಹಬ್ಬದ ಸಂದರ್ಭದಕ್ಕಿಂತ ಈ ಬಾರಿ ಬೆಂಗಳೂರು(Bengaluru) ನಗರದಲ್ಲಿ ಪಟಾಕಿ ಸಿಡಿತದಿಂದ ವಾಯು ಮಾಲಿನ್ಯ ಪ್ರಮಾಣ ಮಾಲಿ​ನ್ಯವು ಏರಿಕೆ ಕಂಡಿದೆ.

ಕಳೆದ ವರ್ಷ ಕೊರೊನಾ(Coronavirus) ಎರ​ಡನೇ ಅಲೆ ಲಾಕ್‌​ಡೌನ್‌(Lockdown) ಘೋಷ​ಣೆ​ ಮಾಡಿದ್ದರಿಂದ ವಾಹನ ಸಂಚಾ​ರಕ್ಕೆ(Traffic) ಅವ​ಕಾಶ ಇರ​ಲಿಲ್ಲ. ಮತ್ತೊಂದೆಡೆ ದೀಪಾವಳಿ ಹಬ್ಬದ ವೇಳೆ ಪಟಾಕಿ(Fireworks)ಸಿಡಿ​ಸಲು ಅನುಮತಿಯೂ ಇರಲಿಲ್ಲ. ​ಹಾಗಾಗಿ ಪಟಾಕಿ ಮಾಲಿನ್ಯ ಕಡಿಮೆಯಿತ್ತು. ಅದರಂತೆ ಕಳೆದ ವರ್ಷ ಸರಾ​ಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಶೇ.54.8 ರಷ್ಟಿತ್ತು.

ಆದರೆ, ಈ ವರ್ಷ ಕೊರೋ​ನಾ ಪ್ರಕರಣಗಳು ಕಡಿಮೆಯಾಗಿ ಜನ​ಜೀ​ವನ ನಿಧಾ​ನ​ವಾಗಿ ಸಹ​ಜ​ಸ್ಥಿ​ತಿಗೆ ಮರಳಿದ ಪರಿಣಾಮ ಸರ್ಕಾರ ಸಹ ದೀಪಾವಳಿ ಹಬ್ಬ ಪ್ರಯುಕ್ತ ಹಸಿರು ಪಟಾಕಿ(Green Fireworks) ಬಳಕೆಗೆ ಅನುಮತಿ ನೀಡಿತ್ತು. ಇದರಿಂದ ದೀಪಾ​ವಳಿ ವೇಳೆ ಅಂದರೆ ನ.3ರಿಂದ 5ರ ವರೆಗೆ ಪಟಾಕಿ ಸಿಡಿತದಿಂದ ನಗರದಲ್ಲಿ ವಾಯು ಗುಣಮಟ್ಟದ ಸೂಚ್ಯಂಕ ಪ್ರಮಾಣ ಶೇ.67.3ರಷ್ಟಾ​ಗಿದೆ. ಅಂದರೆ ಕಳೆದ ದೀಪಾವಳಿಗೆ ಹೋಲಿಸಿದರೆ ಈ ಬಾರಿ ಶೇ.23ರಷ್ಟು ವಾಯು ಮಾಲಿನ್ಯ(Air Pollution) ಹೆಚ್ಚಾಗಿದೆ.

ಮಿತಿಮೀರಿದ ವಾಯುಮಾಲಿನ್ಯ, ದೆಹಲಿಯಲ್ಲಿ 5 ಜನರಲ್ಲಿ ನಾಲ್ವರಿಗೆ ಆರೋಗ್ಯ ಸಮಸ್ಯೆ!

ಮತ್ತೊಂದೆಡೆ ಬೆಂಗಳೂರು ನಗರದಲ್ಲಿ ಸಾಮಾನ್ಯ ದಿನ​ಗ​ಳಲ್ಲಿ ಎ​ಕ್ಯು​ಐ ಸರಾ​ಸರಿ 115ರಷ್ಟಿದೆ. ಅಂದರೆ ದೀಪಾ​ವಳಿ ವೇಳೆಗಿಂತ ಸಾಮಾನ್ಯ ದಿನಗಳಲ್ಲಿಯೇ ವಾಯು ಮಾಲಿನ್ಯ ಪ್ರಮಾಣ ಹೆಚ್ಚಿರುತ್ತದೆ. ಅದಕ್ಕೆ ಕಾರಣ ವಾಹನ ಸಂಚಾರ, ಕಟ್ಟಡ ನಿರ್ಮಾಣ ಹಾಗೂ ಕೈಗಾ​ರಿ​ಕೆ​ಗಳು ಕಾರ್ಯ ನಿರ್ವಹಿಸುತ್ತಿದ್ದರಿಂದ ಸಾಮಾನ್ಯ ದಿನ​ಗ​ಳ​ಲ್ಲಿಯೇ ವಾಯು ಮಾಲಿನ್ಯ ಹೆಚ್ಚ​ಳ​ವಾ​ಗಿದೆ.

ಈ ಬಾರಿ ದೀಪಾ​ವಳಿ ಮೊದಲ ದಿನ ಭರ್ಜರಿಯಾಗಿ ಸುರಿದ ಮಳೆ, ಪಟಾಕಿ ಹೊಡೆ​ಯಲು ಅವ​ಕಾ​ಶ ನೀಡ​ಲಿಲ್ಲ. ಎರ​ಡನೇ ದಿನ ಸಹ ಅಲ್ಲಲ್ಲಿ ತುಂತುರು ಮಳೆ​ಯಾ​ಗಿದೆ(Rain). ಇದರಿಂದ ಪಟಾಕಿ ಸಿಡಿತದಿಂದ ಉಂಟಾದ ಮಾಲಿನ್ಯ ಪ್ರಮಾಣವು ಸಾಮಾನ್ಯ ದಿನಗಳಿಗಿಂತ ಕಡಿಮೆಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ(Pollution Control Board) ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾರೆ.

ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳು

ಹಾಗೆಯೇ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳು (ಪಿಎಂ 2.5 ಮತ್ತು ಪಿಎಂ 10)(Contaminant particles) ಕಾಣಿಸಿಕೊಂಡಿದೆ. ನಗರದ ವಿವಿಧೆಡೆ ಒಂದು ಸಾವಿರ ಲೀಟರ್‌ ಗಾಳಿಯಲ್ಲಿ ಪಿಎಂ 10ರ ಪ್ರಮಾಣ 100 ಮೈಕೋ ಗ್ರಾಂ ಹಾಗೂ ಪಿಎಂ 2.5ರ ಪ್ರಮಾಣ 60 ಮೈಕ್ರೋ ಗ್ರಾಂ ಮೀರಿದೆ.

Air Pollution| ಮಾಲಿನ್ಯಕ್ಕೆ ದಿಲ್ಲಿ ತಲ್ಲಣ: 5 ವರ್ಷದಲ್ಲೇ ಗರಿಷ್ಠ!

ಹಬ್ಬದ ಮುನ್ನ ದಿನ ಗುರುವಾರ ಹಾಗೂ ಹಬ್ಬದ ದಿನವಾದ ಶುಕ್ರವಾರ ರಾತ್ರಿ ಮಳೆಯಾದ ಕಾರಣ ವಾತಾವರಣದಲ್ಲಿ(weather) ತೇವಾಂಶ ಹೆಚ್ಚಾಯಿತು. ಇದರಿಂದ ಧೂಳಿನ ಕಣಗಳು ವಾತಾವರಣದ ತಳಮಟ್ಟದಲ್ಲಿಯೇ ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಪಟಾಕಿಯ ವಿಷಕಾರಿ ಹೊಗೆ ಈ ಗಾಳಿಯನ್ನು ಸೇರಿದಾಗ ಮಾಲಿನ್ಯಕಾರಕ ಕಣಗಳು ಗಾಳಿಯಲ್ಲಿ ಉಳಿಯುತ್ತದೆ. ವಾಯು ಗುಣಮಟ್ಟದ ಸೂಚ್ಯಂಕವು 100ರ ಗಡಿ ದಾಟಿಯಲ್ಲಿ ಶ್ವಾಸಕೋಶ ಹಾಗೂ ಹೃದಯ ಕಾಯಿಲೆಗಳಿಗೆ ದಾರಿಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ವರ್ಷದ ಮಾಹಿ​ತಿ (ಎಕ್ಯು​​ಐ)

ಪ್ರದೇ​ಶ ಸಾಮಾನ್ಯ ದಿನ​ಗ​ಳು ​ದೀ​ಪಾ​ವ​ಳಿ

ಸಿಟಿ ರೈಲ್ವೆ ನಿಲ್ದಾ​ಣ 105 112
ಹೆಬ್ಬಾ​ಳ 109 45
ಬಸ​ವೇ​ಶ್ವರ ನಗ​ರ 79 57
ಜಯ​ನ​ಗ​ರ 123 74
ನಿಮ್ಹಾ​ನ್ಸ್‌ 106 42
ಮೈಸೂರು ರಸ್ತೆ 178 87
ಸಿಲ್ಕ್‌ ಬೋರ್ಡ್‌ 107 54
ಸರಾ​ಸ​ರಿ 115 67

ವಾಯು ಮಾಲಿನ್ಯ ಎಕ್ಯೂಐ ಮಾಪನ ಹೇಗೆ?

0-50 ಉತ್ತ​ಮ
51-100 ತೃಪ್ತಿ​ದಾ​ಯ​ಕ
101-200 ಮಧ್ಯ​ಮ
201-300 ಕಳ​ಪೆ
301-400 ತುಂಬಾ ಕಳ​ಪೆ
401-500 ತೀವ್ರ ಕಳ​ಪೆ
 

Follow Us:
Download App:
  • android
  • ios