ಯಾದಗಿರಿಯಿಂದ ದಂಡಗುಂಡಕ್ಕೆ ಬರುವಾಗ ಚಿರತೆ ಪ್ರತ್ಯಕ್ಷವಾಗಿದೆ. ವಿದ್ಯಾನಂದ ಹಿರೇಮಠ ಅವರು ಕಾರಿನಲ್ಲಿ ತಮ್ಮ ಕುಟುಂಬದ ಜೊತೆ ತೆರಳುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕಂಡ ವಿದ್ಯಾನಂದ ಅವರ ಕುಟುಂಬದವರು ಗಾಬರಿಯಾಗಿದ್ದಾರೆ.
ಕಲಬುರಗಿ(ಸೆ.03): ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಯಾಗಾಪೂರ ಗುಡ್ಡದಲ್ಲಿ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯಾದಗಿರಿಯಿಂದ ದಂಡಗುಂಡಕ್ಕೆ ಬರುವಾಗ ಚಿರತೆ ಪ್ರತ್ಯಕ್ಷವಾಗಿದೆ. ವಿದ್ಯಾನಂದ ಹಿರೇಮಠ ಅವರು ಕಾರಿನಲ್ಲಿ ತಮ್ಮ ಕುಟುಂಬದ ಜೊತೆ ತೆರಳುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕಂಡ ವಿದ್ಯಾನಂದ ಅವರ ಕುಟುಂಬದವರು ಗಾಬರಿಯಾಗಿದ್ದಾರೆ.
ಮೈಸೂರು: ಕೆ.ಆರ್.ನಗರ ತಾಲೂಕಲ್ಲಿ ಬೋನಿಗೆ ಸೆರೆಸಿಕ್ಕ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಕಾರಿನ ಹೆಡ್ ಲೈಟ್ ಬೆಳಕಲ್ಲಿ ವಿದ್ಯಾನಂದ ಅವರು ಚಿರತೆಯ ವಿಡಿಯೋ ಸೆರೆ ಹಿಡಿದಿದ್ದಾರೆ. ಪ್ರಸಿದ್ಧ ದಂಡಗುಂಡ ಬಸವೇಶ್ವರ ಜಾತ್ರೆ ನಾಳೆ ನಡೆಯಲಿದೆ. ಸಾಕಷ್ಟು ಭಕ್ತ ಸಮೂಹ ಪಾದಯಾತ್ರೆ ಮೂಲಕ ಜಾತ್ರೆಗೆ ಬರಲಿದ್ದಾರೆ. ಈ ಮಾರ್ಗದಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಜಾತ್ರೆಗೆ ಬರುವ ಭಕ್ತರು ಅತಂಕಕ್ಕೊಳಗಾಗಿದ್ದಾರೆ.