ಬಳ್ಳಾರಿ(ಜೂ.11): ಜಿಲ್ಲೆಯ ಹೊಪಪೇಟೆ ತಾಲೂಕಿನ ಹಂಪಿಯ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಬುಧ​ವಾರ ಹೆಚ್ಚಾ​ಗಿತ್ತು. ಮಂಗ​ಳ​ವಾರ 300 ರಿಂದ 35೦ ಜನ ದರ್ಶನ ಪಡೆ​ದಿ​ದ್ದರು. 

ಬುಧ​ವಾರ ಸುಮಾರು 700 ಜನ ದರ್ಶನ ಪಡೆ​ದರು. ಸ್ಥಳೀ​ಯರೇ ಹೆಚ್ಚಾಗಿ ಬರು​ತ್ತಿದ್ದು, ಹೊರ ಜಿಲ್ಲೆ ಭಕ್ತರು ಬರು​ತ್ತಿ​ಲ್ಲ. ಜಿಲ್ಲೆಯ ಇತರ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು.

ಕೊರೋನಾ ರಣಕೇಕೆ: ಒಂದೇ ದಿನ ಜಿಂದಾಲ್‌ 20 ನೌಕರರಿಗೆ ವಕ್ಕರಿಸಿದ ಕೋವಿಡ್‌

ಇನ್ನು ಹೋಟೆ​ಲ್‌​ಗ​ಳಿಗೆ ಗ್ರಾಹ​ಕರ ಸಂಖ್ಯೆ ಹೆಚ್ಚಿತ್ತು. ಸೋಮ​ವಾರ, ಮಂಗ​ಳ​ವಾ​ರಕ್ಕೆ ಹೋಲಿ​ಸಿ​ದರೆ ಗ್ರಾಹ​ಕರ ಸಂಖ್ಯೆ ಹೆಚ್ಚಾ​ಗಿದ್ದು, ಹೋಟೆಲ್‌ ಉದ್ಯಮ ಚೇತ​ರಿ​ಸಿ​ಕೊ​ಳ್ಳು​ತ್ತಿ​ದೆ.