ಬಳ್ಳಾರಿ(ಜೂ.11): ನಂಜನಗೂಡಿನ ಜ್ಯುಬಿಲಿಯೆಂಟ್‌ ಕಾರ್ಖಾನೆಯಲ್ಲಿ ಆರ್ಭಟಿಸಿದ್ದ ಕಿಲ್ಲರ್‌ ಕೊರೋನಾ, ಇದೀಗ ಸಂಡೂರು ತಾಲೂಕಿನ ಜಿಂದಾಲ್‌ (ಜೆಎಸ್‌ಡಬ್ಲ್ಯು) ಕಾರ್ಖಾನೆಯಲ್ಲಿ ರಣಕೇಕೆ ಹಾಕುತ್ತಿದ್ದು ಬುಧವಾರ ಒಂದೇ ದಿನ 20 ಉದ್ಯೋಗಿಗಳಿಗೆ ವಕ್ಕರಿಸಿದೆ. ಇದರೊಂದಿಗೆ ಕಾರ್ಖಾನೆಯ ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ. ಜತೆಗೆ ಕಾರ್ಮಿಕನೊಬ್ಬನ ಕುಟುಂಬದ ಮೂವರಿಗೆ ಸೋಂಕು ಹಬ್ಬಿದ್ದು, ಜಿಂದಾಲ್‌ ಮೂಲದಿಂದ ಒಟ್ಟು 34 ಮಂದಿಗೆ ವ್ಯಾಪಿಸಿದಂತಾಗಿದೆ.

"

ಕಾರ್ಖಾನೆಯ ಸಿಎಂಡಿ ಮತ್ತು ಕೋರೆಕ್ಸ್‌ ವಿಭಾಗದ ಉದ್ಯೋಗಿಗಳಲ್ಲಿ ಸೋಂಕು ಹರಡುತ್ತಿದ್ದು, ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ಪ್ರತ್ಯೇಕಿಸಲಾಗುತ್ತಿದೆ. ಈ ಎಲ್ಲರೂ ಒಂದೇ ಕಚೇರಿಯಲ್ಲಿ ಜಾಗ ಹಂಚಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಸಿಎಂಡಿ ವಿಭಾಗದ 87 ಉದ್ಯೋಗಿಗಳ ಪೈಕಿ 83 ಉದ್ಯೋಗಿಗಳನ್ನು ಪ್ರತ್ಯೇಕಿಸಿದ್ದು, ಕೇವಲ ನಾಲ್ವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊರೋನಾ ಕಾಟ: ಬಳ್ಳಾರಿಯ ಜಿಂದಾಲ್‌ ಈಗ ಕೊರೋನಾ ಕಾರ್ಖಾನೆ..!

ಕೊರೆಕ್ಸ್‌ನಲ್ಲಿರುವ 228 ಕಾರ್ಮಿಕರಲ್ಲಿ 75 ಮಂದಿಯನ್ನು ಐಸೋಲೇಷನ್‌ ಮಾಡಲಾಗಿದೆ. ಇನ್ನೂ 50 ಕಾರ್ಮಿಕರನ್ನು ಬುಧ​ವಾ​ರ ಮಧ್ಯಾಹ್ನದಿಂದಲೇ ಕಾರ್ಖಾನೆಗೆ ಬರದಂತೆ ನಿರ್ಬಂಧಿಸಲಾಗಿದೆ.