ಕಲಬುರಗಿ (ಡಿ.09): ಚೆಟ್ಟಿನಾಡು ಸಿಮೆಂಟ್ ಕಾರ್ಫೊರೇಷನ್ ಪ್ರೈವೆಟ್ ಲಿಮಿಟೆಡ್  ಕಾರ್ಖಾನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  
 
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಿಮೇಂಟ್ ಕಾರ್ಖಾನೆ ಮೇಲೆ ದಾಳಿ ನಡೆದಿದೆ. 

ತೆರಿಗೆ ವಂಚನೆ ಮಾಡಿದ ಹಿನ್ನಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ನಸುಕಿನ ಜಾವ ಐದು ಗಂಟೆಗೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ತಮಿಳುನಾಡಲ್ಲಿ ಭರ್ಜರಿ 450 ಕೋಟಿ ರೂ. ಐಟಿ ಬೇಟೆ! ...

ಚೈನ್ , ಮಹಾರಾಷ್ಟ್ರ , ಕರ್ನಾಟಕ , ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿರುವ ಕಾರ್ಖಾನೆ ಮೇಲೆ ದಾಳಿ ನಡೆದಿದೆ.  300 ಕ್ಕೂ ಹೆಚ್ಚು ಅಧಿಕಾರಿಗಳಿಂದ ಏಕ ಕಾಲಕ್ಕೆ ದಾಳಿ ನಡೆದಿದೆ. 

ಚೈನೈ ಮತ್ತು ಬೆಂಗಳೂರು ಅಧಿಕಾರಿಗಳಿಂದ ಕಲಬುರಗಿ ಸಿಮೇಂಟ್ ಕಾರ್ಖಾನೆ ಮೇಲೆ ದಾಳಿ ನಡೆದಿದ್ದು, ಸಿಮೆಂಟ್ ಕಾರ್ಖಾನೆ ದಾಖಲಾತಿಗಳನ್ನ  ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.