ಬಾರಿ ಜಾತ್ರಾ ಮಹೋತ್ಸವದಲ್ಲಿ ಹಾಸನಾಂಬೆ ಹುಂಡಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ಕುಸಿತವಾಗಿದೆ
ಹಾಸನ (ನ.18) : ವರ್ಷಕ್ಕೊಮ್ಮೆ ಬಾಗಿಲು ತೆಗೆದು ಸಾರ್ವಜನಿಕರಿಗೆ ದರ್ಶನ ನೀಡುವ ಹಾಸನಾಂಬೆ ದೇವಾಲಯದ ಆದಾಯ ಕೋಟಿಯಿಂದ ಲಕ್ಷಕ್ಕೆ ಕುಸಿದಿದೆ. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದರಿಂದ ಭಕ್ತರಿಂದ ಕಾಣಿಕೆ ರೂಪದಲ್ಲಿ 22.79 ಲಕ್ಷ ರು. ಮಾತ್ರ ಸಂಗ್ರಹವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪೂರ್ವ ನಿಗದಿಯಂತೆ ನ.16ರಂದು ದೇಗುಲದ ಬಾಗಿಲು ಹಾಕಲಾಗಿದೆ. ಮಂಗಳವಾರ ಹುಂಡಿ ಎಣಿಕೆ ಮಾಡಲಾಗಿದ್ದು, ಹಾಸನಾಂಬೆ ದೇಗುಲದ ಹುಂಡಿಯಿಂದ 21.4 ಲಕ್ಷ ರು., ಶ್ರೀ ಸಿದ್ದೇಶ್ವರ ದೇವಸ್ಥಾನದ ಹುಂಡಿಯಿಂದ 1.45 ಲಕ್ಷ ರು. ಸಂಗ್ರಹವಾಗಿದೆ.
ಹಾಸನಾಂಬೆ ದೇಗುಲದಲ್ಲಿ ಪಂಚಾಂಗಕ್ಕೆ ವಿರುದ್ಧ ಸಂಪ್ರದಾಯ : ಆಕ್ಷೇಪದ ನಡುವೆ ಗಂಡಾಂತರದ ಆತಂಕ ...
ಇನ್ನು ಕಾಣಿಕೆಯಾಗಿ ಹಣ, ಚಿನ್ನ, ಬೆಳ್ಳಿ ಹಾಕಿದರೆ, ಇನ್ನೂ ಕೆಲ ಭಕ್ತರು ಚಿತ್ರವಿಚಿತ್ರ ಬೇಡಿಕೆಗಳ ಒಳಗೊಂಡ ಪತ್ರಗಳು ಕಾಣಿಕೆ ಹುಂಡಿಗಳಲ್ಲಿ ಹಾಕಿದ್ದಾರೆ. ಜೊತೆಗೆ ವಿದೇಶಿ ಕರೆನ್ಸಿಗಳು ಇದ್ದವು.
