ಹಾಸನ (ನ.15):  ಶಾಸ್ತ್ರ ಸಂಪ್ರದಾಯಕ್ಕೆ ವಿರುದ್ದವಾಗಿ ಹಾಸನಾಂಬೆ ಬಾಗಿಲು ಮುಚ್ಚಲು ಸಜ್ಜಾಯ್ತಾ ಜಿಲ್ಲಾಡಳಿತ..? ಹೀಗೊಂದು ಪ್ರಶ್ನೆ ಇದೀಗ ಎದ್ದಿದೆ. 

ಹಾಸನಾಂಬೆ ದರ್ಶನೋತ್ಸವ ತೆರೆ ವಿಚಾರದಲ್ಲಿ ಪುರೋಹಿತರ ನಡುವೆಯೇ ಭಿನ್ನಾಭಿಪ್ರಾಯ ತಲೆದೋರಿದ್ದು, ಬಲಿಪಾಡ್ಯಮಿಯ ಮಾರನೇ‌ ದಿನ ದರ್ಶನ ಕೊನೆಯಾಗುತ್ತಿದ್ದ ಸಂಪ್ರದಾಯಕ್ಕೆ ಬ್ರೇಕ್ ಹಾಕಲಾಗಿದೆ.  ಈ ಬಾರಿ ಒಂದು ದಿನ ಮುಂಚಿತವಾಗಿ ಬಾಗಿಲು ಮುಚ್ಚಲು ಜಿಲ್ಲಾಡಳಿತ ತೀರ್ಮಾನ ಮಾಡಿದೆ.

ಹಾಸನಾಂಬೆ ಹುಂಡಿ ಹಣ ಎಣಿಕೆ, ದೇವಿ ಕಾಣಿಕೆಯಲ್ಲಿ ಏರಿಕೆ: 'A' ಗ್ರೇಡ್ ಮುಂದುವರಿಕೆ..! ..

ಪಂಚಾಂಗದ ಉಲ್ಲೇಖ ಕಡೆಗಣಿಸಿ ಸಂಪ್ರದಾಯಕ್ಕೆ ವಿರುದ್ದವಾಗಿ ಬಾಗಿಲು ಮುಚ್ಚಲಾಗುತ್ತಿದೆ ಎಂದು ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದು, ಶತಮಾನಗಳ ಸಂಪ್ರದಾಯ ಮುರಿಯುತ್ತಿರುವ ಬಗ್ಗೆ ಕೆಲ ಪುರೋಹಿತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಕೊರೋನಾ ಕಾಟ: ಈ ಬಾರಿ ಆನ್‌ಲೈನ್‌ನಲ್ಲಿ ಮಾತ್ರ ಹಾಸನಾಂಬೆ ದರ್ಶನ ಭಾಗ್ಯ ..

ಒಂಟಿಕೊಪ್ಪಲ್ ಪಂಚಾಂಗದಲ್ಲಿನ ಉಲ್ಲೇಖ‌ ಕಡೆಗಣಿಸಲಾಗಿದೆ ಎಂದು ಭಕ್ತರಿಂದ ಆಕ್ಷೇಪ ವ್ಯಕ್ತವಾಗಿದೆ. ಒಂದು ದಿನ ಮುಂಚಿತವಾಗಿ ಬಾಗಿಲು ಮುಚ್ಚಿದರೆ ಗಂಡಾಂತರ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದು,  ಶಕ್ತಿದೇವತೆ ಅವಕೃಪೆಗೊಳಗಾದರೆ ದೇಶಕ್ಕೆ ಸಂಕಷ್ಟ ಎದುರಾಗಲಿದೆ ಎಂದಿದ್ದಾರೆ.

ನವೆಂಬರ್ 16 ರ ಸೋಮವಾರ ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಲು ಜಿಲ್ಲಾಡಳಿತ ಸಜ್ಜಾಗಿದ್ದು, ಆದರೆ ಬಲಿ ಪಾಡ್ಯಮಿಯ ಮಾರನೇ ದಿನ ಮಂಗಳವಾರ ಬಾಗಿಲು ಮುಚ್ಚಬೇಕು ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.