ಮಂಗಳೂರು(ಜ.18): ದೆಹಲಿಯ ಜವಾಹರಲಾಲ್‌ ಯೂನಿವರ್ಸಿಟಿ (ಜೆಎನ್‌ಯು) ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಲು ತೆರಳಿದ್ದ ಖ್ಯಾತ ಚಲನಚಿತ್ರ ನಟಿ ದೀಪಿಕಾ ಪಡುಕೋಣೆ ನಟಿಸಿದ ಛಪಾಕ್‌ ಚಲನಚಿತ್ರವನ್ನು ಬಿಜೆಪಿ ಬಹಿಷ್ಕರಿಸಲು ಕರೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಶುಕ್ರವಾರ ದ. ಕ. ಜಿಲ್ಲಾ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ನಗರದ ಫೋರಮ್‌ ಮಾಲ್‌ನ ಚಿತ್ರ ಮಂದಿರಕ್ಕೆ ತೆರಳಿ ಚಿತ್ರವನ್ನು ವೀಕ್ಷಿಸಿ ದೀಪಿಕಾ ಪಡುಕೋಣೆ ಯವರಿಗೆ ಬೆಂಬಲವನ್ನು ಸೂಚಿಸಿದೆ.

'ಜೈಶ್ರೀರಾಮ್‌ ಎಂದರೆ ಮಕ್ಕಳು ಹೆದರ್ತಾರೆ'..!

ಸುಮಾರು 150 ಕ್ಕೂ ಅಧಿಕ ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಚಲನಚಿತ್ರ ವೀಕ್ಷಿಸಿದರು. ಶುಕ್ರವಾರದ ಚಲನಚಿತ್ರದ ಒಂದು ಶೋ ವನ್ನು ಕಾಂಗ್ರೆಸ್‌ ಪ್ರಾಯೋಜಿಸಿತ್ತು. ಬಿ. ರಮಾನಾಥ್‌ ರೈ, ಜೆ. ಆರ್‌. ಲೋಬೊ, ಶಾಲೆಟ್‌ ಪಿಂಟೋ, ನವೀನ್‌ ಡಿಸೋಜಾ, ಶಶಿಧರ್‌ ಹೆಗ್ಡೆ, ಟಿ. ಕೆ. ಸುಧೀರ್‌, ಅನಿಲ್‌ ಕುಮಾರ್‌, ನಮಿತಾ ರಾವ್‌, ಪದ್ಮನಾಭ ಅಮೀನ್‌, ಶಾಂತಲಾ ಗಟ್ಟಿ, ಸಮರ್ಥ ಭಟ್‌, ರಾಮಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

'20 ವರ್ಷ ಬೇಕಾದ್ರೆ ಆಳ್ವಿಕೆ ಮಾಡಿ, ಜನರಿಗೆ ವಿಷ ಹಾಕ್ಬೇಡಿ'