ಮಂಗಳೂರು(ಜ.18): ‘ಜೈ ಶ್ರೀರಾಮ್‌’ ಎಂದರೆ ಎಲ್ಲಿ ಹೊಡೆಯುತ್ತಾರೋ ಎಂದು ಮಕ್ಕಳು ಕೂಡ ಹೆದರುವಂತಾಗಿದೆ. ಈ ಕಲಿಯುಗ ಮೋದಿಯಿಂದಾಗಿ ಸರ್ವ ನಾಶವಾಗಲಿದೆ ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಹೇಳಿದ್ದಾರೆ.

‘ವಸುದೈವ ಕುಟುಂಬಕಂ’ ಎನ್ನುವವರೇ ಈಗ ಧರ್ಮ ವಿಭಜನೆಗೆ ಮುಂದಾಗಿದ್ದಾರೆ. ‘ಜೈ ಶ್ರೀರಾಮ್‌’ ಎಂದರೆ ಎಲ್ಲಿ ಹೊಡೆಯುತ್ತಾರೋ ಎಂದು ಮಕ್ಕಳು ಕೂಡ ಹೆದರುವಂತಾಗಿದೆ ಎಂದು ಹೇಳಿದ ಇಬ್ರಾಹಿಂ, ಮಹಾತ್ಮಾ ಗಾಂಧಿ ಭಜಿಸಿ, ಹಾಡಿದ ರಾಮ ಈಗ ಇಲ್ಲ. ಅಂತಹ ಗಾಂಧಿಯ ಭಾವಚಿತ್ರಕ್ಕೆ ಬೆಂಕಿ ಕೊಟ್ಟಹಿಂದೂ ಮಹಾಸಭಾದ ಮುಖಂಡರಿಗೆ ಉತ್ತರ ಪ್ರದೇಶದಲ್ಲಿ ನಿಗಮ ಸ್ಥಾನ ನೀಡಿದ್ದಾರೆ. ಈ ಕಲಿಯುಗ ಮೋದಿಯಿಂದಾಗಿ ಸರ್ವ ನಾಶವಾಗಲಿದೆ ಎಂದು ಕಿಡಿಕಾರಿದ್ದಾರೆ.

'20 ವರ್ಷ ಬೇಕಾದ್ರೆ ಆಳ್ವಿಕೆ ಮಾಡಿ, ಜನರಿಗೆ ವಿಷ ಹಾಕ್ಬೇಡಿ'

ಮಂಗಳೂರು ಗೋಲಿಬಾರ್‌ನಲ್ಲಿ ಇಬ್ಬರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್‌ ಕಮಿಷನರ್‌ ಹರ್ಷ ತಮ್ಮ ಹೆಂಡತಿ ಮಕ್ಕಳ ಮೇಲೆ ಕೈಯಿಟ್ಟು ಹೇಳಿ. ಕೇವಲ 150 ಮಂದಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು ಸರಿಯಾ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಕೋಮು ಸೌಹಾರ್ದತೆಗೆ ಬೆಂಕಿ ಹಚ್ಚುತ್ತಿರುವ ಪ್ರಭಾಕರ್‌ ಭಟ್‌: ಡಿಕೆಸು