ರಾಮಮಂದಿರ ಉದ್ಘಾಟನೆ ತರಾತುರಿಯಲ್ಲಿ ಮಾಡಿಲ್ಲ: ಪೇಜಾವರ ಶ್ರೀ
ರಾಮಮಂದಿರ ಉದ್ಘಾಟನೆ ತರಾತುರಿಯಲ್ಲಿ ಮಾಡಿಲ್ಲ, ಮೇಲ್ಛಾವಣಿ ಇನ್ನೂ ಆಗಬೇಕಿದೆ, ಇನ್ನೊಂದು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ರಾಮಮಂದಿರ ಆಗಲಿಕೆ ಸಮಯ ಬೇಕಾಗುತ್ತದೆ ಎಂದು ಉಡುಪಿ ಪೇಜಾವರದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ವಿಜಯಪುರ (ಜು.04): ರಾಮಮಂದಿರ ಉದ್ಘಾಟನೆ ತರಾತುರಿಯಲ್ಲಿ ಮಾಡಿಲ್ಲ, ಮೇಲ್ಛಾವಣಿ ಇನ್ನೂ ಆಗಬೇಕಿದೆ, ಇನ್ನೊಂದು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ರಾಮಮಂದಿರ ಆಗಲಿಕೆ ಸಮಯ ಬೇಕಾಗುತ್ತದೆ ಎಂದು ಉಡುಪಿ ಪೇಜಾವರದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು. ರಾಮಮಂದಿರ ಇರುವ ಕ್ಷೇತ್ರದಲ್ಲಿ ಬಿಜೆಪಿ ಸೋಲು ವಿಚಾರವಾಗಿ ಮಾತನಾಡಿದ ಅವರು, ಆಸೆ ಆಮಿಷಕ್ಕೆ ಒಳಗಾಗಿ ಪ್ರತಿಪಕ್ಷ ಗೆಲ್ಲಿಸಿದ್ದಾರೆ. . ಧಾರ್ಮಿಕ ನಂಬಿಕೆಗೆ ಹೊಡೆತ ಅಂತ ಭಾವಿಸುವ ಹಾಗಿಲ್ಲ. ನಮ್ಮನ್ನು ಗೆಲ್ಲಿಸಿ ಅಂತ ಹೇಳಿದ್ರು. ರಾಮಮಂದಿರ ಇರುವ ಕ್ಷೇತ್ರದಲ್ಲಿ ಪ್ರತಿಪಕ್ಷ ಮೋಸದಿಂದ ಗೆದ್ದಿದೆ. ಇದು ಮೋಸ ಅಲ್ವೆ, ಈಗ ಏನು ಕೊಟ್ಟಿದ್ದಾರೆ ಎಂದರು.
ಯಾರೋ ಮಾಡಿದ್ರೆ ಮೋಸ ರಾಜಕೀಯ ಪಕ್ಷ ಮಾಡಿದ್ರೆ ಮೋಸ ಅಲ್ವೆ. ಸರ್ಕಾರ ಬಂದರೆ ಕೊಡ್ತೀವಿ ಅಂದಿದ್ರೋ, ಗೆಲ್ಲಿಸಿದ್ರೆ ಕೊಡ್ತೀವಿ ಅಂದಿದ್ರೋ ನೀವೇ ಗಮನಿಸಿ ಎಂದರು. ಜಾತಿವಾರು ಸ್ವಾಮೀಜಿಗಳು ಸಿಎಂ ಡಿಸಿಎಂ ಹುದ್ದೆ ಬೇಡಿಕೆ ವಿಚಾರವಾಗಿ, ನಿಯಮದ ವಿರುದ್ಧ ನಾವು ಹೋಗಲ್ಲ. ಡಿಸಿಎಂ ಹುದ್ದೆ ಬ್ರಾಹ್ಮಣರಿಗೆ ಕೊಡಿ ಎಂದು ನಾವು ಕೇಳಲ್ಲ. ಸಂವಿಧಾನಬದ್ಧವಾಗಿ ಪ್ರಸ್ತಾಪ ಇರಬೇಕು. ಜಾತಿವಾರು ಡಿಸಿಎಂ ಹುದ್ದೆ ಸ್ವಾಮೀಜಿಗಳ ಬೇಡಿಕೆಗೆ ಪರೋಕ್ಷವಾಗಿ ಪೇಜಾವರ ಶ್ರೀ ವಿರೋಧಿಸಿದರು.
ಹಿಂದು ಧರ್ಮದ ಬಗ್ಗೆ ರಾಹುಲ್ ಗಾಂಧಿ ಅವಹೇಳನ ವಿಚಾರವಾಗಿ ಸಹಿಷ್ಣುರಾಗಿರುವವರನ್ನು ಕೆಣಕುವುದು ಕೆಲವರಿಗೆ ಚಾಳಿ ಇದೆ. ಸಹಿಷ್ಣರನ್ನು ಕೆಣಕಿ ತಮ್ಮ ಬೇಳೆ ಬೇಯಿಸಿಕೊಳ್ತಾರೆ. ಪಂಗಡ ಪಂಗಡ ಮಧ್ಯೆ ಬೆಂಕಿ ಹಚ್ಚುವುದು ಸರಿಯಲ್ಲ. ಬೇಜವಾಬ್ದಾರಿ ಹೇಳಿಕೆ ಕೊಡುವುದು ಸರಿಯಲ್ಲ. ಸಮಾಜ ಇಂತಹವರಿಂದ ದೂರ ಇರಬೇಕು ಎಂದು ರಾಹುಲ್ ಗಾಂಧಿ ಹೇಳಿಕೆಗೆ ಪೇಜಾವರ ಶ್ರೀ ವಿರೋಧ ವ್ಯಕ್ತಪಡಿಸಿದರು. ಜು.1 ರಂದು ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡಿದರು. ಈ ವೇಳೆ, ಅಭಯಮುದ್ರವು ಕಾಂಗ್ರೆಸ್‍ನ ಸಂಕೇತವಾಗಿದೆ.
ದರ್ಶನ್‌ಗೆ ನಾನು ಮದರ್ ಇಂಡಿಯಾ, ಕೊಲೆ ಮಾಡೋ ವ್ಯಕ್ತಿ ಅವನಲ್ಲ: ಮೌನ ಮುರಿದ ಸುಮಲತಾ!
ಅಭಯಮುದ್ರವು ನಿರ್ಭಯತೆಯ ಸಂಕೇತವಾಗಿದೆ, ಧೈರ್ಯ ಮತ್ತು ಸುರಕ್ಷತೆಯ ಸಂಕೇತವಾಗಿದೆ, ಇದು ಭಯವನ್ನು ಹೋಗಲಾಡಿಸುತ್ತದೆ. ನಮ್ಮ ಮಹಾಪುರುಷರೆಲ್ಲರೂ ಅಹಿಂಸೆ, ಭಯವನ್ನು ಹೋಗಲಾಡಿಸುವ ಬಗ್ಗೆ ಮಾತನಾಡಿದ್ದಾರೆ. ಆದರೆ, ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ, ಅಸತ್ಯದ ಬಗ್ಗೆ ಮಾತನಾಡುತ್ತಾರೆ. ನೀವು ನಿಜವಾದ ಹಿಂದೂಗಳಲ್ಲ ಎಂದು ಹೇಳಿದ್ದರು. ಅಧಿವೇಶನದಲ್ಲಿ ಹಿಂದೂ ಪದವನ್ನು ರಾಹುಲ್ ಗಾಂಧಿ ಪ್ರಸ್ತಾಪ ಮಾಡಿದ್ದಕ್ಕೆ ಕೂಡಲೇ ಮಧ್ಯೆ ನಿಂತು ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಧಾನಿ ಮೋದಿ, ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ಬಹಳ ಗಂಭೀರವಾದ ವಿಷಯ ಎಂದಿದ್ದರು.