Prabhu Chauhan: ವಿಜಯಪುರದಲ್ಲಿ ಹೊಸ ಪಾಲಿ ಕ್ಲಿನಿಕ್‌, ಸರ್ಕಾರಿ ಗೋಶಾಲೆ ಲೋಕಾರ್ಪಣೆ

ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಇಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ನಗರದಲ್ಲಿ ನೂತನ ಪಾಲಿ ಕ್ಲಿನಿಕ್‌ ಉದ್ಘಾಟಿಸಿದರು. ಜೊತೆಗೆ ಭುರಣಾಪುರ ಗ್ರಾಮದ ಹೊರ ವಲಯದಲ್ಲಿ ಸರ್ಕಾರಿ ಗೋಶಾಲೆಗೆ ಚಾಲನೆ ನೀಡಿದರು. 

Inauguration of New Poly Clinic and Govt gaushala At Vijayapura gvd

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಜು.14): ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಇಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ನಗರದಲ್ಲಿ ನೂತನ ಪಾಲಿ ಕ್ಲಿನಿಕ್‌ ಉದ್ಘಾಟಿಸಿದರು. ಜೊತೆಗೆ ಭುರಣಾಪುರ ಗ್ರಾಮದ ಹೊರ ವಲಯದಲ್ಲಿ ಸರ್ಕಾರಿ ಗೋಶಾಲೆಗೆ ಚಾಲನೆ ನೀಡಿದರು. ಇನ್ನು ಪಾಲಿಕ್ಲಿನಿಕ್‌ ಕಟ್ಟಡದಲ್ಲಿ ಮಳೆ ನೀರು ಸೋರುತ್ತಿರೋದನ್ನ ಕಂಡ ಸಚಿವರು ಗರಂ ಆದ ಘಟನೆಯು ನಡೆಯಿತು.

ನೂತನ ಪಾಲಿಕ್ಲಿನಿಕ್‌ ಉದ್ಘಾಟನೆ: ವಿಜಯಪುರ ನಗರದ ಶಿಕಾರಖಾನೆಯಲ್ಲಿ ಹೊಸ ಪಾಲಿಕ್ಲಿನಿಕ್‌ ಕಟ್ಟಡವನ್ನ ಸಚಿವ ಪ್ರಭು ಚೌಹಾನ್‌ ಉದ್ಘಾಟಿಸಿದರು. ರಿಬ್ಬನ್‌ ಕಟ್‌ ಮಾಡುವ ಮೂಲಕ ನೂತನ ಕಟ್ಟಡವನ್ನ ಲೋಕಾರ್ಪನೆಗೊಳಿಸಿದರು. 1 ಕೋಟಿ 11 ಲಕ್ಷ ರೂಪಾಯಿ ವ್ಯಚ್ಚದಲ್ಲಿ ನಿರ್ಮಾಣವಾದ ಕಟ್ಟಡದ ಉದ್ಘಾಟನೆ ಬಳಿಕ ಬರಿಗಾಗಲಲ್ಲೆ ಇಡೀ ಕಟ್ಟಡವನ್ನ ಅಡ್ಡಾಡಿ ಪರಿಶೀಲಿಸಿದರು.

ಕಟ್ಟಡ ನಿರ್ಮಿಸಿದ ಇಂಜಿನಿಯರ್‌ ಗೆ ಕ್ಲಾಸ್: ನೂತನವಾಗಿ ನಿರ್ಮಾಣವಾದ ಪಾಲಿಕ್ಲಿನಿಕ್‌ ಕಟ್ಟಡ ಪರಿಶೀಲನೆ ನಡೆಸಿದ ಸಚಿವರು ಪ್ರತಿಯೊಂದು ಕೊಠಡಿಗಳನ್ನ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದರು. ಔಷಧಿ ದಾಸ್ತಾನು ಕೋಣೆಯ ಬಳಿಕ ಕೊಠಡಿಯ ಒಳಗೆ ಹೋದ ಸಚಿವ ಪ್ರಭು ಚವ್ಹಾಣ ಗರಂ ಆದ್ರು. ಕೋಣೆಯ ಒಂದು ಮೂಲೆಯಲ್ಲಿ ಮಳೆ ನೀರು ಸೋರುತ್ತಿರೋದು ಕಂಡು ಬಂತು. ಹೀಗಾಗಿ ತಕ್ಷಣವೇ ಕಟ್ಟಡ ನಿರ್ಮಾಣ ಮಾಡಿದ ಇಂಜಿನೀಯರ್‌ ನನ್ನ ಕರೆಸುವಂತೆ ಹೇಳಿದ್ರು. ಹಾಗೇ ಶಾಸಕರನ್ನು ಕರೆಯಿರಿ ಎಂದು ಶಾಸಕ ಯತ್ನಾಳರಿಗು ಕಟ್ಟಡ ನಿರ್ಮಾಣವಾದ ರೀತಿಯನ್ನ ದರ್ಶನ ಮಾಡಿಸಿದ್ರು. ಸ್ಥಳಕ್ಕೆ ಬಂದ ಇಂಜಿನೀಯರ್‌ಗೆ ಕ್ಲಾಸ್‌ ತೆಗೆದುಕೊಂಡರು. ಇದನ್ನ ಸರಿಮಾಡುವಂತೆಯೂ ವಾರ್ನ್‌ ಮಾಡಿದ್ರು.

ವಿಜಯಪುರ: ಇಬ್ಬರು ಹೆಣ್ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಕಾರಣ ಕೇಳಿದ್ರೆ ಹೌಹಾರ್ತಿರಿ..!

ಗೋವುಗಳ ಮೇಲೆ ಸಚಿವರ ಪ್ರೀತಿ: ಸಚಿವ ಪ್ರಭು ಚೌಹಾಣ್‌ರಿಗೆ ಗೋವುಗಳೆಂದರೇ ಎಲ್ಲಿಲ್ಲದ ಪ್ರೀತಿ. ಪಾಲಿ ಕ್ಲಿನಿಕ್‌ ಉದ್ಘಾಟನೆ ಬಳಿಕ ಕಟ್ಟಡದ ಒಳಗೆ ಗೋಪೂಜೆ ನಡೆಸಿದರು. ಇನ್ನು ಗೋವು ಪೂಜೆಗು ಮುನ್ನ ಕಟ್ಟಡ ಒಳ ಪ್ರವೇಶಿಸುವಾಗಲು ತಮ್ಮ ಪಾದರಕ್ಷೆ ಹೊರಗೆ ಬಿಟ್ಟು ಬರಿಗಾಲಲ್ಲಿ ಕಟ್ಟಡದ ಒಳಗೆ ಬಂದಿದ್ದು ವಿಶೇಷವಾಗಿತ್ತು. ಇನ್ನು ಬಳಿಕ ಭೂರಣಾಪುರದ ಬಳಿ ಸರ್ಕಾರಿ ಗೋಶಾಲೆ ಉದ್ಘಾಟಿಸಿದ ಪ್ರಭು ಚೌಹಾನ್‌ ಅಲ್ಲಿಯೂ ಸಹ ಗೋವುಗಳಿಗೆ ಪೂಜೆ ಸಲ್ಲಿಕೆ ಮಾಡಿದ್ರು. ಅಲ್ಲದೆ ಗೋವುಗಳ ಆರೋಗ್ಯದ ಬಗ್ಗೆ ವಿಚಾರಿಸಿದ್ದು ವಿಶೇಷವಾಗಿತ್ತು.

ಶಾಸಕ ಯತ್ನಾಳ್ ಕೈಹಿಡಿದು ಸಾಗಿದ ಪ್ರಭು ಚೌಹಾನ್: ವಿಶೇಷ ಅಂದ್ರೆ ಪಾಲಿಕ್ಲಿನಿಕ್‌ ಉದ್ಘಾಟನೆ ವೇಳೆ ಶಾಸಕ ಯತ್ನಾಳರನ್ನ ಕೈ ಹಿಡಿದು ಕರೆದುಕೊಂಡು ಬಂದ ಸಚಿವರು ಉದ್ಘಾಟನೆ ಮಾಡಿದ್ರು. ಬಳಿಕ ಸರ್ಕಾರಿ ಗೋಶಾಲೆಗೆ ತೆರಳಿದ ವೇಳೆ ಕಾರ್‌ನಿಂದ ಇಳಿದು ಶಾಸಕ ಯತ್ನಾಳರ ಕೈಹಿಡಿದುಕೊಂಡು ಸಾಗಿದ್ದು ವಿಶೇಷವಾಗಿತ್ತು. ಸರ್ಕಾರಿ ಗೋಶಾಲೆಯಲ್ಲಿ ಯತ್ನಾಳ್‌ ಹಾಗೂ ಪ್ರಭು ಚೌಹಾನ್‌ ಜೊತೆಯಾಗಿಯೇ ಕೂತು ವಿಶೇಷ ಪೂಜೆ ನಡೆಸಿಕೊಟ್ಟರು.

ಗೋರಕ್ಷಣೆಯೇ ನನ್ನ ಮೊದಲ ಗುರಿ: ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಭು ಚೌಹಾನ್‌ ಗೋ ರಕ್ಷಣೆ ನನ್ನ ಮೊದಲ ಗುರಿ ಎಂದಿದ್ದಾರೆ. ಕಳೆದ ಬಕ್ರೀದ್‌ ನಲ್ಲಿ ಗೋ ಹತ್ಯೆ ತಡೆದಿದ್ದೇವೆ. ಶೇಕಡಾ 65 ರಿಂದ 70ರಷ್ಟು ಹಸುಗಳು ಕಸಾಯಿಖಾನೆಗೆ ಹೋಗಿಲ್ಲ ಎಂದರು. ಗೋ ಹತ್ಯಾ ನಿಷೇಧ ಜಾರಿಯಾದ ಮೇಲೆ 30 ಸಾವಿರಕ್ಕು ಅಧಿಕ ಗೋವುಗಳ ರಕ್ಷಣೆ ಮಾಡಿದ್ದೇವೆ. ಅವುಗಳನ್ನ ಗೋಶಾಲೆಗಳಿಗೆ ಶಿಫ್ಟ್‌ ಕೂಡ ಮಾಡಿದ್ದೇವೆ. 900 ಕೇಸ್‌ ಬುಕ್‌ ಮಾಡಿದ್ದೇವೆ ಎಂದಿದ್ದಾರೆ. ‌

ಬಕ್ರೀದ್‌ ಒಂದೆ ದಿನ 700 ಗೋವು ರಕ್ಷಣೆ: ಬಕ್ರೀದ್‌ ದಿನ ಗೋವುಗಳ ರಕ್ಷಣೆಗೆಂದು ಎಲ್ಲ ಕಡೆಗಳಲ್ಲು ಸೂಕ್ತ ಕ್ರಮ ಕೈಗೊಂಡಿದ್ದೇವು. ಪೊಲೀಸ್‌ ಇಲಾಖೆ, ಜಿಲ್ಲಾಡಳಿತಗಳು ಸಹಕಾರ ನೀಡಿದ್ವು. ಹೀಗಾಗಿ ಬಕ್ರೀದ್‌ ಒಂದೆ ದಿನ 700 ಗೋವುಗಳನ್ನ ರಕ್ಷಣೆ ಮಾಡಿದ್ದೇವೆ ಎಂದಿದ್ದಾರೆ. 54 ಪ್ರಕರಣ ದಾಖಲು ಮಾಡಲಾಗಿದೆ. 58 ಜನರನ್ನ ಅರೆಸ್ಟ್‌  ಕೂಡ ಮಾಡಲಾಗಿದೆ. ನಮ್ಮ ಗುರಿ ಒಂದೇ ಅದು ಗೋವುಗಳ ರಕ್ಷಣೆ ಎಂದಿದ್ದಾರೆ.

ದೇಶಿ ತಳಿ ರಕ್ಷಣೆಗು ಕ್ರಮ ಎಂದ ಚೌಹಾನ್: ದೇಶಿ ತಳಿಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದ ಪ್ರಭು ಚೌಹಾನ್‌, ಸರ್ಕಾರ ಬಂದ ಬಳಿಕ ಗೋಮಾತಾ ಸಹಕಾರಿ ಸಂಘ ಸ್ಥಾಪಿಸಿದ್ದೇವೆ. ಮುಖ್ಯಮಂತ್ರಿಗಳ ಪುಣ್ಯಕೋಟಿ ಯೋಜನೆ ಜಾರಿಗೆ ತರ್ತಿದ್ದೇವೆ. ದೇಶಿ ಗೋ ತಳಿ ರಕ್ಷಣೆಗೆ ಹಲವು ಕ್ರಮಗಳನ್ನ ಕೈಗೊಳ್ತಿದ್ದೇವೆ. ಹಸುಗಳು ಕಸಾಯಿಖಾನೆಗೆ ಹೋಗಬಾರದು ಅನ್ನೋದೆ ನಮ್ಮ ಆಶಯ ಎಂದಿದ್ದಾರೆ.

ಕಾಂಗ್ರೆಸ್ ಒಳಜಗಳ ನಮಗೆ ಲಾಭ: ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಭು ಚೌಹಾನ್‌ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕಿಂತ ಹೆಚ್ಚು ಸ್ಥಾನಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಬಗ್ಗೆ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ, ಮಾಡಲಿ ಬಿಡಿ. ಆದರೆ, ಕಾಂಗ್ರೆಸ್ನಲ್ಲಿಯೇ ಒಳಜಗಳ ಹೆಚ್ಚಾಗಿದೆ. ಇದು ಬಿಜೆಪಿಗೆ ಶೇ.100ರಷ್ಟು ಲಾಭ ಪಡೆಯಲಿದೆ. ಜಗಳ ಅವರದ್ದು, ಲಾಭ ನಮ್ಮದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.‌ ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಕೇಂದ್ರದಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತಮ ಕೆಲಸ ನಡೆಸುತ್ತಿರುವ ಕಾರಣ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.

ನೇಮಕಾತಿಗೆ ಕಾನೂನು ತೊಡಕು: ಪಶು ಇಲಾಖೆಯಲ್ಲಿ ಒಂದು ಸಾವಿರ ಹುದ್ದೆಗಳು ಖಾಲಿ ಇದ್ದವು. ಅದರಲ್ಲಿ ಈಗಾಗಲೇ 400 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನೂ ಬಾಕಿ ಇರುವ ಹುದ್ದೆಗಳ ನೇಮಕಾತಿ ಮಾಡಲು ಸರ್ಕಾರ ಸಿದ್ದವಿದೆ. ಆದರೆ, ಕೆಲವರು ಈ ವಿಚಾರವಾಗಿ ಕಾನೂನು ಹೋರಾಟ ಮಾಡುತ್ತಿರುವ ಕಾರಣ ಹುದ್ದೆಗಳ ಭರ್ತಿ ವಿಳಂಬವಾಗುತ್ತಿದೆ ಎಂದು ಪ್ರಭು ಚವ್ಹಾಣ್ ಹೇಳಿದರು.

Vijayapura: ಆಜಾದಿ ಕಾ ಅಮೃತ ಮಹೋತ್ಸವ: ಡಿಸಿ ಪೂರ್ವಭಾವಿ ಸಭೆ!

ಪ್ರವಾಹದಲ್ಲಿ ಗೋವು ಕಳೆದುಕೊಂಡವರಿಗೆ ಪರಿಹಾರ: ಸದ್ಯ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಸಮಯದಲ್ಲಿ ಮೂಕ ಪ್ರಾಣಿಗಳ ಜೀವ ಹಾನಿ ಹೆಚ್ಚಾಗಿದೆ. ಮೊದಲು ಅವುಗಳ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಜೀವಹಾನಿಯಾದ ಪ್ರಾಣಿಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಯತ್ನಾಳ ಎದುರು ಬಿಎಸ್ವೈ ಹೊಗಳಿದ ಪ್ರಭು: ಯಡಿಯೂರಪ್ಪ ವಿರುದ್ಧ ವಾಗ್ದಾಳಿ‌ ನಡೆಸುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗೋ ಶಾಲೆ ಕಾರ್ಯಕ್ರಮದಲ್ಲಿ ಸಚಿವರೊಂದಿಗೆ ಉಪಸ್ಥಿತರಿದ್ದರು. ಈ ವೇಳೆ ಸಚಿವ ಪ್ರಭು ಚವ್ಹಾಣ ಪದೇ ಪದೆ ನಮ್ಮ ನಾಯಕ ಯಡಿಯೂರಪ್ಪ ಎಂದು ಹೊಗಳಿದರು. ಇದು ಯತ್ನಾಳ ಅವರಿಗೆ ಇರುಸು - ಮುರುಸು ಉಂಟು ಮಾಡುವಂತೆ ಆಗಿತ್ತು. ನಂತರ ಮಾಧ್ಯಮದವರೊಂದಿಗೂ ಯತ್ನಾಳ ಮಾತನಾಡಲು ನಿರಾಕರಿಸಿದರು.‌

Latest Videos
Follow Us:
Download App:
  • android
  • ios