Tumakur : ಜಯಪುರ, ದಿಬ್ಬೂರಿನಲ್ಲಿ ‘ನಮ್ಮ ಕ್ಲಿನಿಕ್‌’ಲೋಕಾರ್ಪಣೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ನಮ್ಮ ಕ್ಲಿನಿಕ್‌ಅನ್ನು ತುಮಕೂರು ನಗರದ ಜಯಪುರ ಹಾಗೂ ದಿಬ್ಬೂರಿನಲ್ಲಿ ಶಾಸಕ ಜ್ಯೋತಿಗಣೇಶ್‌ ಉದ್ಘಾಟಿಸಿದರು.

Inauguration of Namma Clinic in Jaipur, Dibbur snr

 ತುಮಕೂರು :ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ನಮ್ಮ ಕ್ಲಿನಿಕ್‌ಅನ್ನು ತುಮಕೂರು ನಗರದ ಜಯಪುರ ಹಾಗೂ ದಿಬ್ಬೂರಿನಲ್ಲಿ ಶಾಸಕ ಜ್ಯೋತಿಗಣೇಶ್‌ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಾಮಾನ್ಯ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಮ್ಮ ಕ್ಲಿನಿಕ್‌ಗಳನ್ನು ಘೋಷಣೆ ಮಾಡಿದ್ದು, ರಾಜ್ಯಾದ್ಯಂತ 400ಕ್ಕೂ ಹೆಚ್ಚಿನ ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸುತ್ತಿದೆ. ಅದರಲ್ಲೂ ನಗರಕ್ಕೆ 7 ನಮ್ಮ ಕ್ಲಿನಿಕ್‌ ಕೊಟ್ಟಿರುವುದು ವಿಶೇಷವಾಗಿದೆ ಎಂದ ಅವರು, ಮೊದಲನೆಯದು ಮೆಳೇಕೋಟೆಯಲ್ಲಿ, ನಂತರ ಮರಳೂರು ದಿಣ್ಣೆಯಲ್ಲಿ ಆರಂಭಿಸಿದ್ದು, ಇಂದು ಜಯಪುರ ಮತ್ತು ದಿಬ್ಬೂರಿನಲ್ಲಿ ಲೋಕಾರ್ಪಣೆ ಮಾಡಲಾಗಿದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ನಮ್ಮ ಕ್ಲಿನಿಕ್‌ನ್ನು ನೀಡಲಾಗಿದೆ. ನಗರದ 35 ವಾರ್ಡ್‌ಗಳಿಗೆ ಒಟ್ಟು 14 ಆರೋಗ್ಯ ಕೇಂದ್ರಗಳು ಜನರ ಆರೋಗ್ಯ ಕಾಪಾಡಲು ಸದಾ ಕಾರ್ಯನಿರತವಾಗಿರುತ್ತವೆ ಎಂದರು.

ಸಾರ್ವಜನಿಕ ಆಸ್ಪತ್ರೆಗೆ ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಸಣ್ಣಪುಟ್ಟಕಾಯಿಲೆಗಳಿಗೆ ಚಿಕಿತ್ಸೆಗಾಗಿ ಬರುತ್ತಿದ್ದ ಜನರ ಸಂಖ್ಯೆ ನಮ್ಮ ಕ್ಲಿನಿಕ್‌ಗಳಿಂದಾಗಿ ಕಡಿಮೆಯಾಗಲಿದೆ. ಜನರಿಗೆ ಆರೋಗ್ಯಭಾಗ್ಯ ಕೊಡುವಂತಹ ಕಲ್ಪನೆ ಈ ನಮ್ಮ ಕ್ಲಿನಿಕ್‌ನದ್ದಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ನಮ್ಮ ಕ್ಲಿನಿಕ್‌ಗಳು ನಗರ ಪ್ರದೇಶದ ಸಮುದಾಯಕ್ಕೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಸದುದ್ದೇಶ ಹೊಂದಿದ್ದು, ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ನಿರಂತರ ಆರೋಗ್ಯ ಪಾಲನೆಯನ್ನು ಖಾತ್ರಿಪಡಿಸುವ ಮತ್ತು ಕೆಳಹಂತದಿಂದ ಹಾಗೂ ಮೇಲಿನ ಹಂತದ ಸೇವೆಗಳನ್ನು ನೀಡುವ ಆಸ್ಪತ್ರೆಗಳಿಗೆ ರೆಫರಲ್‌ ಸೇವೆಗಳ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ ಎಂದರು.

30 ರಿಂದ 60 ಸಾವಿರ ಜನರಿಗೊಂದು ಕ್ಲಿನಿಕ್‌:

ಆರೋಗ್ಯ ಸೇವೆಗಳು ಅತ್ಯವಶ್ಯವಿರುವ ಜನಸಂಖ್ಯೆಯ ಮೌಲ್ಯಮಾಪನ ಮತ್ತು ನಗರ ಪ್ರದೇಶಗಳ ಮ್ಯಾಪಿಂಗ್‌ ಆಧಾರದ ಮೇಲೆ ಪ್ರಸ್ತುತ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೌಲಭ್ಯಗಳಿಲ್ಲದ ಕೊಳಗೇರಿ/ ದುರ್ಬಲ ಪ್ರದೇಶಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರತಿ 30,000 ದಿಂದ 60,000 ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಜಿಲ್ಲೆಗೆ 10 ಕ್ಲಿನಿಕ್‌:

ಮೇಯರ್‌ ಪ್ರಭಾವತಿ ಸುಧೀಶ್ವರ್‌ ಮಾತನಾಡಿ, ರಾಜ್ಯ ಸರ್ಕಾರ ತುಮಕೂರು ಜಿಲ್ಲೆಗೆ 10 ನಮ್ಮ ಕ್ಲಿನಿಕ್‌ ನೀಡಿದ್ದು, ಅದರಲ್ಲೂ ತುಮಕೂರು ನಗರಕ್ಕೆ 7 ನಮ್ಮ ಕ್ಲಿನಿಕ್‌ ನೀಡಿರುವುದು ಜನರ ಆರೋಗ್ಯ ಕಾಳಜಿಯ ಪ್ರತೀಕವಾಗಿದೆ ಎಂದರಲ್ಲದೆ, ನಗರದಲ್ಲಿ ಆರಂಭವಾಗುತ್ತಿರುವ ನಮ್ಮ ಕ್ಲಿನಿಕ್‌ಗಳ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪಮೇಯರ್‌ ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ನಯಾಜ್‌ ಅಹಮದ್‌, ವೀಣಾ, ಡಿಹೆಚ್‌ಓ ಡಾ. ಮಂಜುನಾಥ್‌, ಆರ್‌ಸಿಎಚ್‌ ಅಧಿಕಾರಿ ಡಾ. ಕೇಶವರಾಜು, ಆಂಜಿನಪ್ಪ, ಹೇಮಂತರಾಜು ಇತರರಿದ್ದರು.

Latest Videos
Follow Us:
Download App:
  • android
  • ios