ಮೈಸೂರು(ಜು.26): ಸಾರಿಗೆ ಚಾಲಕನ‌ ಸಮಯ ಪ್ರಜ್ಞೆಯಿಂದ‌ ಭಾರೀ ದುರಂತವೊಂದು ತಪ್ಪಿದೆ. ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ ಬ್ರೇಕ್ ಏರ್ ಪೈಪ್‌ ತುಂಡಾಗಿ ಬಸ್‌ ಹಿಮ್ಮುಖವಾಗಿ ಚಲಿಸುತ್ತಿತ್ತು. ಹಿಂದಿನಿಂದ ಬರುತ್ತಿದ್ದ ಇನ್ನೊಂದು ಸಾರಿಗೆ ಬಸ್‌ನ ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸಲಿದ್ದ ಭಾರೀ ಅನಾಹುತ ತಪ್ಪಿದೆ.

ಹಿಮ್ಮುಖವಾಗಿ ಚಲಿಸಿದ ಬಸ್:

ಬ್ರೇಕ್ ಏರ್ ಪೈಪ್ ತುಂಡಾಗಿ ಬಸ್‌ ಹಿಮ್ಮುಖವಾಗಿ ಹಳ್ಳದತ್ತಾ ನುಗ್ಗುತ್ತಿತ್ತು. ಬ್ರೇಕ್ ಏರ್ ಪೈಪ್ ಕಟ್ಟಾಗಿ ಹಿಮ್ಮುಖವಾಗಿ ಚಲಿಸುತ್ತಿದ್ದ ಬಸ್ ನ ಹಿಂದಿದ್ದ ಮತ್ತೊಂದು ಬಸ್‌ಗೆ ಡಿಕ್ಕಿಯಾಗಿದೆ. ಹಿಂದೆ ಬರುತ್ತಿದ ಸಾರಿಗೆ ಬಸ್ ಚಾಲಕ ಮದೇವಸ್ವಾಮಿ ಎಸ್ ತನ್ನ ಬಸ್‌ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬ್ರೇಕ್ ಏರ್ ಪೈಪ್ ಕಟ್ಟಾಗಿ ಹಿಮ್ಮುಖವಾಗಿ ಬರುತ್ತಿದ್ದ ಬಸ್ ನಿಂತಿದೆ.

3ನೇ ಮಹಡಿಯಿಂದ ಕಳೆಗೆ ಬಿತ್ತು ಮರ್ಸಡೀಸ್ ಕಾರು-ಚಾಲಕ ಅಪಾಯದಿಂದ ಪಾರು!

ಬಳಿಕ ನಿಧಾನವಾಗಿ ರಸ್ತೆ ತಡೆಗೋಡೆಗೆ ಬಸ್ ಹಿಂಭಾಗ ತಾಕಿದ್ದು ಪ್ರಯಾಣಿಕರು ಸೇಫ್ ಆಗಿದ್ದಾರೆ. ಚಾಲಕ ಹಾಗೂ ನಿರ್ವಾಹಕ ಮಹದೇವ ಸ್ವಾಮಿ ಎಸ್ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಮಹದೇವಸ್ವಾಮಿ ಎಸ್ ಕೊಂಚ ಯಾಮಾರಿದ್ರೂ ಭಾರಿ ಅವಘಡ ಸಂಭವಿಸುವ ಸಾಧ್ಯತೆ ಇತ್ತು.

ನಾಲ್ಕನೇ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡೇಶ್ವರಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಸಾರ್ವಜನಿಕರನ್ನು ಬೆಟ್ಟಕ್ಕೆ ಕರೆದೊಯ್ಯಲು ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಖಾಸಗಿ ವಾಹನಗಳನ್ನು‌ ಬೆಟ್ಟದ ಮೇಲಕ್ಕೆ ಬಿಡುತ್ತಿಲ್ಲ. ಸಾರಿಗೆ ಬಸ್‌ನ ಬ್ರೇಕ್ ಏರ್ ಪೈಪ್ ಕಟ್ಟಾಗಿದ್ದರಿಂದ ಸ್ಥಳದಲ್ಲಿ‌ ಕೆಲ ಕಾಲ ಗೊಂದಲ ಉಂಟಾಗಿತ್ತು. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಬಂದ ಸಾರಿಗೆ ಅಧಿಕಾರಿಗಳು ಕೆಟ್ಟುನಿಂತ ಬಸ್‌ನ್ನು ತೆರವುಗೊಳಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ