ಬೆಂಗಳೂರು: ಸಿದ್ಧಾರ್ಥ ನೆನಪಿಗೆ ಉಚಿತ ಕಾಫಿ ವಿತರಣೆ

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ನಿಗೂಢ ಸಾವಿನ ವಿಚಾರಗಳು ತನಿಖೆಯ ಹಂತದಲ್ಲಿವೆ. ಆದರೆ ಅವರ ಸ್ಮರಣಾರ್ಥವಾಗಿ ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘ ಉಚಿತವಾಗಿ ಕಾಫಿ ವಿತರಣೆ ಮಾಡಿದೆ.

in memory of ccd founder siddhartha free coffee Distribution Rajajinagar

ಬೆಂಗಳೂರು[ಆ. 04]   ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಸ್ಮರಣಾರ್ಥ ಉಚಿತವಾಗಿ ಕಾಫಿ ವಿತರಣೆ ಮಾಡಲಾಗಿದೆ. ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘದ ಕಾಫಿ ವಿತರಿಸಿದೆ.

ಬೆಳಗ್ಗೆ 9 ಗಂಟೆ ಇಂದ 11 ಗಂಟೆ ವರೆಗೆ ಫ್ರೀ ಕಾಫಿ ವಿತರಣೆ ಮಾಡಲಾಗಿದೆ. ರಾಜಾಜಿನಗರದ ಸುಮಧರ್ ಹೋಟಲ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಉಚಿತವಾಗ ಕಾಫಿ ನೀಡಲಾಯಿತು. 

ಮಾರ್ಗ ಮಧ್ಯೆ ಸಿದ್ಧಾರ್ಥ ಪೋಸ್ಟ್ ಮಾಡಿದ ಪತ್ರದಲ್ಲಿದ್ದ ವಿಳಾಸ!?

ಕರ್ನಾಟಕದ ಕಾಫಿಯನ್ನು ಅಂತರಾಷ್ಟೀಯ ಮಟ್ಟಕ್ಕೆ  ಕೊಂಡೊಯ್ದ ಕೀರ್ತಿ ಸಿದ್ದಾರ್ಥರವರಿಗೆ ಸಲ್ಲಬೇಕು. ಸಿದ್ಧಾರ್ಥ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಫ್ರೀ ಕಾಫಿ ವಿತರಣೆ ಮಾಡಿದ್ದೇವೆ ಎಂದು ಸಂಘಟಕರು ತಿಳಿಸಿದರು.

Latest Videos
Follow Us:
Download App:
  • android
  • ios