Asianet Suvarna News Asianet Suvarna News

ಕ್ರೀಡೆಯಿಂದ ಮನುಷ್ಯನ ಆರೋಗ್ಯ ಸುಧಾರಣೆ

ಕ್ರೀಡೆಯಿಂದ ಮನುಷ್ಯನ ಆರೋಗ್ಯ ಸದೃಢವಾಗಿರುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಅಭಿಪ್ರಾಯಪಟ್ಟರು.

Improving human health through sports   snr
Author
First Published Oct 10, 2023, 7:29 AM IST

  ಹುಲ್ಲಹಳ್ಳಿ :  ಕ್ರೀಡೆಯಿಂದ ಮನುಷ್ಯನ ಆರೋಗ್ಯ ಸದೃಢವಾಗಿರುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಅಭಿಪ್ರಾಯಪಟ್ಟರು.

ಹುಲ್ಲಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಸಂಪತ್ ಜ್ಯೋತಿ ಟ್ರಸ್ಟ್ ಆಯೋಜಿಸಿದ್ದ 5ನೇ ವರ್ಷದ ತಾಲೂಕು ಮಟ್ಟದ ಖೋ ಖೋ ಪಂದ್ಯಾವಳಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗಳಿಂದ ಆರೋಗ್ಯ ಸುಧಾರಿಸಲಿದೆ, ಹೀಗಾಗಿ 10 ಆಸ್ಪತ್ರೆ ನಿರ್ಮಾಣಕ್ಕಿಂತ ಒಂದು ಕ್ರೀಡಾಂಗಣ ನಿರ್ಮಿಸುವುದು ಸೂಕ್ತವೆನ್ನುವ ಮಾತಿದೆ. ಆಟೋಟಗಳಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಇದ್ದರಿಂದ ಆಸ್ಪತ್ರೆಗೆ ಹೋಗುವುದು ತಪ್ಪುತ್ತದೆ, ಜೊತೆಗೆ ಪ್ರತಿಯೊಬ್ಬರು ಶಿಕ್ಷಣದ ಜೊತೆಗೆ ಕ್ರೀಡಕೂಟ ಮುಖ್ಯವಾಗಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ದೇವಮ್ಮ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಎಚ್.ಪಿ. ಲೋಕೇಶ್. ಹುಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಮುಖಂಡರಾದ ಕುರಿಹುಂಡಿ ರಾಜ, ಹುಲ್ಲಹಳ್ಳಿ ಆರೋಗ್ಯ ಸಮುದಾಯ ಭವನ ಮಕ್ಕಳ ತಜ್ಞ ಡಾ. ಧನಲಕ್ಷ್ಮಿ, ಪ್ರಯೋಜಕ ಮಾದೇವ, ಸಂಪತ್, ಜ್ಯೋತಿ ಟ್ರಸ್ಟ್ ಅಧ್ಯಕ್ಷ ಮಧುಕರ್, ಹೋಟೆಲ್ ಮಾಲೀಕರಾದ ಮಹಾದೇವಸ್ವಾಮಿ, ನಂದೀಶ, ಹುಲ್ಲಹಳ್ಳಿ ಮಹದೇವಸ್ವಾಮಿ, ಡಿಎಸ್ ಎಸ್ ಮಹೇಶ್, ತುಕಾರ ಇದ್ದರು.

ಪಂದ್ಯದಲ್ಲಿ ವಿಜೇತರಾದ ತಂಡಗಳಿಗೆ ಶಾಸಕ ದರ್ಶನ ಧ್ರುವನಾರಾಯಣ್ ಬಹುಮಾನ ವಿತರಿಸಿದರು.

Follow Us:
Download App:
  • android
  • ios