ಮತದಾರರ ಪಟ್ಟಿಯಲ್ಲಿ ಡಬಲ್ ಎಂಟ್ರಿ ಮಾಡಿದಲ್ಲಿ ಜೈಲು ಶಿಕ್ಷೆ- ಕಲಬುರಗಿ ಡಿಸಿ ಎಚ್ಚರಿಕೆ

ಚುನಾವಣಾ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಸಹ ಉದ್ದೇಶಪೂರಕವಾಗಿ ಮತದಾರರ ಪಟ್ಟಿಯ ಇನ್ನೊಂದು ಭಾಗ ಅಥವಾ ವಿಧಾನಸಭಾ ಕ್ಷೇತ್ರದ ಪಟ್ಟಿಯಲ್ಲಿ ಹೆಸರು ಸೇರಿಸಿದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ-1951 ಸೆಕ್ಷನ್ 31ರ ಪ್ರಕಾರ ಒಂದು ವರ್ಷ ಜೈಲು ಶಿಕ್ಷೆಗೆ ಒಳಪಡಿಸುವುದಲ್ಲದೆ ಮತದಾನದಿಂದಲೂ ಡಿಬಾರ್ ಮಾಡಬೇಕಾಗುತ್ತದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಎಚ್ಚರಿಕೆ ನೀಡಿದ್ದಾರೆ.

Imprisonment for double entry in voter list Kalaburagi DC warns rav

ಕಲಬುರಗಿ (ಡಿ.30) :  ಚುನಾವಣಾ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಸಹ ಉದ್ದೇಶಪೂರಕವಾಗಿ ಮತದಾರರ ಪಟ್ಟಿಯ ಇನ್ನೊಂದು ಭಾಗ ಅಥವಾ ವಿಧಾನಸಭಾ ಕ್ಷೇತ್ರದ ಪಟ್ಟಿಯಲ್ಲಿ ಹೆಸರು ಸೇರಿಸಿದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ-1951 ಸೆಕ್ಷನ್ 31ರ ಪ್ರಕಾರ ಒಂದು ವರ್ಷ ಜೈಲು ಶಿಕ್ಷೆಗೆ ಒಳಪಡಿಸುವುದಲ್ಲದೆ ಮತದಾನದಿಂದಲೂ ಡಿಬಾರ್ ಮಾಡಬೇಕಾಗುತ್ತದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಮತದಾರರ ಪಟ್ಟಿ ಪರಿಷ್ಕರಣೆ(Revision of Electoral Roll) ಸಂದರ್ಭದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೆ ಸಲ್ಲಿಸಲಾದ ಅರ್ಜಿಗಳ ಪರಿಶೀಲನಾ ಸಂದರ್ಭದಲ್ಲಿ ಮತಪಟ್ಟಿಯಲ್ಲಿ ಹೆಸರಿದ್ದರೂ ಮತ್ತೇ ಮತ ಪಟ್ಟಿಗೆ ಹೆಸರು ಸೇರಿಸಲು ಸುಮಾರು 12 ಸಾವಿರ ಅರ್ಜಿಗಳು ಸಲ್ಲಿಕೆಯಾಗಿರುವುದು ಫೋಟೋ ಸಿಮಿಲರ್ ಎಂಟ್ರಿ ತಂತ್ರಜ್ಞಾನ(Photo Similar Entry Technology)ದಿಂದ ಪತ್ತೆಯಾಗಿದೆ.‌ ಚುನಾವಣಾ ಆಯೋಗ(Election Commission)ದ ಗಮನಕ್ಕೂ ಈ ವಿಚಾರ ತರಲಾಗಿದೆ ಎಂದರು.

ಬೆಂಗಳೂರು: ಮತದಾರರ ಮಾಹಿತಿ ಕದ್ದ ಚಿಲುಮೆ ಕಪ್ಪು ಪಟ್ಟಿಗೆ ಸೇರ್ಪಡೆ

ಕಳೆದ ಜುಲೈ-ಆಗಸ್ಟ್ ತಿಂಗಳಲ್ಲಿ ಭಾರತ ಚುನಾವಣಾ ಆಯೋಗವು ಹೊಸದಾಗಿ ಅಭಿವೃದ್ಧಿಪಡಿಸಿದ ಫೋಟೋ ಸಿಮಿಲರ್ ಎಂಟ್ರಿ ತಂತ್ರಜ್ಞಾನ ಸಹಾಯದಿಂದ ಕಲಬುರಗಿ(kalaburagi) ಜಿಲ್ಲೆಯಲ್ಲಿ 90 ಸಾವಿರಕ್ಕೂ ಹೆಚ್ಚು ಹೆಸರನ್ನು ಡಿಲಿಟ್(Delete) ಮಾಡಲಾಗಿದ್ದರು ಸಹ, ಪ್ರಸಕ್ತ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಭಾವಚಿತ್ರ ಬದಲಾಯಿಸಿ, ವಿಳಾಸ ಬದಲಾಯಿಸಿ ಸುಮಾರು 12 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ವಿಶೇಷವಾಗಿ ಕಲಬುರಗಿ ಉತ್ತರ ಮತ್ತು ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಇಂತಹ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗಿವೆ ಎಂದರು.

ಕರಡು ಮತದಾರರ ಪಟ್ಟಿ ಪ್ರಕಟಣೆ ನಂತರ ಪರಿಷ್ಕರಣೆ ಭಾಗವಾಗಿ ಅರ್ಜಿ ಸಲ್ಲಿಸಲು ಕೊನೆ ದಿನವಾದ ಡಿಸೆಂಬರ್ 8ರ ವರೆಗೆ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಹೆಸರು ಸೇರ್ಪಡೆಗೆ ನಮೂನೆ-6 ರಲ್ಲಿ ಸಲ್ಲಿಕೆಯಾದ 57,057 ಅರ್ಜಿ ಪೈಕಿ 50,891, ಹೆಸರು ತೆಗೆದು ಹಾಕಲು (ಡಿಲಿಟ್) ನಮೂನೆ-7ರಲ್ಲಿ ಸಲ್ಲಿಕೆಯಾದ 43,033 ಅರ್ಜಿ ಪೈಕಿ 36,319 ಹಾಗೂ ವರ್ಗಾವಣೆ ಮತ್ತು ತಿದ್ದುಪಡಿಗೆ ನಮೂನೆ-8 ರಲ್ಲಿ ಸಲ್ಲಿಕೆಯಾದ 10,772 ಅರ್ಜಿ ಪೈಕಿ 9,863 ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ನಿಧನ ಮತ್ತು ಡಬಲ್ ಎಂಟ್ರಿ ಪ್ರಕರಣದಲ್ಲಿ ಒಟ್ಟಾರೆ ಜಿಲ್ಲೆಯಾದ್ಯಂತ 36,319 ಹೆಸರನ್ನು ಡಿಲಿಟ್ ಮಾಡಲಾಗಿದೆ ಎಂದು ಡಿ.ಸಿ. ಮಾಹಿತಿ ನೀಡಿದರು.

ಶುದ್ಧ ಮತಪಟ್ಟಿ ಸಿದ್ಧಪಡಿಸಲು ಸಹಕರಿಸಿ:

ಜಿಲ್ಲೆಯಲ್ಲಿ ವಾಸಿಸುವ ಮತದಾರರು ವಾಸ ಸ್ಥಳ ಬದಲಾಯಿಸಿದಲ್ಲಿ, ನಮೂನೆ 8ರಲ್ಲಿ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಎರಡು ಕಡೆ ಪ್ರತ್ಯೇಕ ಮತಪಟ್ಟಿಯಲ್ಲಿ ಹೆಸರು ಸೇರಿಸಬಾರದು. ಹಳ್ಳಿ ಮತ್ತು ಪಟ್ಟಣದಲ್ಲಿಯೂ ಮತ ಚಲಾಯಿಸುವೆ ಎಂದರೇ ಸಾಧ್ಯವಿಲ್ಲ, ಅದು ದುರ್ನಡತೆಯಾಗುತ್ತದೆ. ದೇಶದಲ್ಲಿ ಎಲ್ಲಾದರೂ ಒಂದು ಕಡೆ ಮಾತ್ರ ಮತಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ. ಹೀಗಾಗಿ ಜಿಲ್ಲೆಯ ಸಾರ್ವಜನಿಕರು ತುಂಬಾ ಜಾಗ್ರತೆ ವಹಿಸಬೇಕು. ಮನೆಗೆ ಬರುವ ಬಿ.ಎಲ್.ಓ.ಗಳಿಗೆ ಅಗತ್ಯ ಮಾಹಿತಿ ನೀಡಿ ಸಹಕಾರ ನೀಡುವ ಮೂಲಕ ಪಾರದರ್ಶಕವಾಗಿ, ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಸಹಕರಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಮನವಿ ಮಾಡಿದ್ದಾರೆ.

Voters data Theft Case: ಮತದಾರ ಪಟ್ಟಿ ಪರಿಷ್ಕರಣೆ ಅಕ್ರಮ: ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತ್ತು ಆದೇಶ ವಾಪಸ್

ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಮತ್ತೆ ಸೇರ್ಪಡೆಗೆ ಮುಂದಾಗುತ್ತಿರುವುದರ ಹಿಂದೆ ಏನಾದ್ರೂ ಇದೆಯಾ ? ಇದು ಬಲ್ಕನಲ್ಲಿ ನಡೆಯುತ್ತಿದೆಯಾ ? ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುವುದು.  ಐಪಿ ಅರ್ಡೆಸ್ ಪತ್ತೆ ಹಚ್ಚುವ ಮೂಲಕ ಇದನ್ನು ಸುಲಭವಾಗಿ ಗುರುತಿಸಬಹುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios