ಹಾಸನ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್‌ ಟವರ್‌ಗೆ ಪ್ರಾಮುಖ್ಯತೆ: ಸಂಸದ ಪ್ರಜ್ವಲ್ ರೇವಣ್ಣ

ಜಿಲ್ಲೆಯಲ್ಲಿ ಭಾರತ್ ಸಂಚಾರ ನಿಗಮ ಲಿಮಿಟೆಡ್‌ನ ಟವರ್‌ಗೆ ಪ್ರಾಮುಖ್ಯತೆ ನೀಡಲಾಗಿದ್ದು, ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಗತ್ಯವಿರುವ ಕಡೆಗಳಲ್ಲಿ 11 ಟವರ್ ಕೆಲಸ ನಡೆಯುತ್ತಿದೆ ಎಂದು ಸಂಸದರಾದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.

Importance of BSNL tower in Hassan district Says MP Prajwal Revanna gvd

ಹಾಸನ (ಅ.28): ಜಿಲ್ಲೆಯಲ್ಲಿ ಭಾರತ್ ಸಂಚಾರ ನಿಗಮ ಲಿಮಿಟೆಡ್‌ನ ಟವರ್‌ಗೆ ಪ್ರಾಮುಖ್ಯತೆ ನೀಡಲಾಗಿದ್ದು, ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಗತ್ಯವಿರುವ ಕಡೆಗಳಲ್ಲಿ 11 ಟವರ್ ಕೆಲಸ ನಡೆಯುತ್ತಿದೆ ಎಂದು ಸಂಸದರಾದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ. ನಗರದ ಜಿಲ್ಲಾ ಪಂಚಾಯತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ಭಾರತ್ ಸಂಚಾರ ನಿಗಮ ಲಿಮಿಟೆಡ್ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿ. ಎಸ್. ಎನ್. ಎಲ್ ನೆಟ್‌ವರ್ಕ್‌ ಬೇಕು ಎಂದು ಗ್ರಾಮದ ಜನರಿಂದ ಬೇಡಿಕೆ ಬಂದಿದೆ. 

ಈ ನಿಟ್ಟಿನಲ್ಲಿ ಈಗ ಇರುವ 2g ಹಾಗೂ 3g ನೆಟ್ ವರ್ಕ್‌ಗಳನ್ನು ನಿರ್ಭರ ಯೋಜನೆಯಡಿಯಲ್ಲಿ 4g ಯಾಗಿ ಪರಿವರ್ತನೆಗಾಗಿ 194 ಟವರ್‌ಗಳಲ್ಲಿ ಕೆಲಸ ನಡೆಯುತ್ತಿದೆ. ಉಳಿದ 106 ಟವರ್‌ಗಳನ್ನು ಮುಂದಿನ ಹಂತದಲ್ಲಿ ಕ್ಯೆಗೆತ್ತಿ ಕೊಳ್ಳಲಾಗುವುದು ಎಂದು ಸಂಸದರು ತಿಳಿಸಿದರು. ಜಿಲ್ಲೆಯಲ್ಲಿ ಅಳವಡಿಸಿರುವ ಒಟ್ಟು ಟವರ್ ಹಾಗೂ ಅವುಗಳ ಕಾರ್ಯ ನಿರ್ವಹಣೆ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಮಾಹಿತಿ ಕಲೆ ಹಾಕಿದರು. ಹಾಸನ ಜಿಲ್ಲೆಯಲ್ಲಿ ಹೆಚ್ಚುವರಿ 4ಜಿ ಟವರ್‌ಗಳನ್ನು ಸ್ಥಾಪಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದ ಅವರು, ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿ.ಎಸ್.ಎನ್. ಎಲ್ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು, ತಮ್ಮ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ಟವರ್ ಅಳವಡಿಕೆಗೆ ಜಾಗದ ಸಮಸ್ಯೆ ಹಾಗೂ ಭೂ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಗೊಂದಲ ಇದ್ದಲ್ಲಿ ತನ್ನ ಗಮನಕ್ಕೆ ತಂದು ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು. ಇಡೀ ರಾಜ್ಯದಲ್ಲಿ 17 ಪೋಸ್ಟ್ ಆಫೀಸ್‌ಗಳ ಸ್ಥಾಪನೆಗೆ ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ ಹಾಸನ ಜಿಲ್ಲೆಗೆ 2 ಪೋಸ್ಟ್ ಆಫೀಸ್ ನಿರ್ಮಾಣಕ್ಕೆ ಭಾರತ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.

ನಟಿ ಶುಭಾ ಪೂಂಜಾರ ಜೊತೆ ಅಸಭ್ಯ ವರ್ತನೆ ಎನ್ನುವುದು ಸತ್ಯಕ್ಕೆ ದೂರ: ಸ್ಥಳೀಯರ ವಾದ

ಸಭೆಯಲ್ಲಿ ಭಾಗವಹಿಸಿದ್ದ ಶಾಸಕರಾದ ಎಚ್. ಡಿ. ರೇವಣ್ಣ ಅವರು ಮಾತನಾಡಿ, ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಪ್ಪಿಸಲು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಾಗತಿಹಳ್ಳಿ, ಬ್ಯಾಡರಹಳ್ಳಿ ಗೇಟ್, ಬೂಕನಬೆಟ್ಟ ಗ್ರಾಮದ ಕ್ರಾಸ್, ಮಾದಿಹಳ್ಳಿ, ಗೌಡಗೆರೆ ಗ್ರಾಮದ ಕ್ರಾಸ್, ಮಲ್ಲವನಘಟ್ಟ ಗ್ರಾಮದ ಕ್ರಾಸ್, ಜೋಗಿಪುರ ಗ್ರಾಮದ ಕ್ರಾಸ್, ಚಿಕ್ಕಗುಂಡೆನಹಳ್ಲಿ, ದೊಡ್ಡ ಮತ್ತಿಘಟ್ಟ ಮತ್ತು ಗುಲಸಿಂದ, ಕತ್ರಿಘಟ್ಟ ಗೇಟ್ ಮತ್ತು ಚೌಡೇನಹಳ್ಳಿ, ಮಳಲಿ ಕ್ರಾಸ್ ಶಾಂತಿಗ್ರಾಮ ಟೋಲ್ ಹತ್ತಿರ, ತ್ಯಾವೆಹಳ್ಳಿ ಮತ್ತು ಜಿ ಮೈನಹಳ್ಳಿ ನಡುವಿನ ಕೆ.ಇ.ಬಿ ಸಬ್ ಸ್ಟೇಷನ್ ಬಳಿ ಸೇರಿದಂತೆ ಒಟ್ಟು 12 ಫ್ಲೈ ಓವರ್ ನಿರ್ಮಾಣಕ್ಕೆ ೪೨೮ ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios