ರೈತರ ಸಮಗ್ರ ಅಭಿವೃದ್ಧಿಗೆ ಯೋಜನೆಗಳು ಜಾರಿ: ಸಂಸದ ರಾಘವೇಂದ್ರ
ವಿಜ್ಞಾನ ಎಷ್ಟೇ ಮುಂದುವರಿದರೂ ರೈತ ಕಷ್ಟಪಟ್ಟು ಬೆಳೆ ಬೆಳೆಯದಿದ್ದರೆ ಆಹಾರವನ್ನು ಕೃತಕವಾಗಿ ಸೃಷ್ಠಿಸಲು ಅಸಾಧ್ಯ. ಈ ಹಿನ್ನೆಲೆಯಲ್ಲಿ ರೈತರ ಸಮಗ್ರ ಅಭಿವೃದ್ಧಿಗೆ ತಾಲೂಕಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿಕಾರಿಪುರ (ಫೆ.10) : ವಿಜ್ಞಾನ ಎಷ್ಟೇ ಮುಂದುವರಿದರೂ ರೈತ ಕಷ್ಟಪಟ್ಟು ಬೆಳೆ ಬೆಳೆಯದಿದ್ದರೆ ಆಹಾರವನ್ನು ಕೃತಕವಾಗಿ ಸೃಷ್ಠಿಸಲು ಅಸಾಧ್ಯ. ಈ ಹಿನ್ನೆಲೆಯಲ್ಲಿ ರೈತರ ಸಮಗ್ರ ಅಭಿವೃದ್ಧಿಗೆ ತಾಲೂಕಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಾಲೂಕಿನ ಈಸೂರು ಗ್ರಾಮದಲ್ಲಿ ಅಗಸನಹೊಳೆಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ನೀರಾವರಿ ಸೌಲಭ್ಯ ಇಲ್ಲದ ತಾಲೂಕಿನ ಎಲ್ಲ ಗ್ರಾಮಕ್ಕೆ ತುಂಗಭದ್ರಾ ನೀರು ಹರಿಸುವ ಯೋಜನೆ, ಅಂಜನಾಪುರ ಜಲಾಶಯಕ್ಕೆ ತುಂಗಾ ನೀರು ಹರಿಸುವ ಯೋಜನೆ, ಕಾಳೇನಹಳ್ಳಿ ಸಮೀಪ ಕಸಬಾ ಏತ ನೀರಾವರಿ(lift irrigaation) ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. 11ಕ್ಕೂ ಹೆಚ್ಚು ವಿದ್ಯುತ್ ಸ್ಟೇಷನ್, ಟಿಸಿ ದುರಸ್ತಿ ಕೇಂದ್ರ ಮಾಡಲಾಗಿದೆ. ಕೆರೆ ಹೂಳೆತ್ತುವ, ನಾಲೆ ಸ್ವಚ್ಛಗೊಳಿಸುವ ಹೀಗೆ ಹಲವು ರೈತಪರ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
ಕ್ಷೇತ್ರ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿಲ್ಲ: ಸಂಸದ ಬಿ.ವೈ.ರಾಘವೇಂದ್ರ
ಇದೀಗ .500 ಲಕ್ಷ ವೆಚ್ಚದಲ್ಲಿ ಅಂದಾಜು 500 ಎಕರೆಯಷ್ಟುಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಅದು ಆದಷ್ಟುಬೇಗನೇ ಪೂರ್ಣಗೊಳ್ಳಲಿದೆ. ಹೀಗೆ ತಾಲೂಕಿನ ಜನತೆ ಋುಣ ತೀರುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ರಾಜ್ಯದಲ್ಲೂ ರೈತರ ಸಮಗ್ರ ಅಭಿವೃದ್ಧಿ ಹಲವು ಯೋಜನೆ ನೀಡಿದೆ. ಜನತೆ ಮತ್ತೊಮ್ಮೆ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಫೆ.27ಕ್ಕೆ ಶಿವಮೊಗ್ಗ- ರಾಣೇಬೆನ್ನೂರು ರೈಲ್ವೆ ಮಾರ್ಗಕ್ಕೆ ಶಂಕುಸ್ಥಾಪನೆ, ವಿಮಾನ ನಿಲ್ದಾಣ(Shivamogga Airport) ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ನೆರವೇರಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟದಿಂದ ದೇಶದ ಗಮನ ಸೆಳೆದ ಈಸೂರು ಗ್ರಾಮದಲ್ಲಿ ಹೋರಾಟಗಾರರ ಸ್ಮಾರಕ ನಿರ್ಮಾಣ ಆಗುತ್ತಿದೆ. ವಚ್ರ್ಯುಯಲ್ ಮೂಲಕ ಪ್ರಧಾನಿ ಅವರಿಂದ ಉದ್ಘಾಟನೆ ಮಾಡಿಸಲಾಗುವುದು. ತಾಲೂಕಿನಲ್ಲಿ ಈಗಿರುವ ಏತ ನೀರಾವರಿ ಯೋಜನೆಯ ಮೋಟಾರ್‌ಗಳನ್ನು ಬಳಸದಿದ್ದರೂ ತಿಂಗಳಿಗೆ .1 ಕೋಟಿ ವಿದ್ಯುತ್ ವೆಚ್ಚ ಬರುತ್ತಿದೆ. ನಾವು ಇಷ್ಟೆಲ್ಲಾ ಅಭಿವೃದ್ಧಿ ಯೋಜನೆ ತಾಲೂಕಿಗೆ ನೀಡಿದ್ದು, ಅಭಿವೃದ್ಧಿ ತೇರನ್ನು ಎಳೆದುಕೊಂಡು ಹೋಗುವ ಸಮರ್ಥ ವ್ಯಕ್ತಿ ಚುನಾವಣೆಯಲ್ಲಿ ಗೆಲ್ಲದೇಹೋದರೆ ಕಷ್ಟವಾಗುತ್ತದೆ. ಸಮರ್ಥ ವ್ಯಕ್ತಿ ಗೆಲ್ಲದಿದ್ದರೆ ನಾವು ನಿರ್ಮಿಸಿರುವ ಸಮುದಾಯ ಭವನಕ್ಕೆ ಸುಣ್ಣ ಬಣ್ಣ ಹೊಡೆಯುವುದಕ್ಕೆ ಆಗುವುದಿಲ್ಲ. ಅದಕ್ಕಾಗಿ ಬಿ.ವೈ.ವಿಜಯೇಂದ್ರ ಅವರಿಗೆ ಜನತೆ ಆಶೀರ್ವಾದ ಮಾಡಬೇಕು ಎಂದರು. ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಉಗ್ರಾಣ ನಿಗಮ ಅಧ್ಯಕ್ಷ ಎಚ್.ಟಿ.ಬಳಿಗಾರ್, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ, ರುದ್ರಪ್ಪಯ್ಯ, ರಮೇಶ ನಾಯ್ಕ ಇತರರಿದ್ದರು.
ವಿಎಸ್‌ಐಎಲ್ ಉಳಿವಿಗೆ ಸಿಎಂ ಬಳಿ ನಿಯೋಗ: ಸಂಸದ ಬಿ.ವೈ.ರಾಘವೇಂದ್ರ