ನಾಮಫಲಕದಲ್ಲಿ ಕನ್ನಡ ಅನುಷ್ಠಾನ : ಹೊಟೇಲ್ ಮಾಲೀಕರ ಹೊಸ ಡಿಮ್ಯಾಂಡ್
ನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯ ಉದ್ದಿಮೆಗಳ ನಾಮಫಲಕಗಳಲ್ಲಿ ಅಗ್ರಸ್ಥಾನದಲ್ಲಿ ಕನ್ನಡ ಭಾಷೆಯನ್ನು ಶೇ. 60ರಷ್ಟು ಕಡ್ಡಾಯವನ್ನು ಹಿಂದಿನಂತೆ ಶೇ. 50ರಷ್ಟನ್ನೇ ಕಡ್ಡಾಯಪಡಿಸಲು ಮರುಪರಿಶೀಲಿಸಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿ ಮನವಿ ಮಾಡಿದೆ.
![Implementation of Kannada in nameplate : New demand of hoteliers snr Implementation of Kannada in nameplate : New demand of hoteliers snr](https://static-gi.asianetnews.com/images/01drk3t42rznm0egggnq8svjw3/bgm-flag-jpg_363x203xt.jpg)
ಮೈಸೂರು : ನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯ ಉದ್ದಿಮೆಗಳ ನಾಮಫಲಕಗಳಲ್ಲಿ ಅಗ್ರಸ್ಥಾನದಲ್ಲಿ ಕನ್ನಡ ಭಾಷೆಯನ್ನು ಶೇ. 60ರಷ್ಟು ಕಡ್ಡಾಯವನ್ನು ಹಿಂದಿನಂತೆ ಶೇ. 50ರಷ್ಟನ್ನೇ ಕಡ್ಡಾಯಪಡಿಸಲು ಮರುಪರಿಶೀಲಿಸಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿ ಮನವಿ ಮಾಡಿದೆ.
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನ್ನಡೀಕರಣಕ್ಕಾಗಿ ಹಲವು ಅಂಶಗಳನ್ನು ಅನುಷ್ಠಾನಗೊಳಿಸಬೇಕು ಎಂದು ಹಲವು ಬಾರಿ ಸೂಚಿಸಿರುವ ನಿಟ್ಟಿನಲ್ಲಿ ನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಂತೆ ಎಲ್ಲಾ ವಾಣಿಜ್ಯ ಮಳಿಗೆಗಳು, ಅಂಗಡಿಗಳು, ಹೋಟೆಲ್‌ಗಳು, ಕಂಪನಿ ಸಂಸ್ಥೆಗಳು ಹಾಗೂ ಇತರೆ ವ್ಯಾಪಾರಿಗಳು, ಉದ್ದಿಮೆಗಳು, ತಮ್ಮ ತಮ್ಮ ಶಾಖೆಯ ಮುಂದೆ ವ್ಯಾಪಾರ ಕೇಂದ್ರದ ಮುಂದೆ ನಾಮಫಲಕಗಳಲ್ಲಿ ಶೇ. 50ರಷ್ಟು ಕನ್ನಡ ಕಡ್ಡಾಯಗೊಳಿಸಿ ಆದೇಶಿಸಲಾಗಿತ್ತು.
ಈ ಹಿಂದಿನ ಆದೇಶವನ್ನು ಈಗ ಮಾರ್ಪಡಿಸಿ ಶೇ. 60ರಷ್ಟು ಅಗ್ರಸ್ಥಾನವನ್ನು ಕನ್ನಡಕ್ಕೆ ಮೀಸಲಿಟ್ಟು ನಾಮಫಲಕಗಳು ಇನ್ನು ಮುಂದೆ ಶೇ. 60ರಷ್ಟು ಇರಬೇಕು ಎಂದು ಜಾರಿಗೆ ತರಲಾಗಿದೆ. ಈ ಹಿಂದಿನ ಶೇ. 50ರಷ್ಟನ್ನೇ ಸರಿಯಾಗಿ ಪಾಲಿಸಿಲ್ಲ. ಮುಂದಿನ ವರ್ಷಗಳಲ್ಲಿ ಶೇ. 70 ರಿಂದ 80ರಷ್ಟು ಆದರೂ ಆಶ್ಚರ್ಯವಿಲ್ಲ. ಆದ್ದರಿಂದ ಪದೇ ಪದೇ ಈ ಆದೇಶವನ್ನು ಮಾರ್ಪಡಿಸುವ ಬದಲು ಈ ಹಿಂದೆ ಇದ್ದಂತೆ ಶೇ. 50ರಷ್ಟೇ ಕನ್ನಡ ನಾಮಫಲಕದ ಆದೇಶವನ್ನು ಮತ್ತೆ ಪರಿಶೀಲಿಸಿ ಹೇಳೆಯ ಆದೇಶವನ್ನು ಮುಂದುವರೆಸಬೇಕು. ಪ್ರವಾಸಿ ಸ್ಥಳಗಳಲ್ಲಿ ಶೇ. 50ರಷ್ಟಕ್ಕೂ ಇದ್ದ್ಲಿ ಹೊರ ರಾಜ್ಯದ ಪ್ರವಾಸಿಗರಿಗೆ ಅರ್ಥವಾಗುವುದು ಕಷ್ಟ. ಆದ್ದರಿಂದ ಮತ್ತೊಮ್ಮೆ ಪರಿಶೀಲಿಸಿ ಶೇ. 50ರಷ್ಟು ಮಾತ್ರ ಸೀಮಿತಗೊಳಿಸಿ ಆದೇಶಿಸಬೇಕಾಗಿ ಅವರು ಕೋರಿದ್ದಾರೆ.
ನಾವು ವ್ಯಾಪಾರಿಗಳು, ತೆರಿಗೆ ಪಾವತಿಸುತ್ತೇವೆ. ಯಾವುದೇ ಕಾರಣಕ್ಕೂ ಕನ್ನಡ ವಿರೋಧಿಗಳಲ್ಲ. ನಮ್ಮ ಭಾಷೆ, ಜಲ, ನೆಲ ಮತ್ತು ಗಡಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲವೇ ಇಲ್ಲ. ಕನ್ನಡ ನಾಮಫಲಕ ಅಳವಡಿಕೆಗೆ ಸಂಪೂರ್ಣ ಸಹಕಾರ ಇದ್ದೇ ಇರುತ್ತದೆ ಎಂದು ಅವರು ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ತಿಳಿಸಿದ್ದಾರೆ.