Asianet Suvarna News Asianet Suvarna News

Karnataka Rains; ಮತ್ತೆ ಮಳೆಯಾಗಲಿದೆ...  ಬೆಂಗಳೂರು ಉತ್ತರ ಬಲು ಎಚ್ಚರ!

* ಬೆಂಗಳೂರಿನಲ್ಲಿ ದೀಪಾವಳಿ ಮಳೆ ಆರ್ಭಟ
* ಇನ್ನು ಎರಡು ದಿನ ಮಳೆಯಾಗಲಿದೆ ಎಚ್ಚರ
* ಬೆಂಗಳೂರು ದಕ್ಷಿಣಕ್ಕಿಂತ ಉತ್ತರ ಭಾಗದಲ್ಲಿ ಮಳೆ ಹೆಚ್ಚು
*  ರಾಜ್ಯದ ಹಲವು ಭಾಗದಲ್ಲಿಯೂ ಮಳೆ ಮುಂದುವರಿಯಲಿದೆ

IMD puts Bengaluru on yellow alert several parts of Karnataka to witness heavy rains mah
Author
Bengaluru, First Published Nov 5, 2021, 6:33 PM IST

ಬೆಂಗಳೂರು(ನ.05)   ನವೆಂಬರ್ ತಿಂಗಳಿನಲ್ಲಿಯೂ ಮಳೆ ಮುಂದುವರಿಯಲಿದೆ. ಈಗಾಗಲೆ ಹವಾಮಾನ ಇಲಾಖೆ(Meteorological Department) ಅಲರ್ಟ್ ನೀಡಿದೆ. ಬೆಂಗಳೂರು (Bengaluru) ನಾಗರಿಕರಿಗೆ ಎಚ್ಚರಿಕೆ ಒಂದು ಇದೆ.

ಬಂಗಾಳಕೊಲ್ಲಿಯ ಮಧ್ಯಭಾಗದಲ್ಲಿ ವಾಯುಭಾರ ಕುಸಿತದ ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.  ಬೆಂಗಳೂರು ಸೇರಿ ಹಲವು ಭಾಗಗಳು ಮಳೆ ಪಡೆದುಕೊಳ್ಳುತ್ತಿವೆ. ಕರಾವಳಿ ಪ್ರದೇಶ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ  ಇನ್ನು ಎರಡು ದಿನ ಮಳೆ ಮುಂದುವರಿಯಲಿದೆ. 

ಬೆಂಗಳೂರಿಗೆ ಅಲರ್ಟ್;  ಗುರುವಾರ ರಾತ್ರಿ ಬೆಂಗಳೂರಿನಲ್ಲಿ (Bengalurua) ಧಾರಾಕಾರ ಮಳೆ ಸುರಿದ್ದಿದ್ದು ರಸ್ತೆಗಳೆಲ್ಲ ಕೆರೆಗಳಾಗಿದ್ದವು. ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆ ಹೈರಾಣ ಮಾಡಿತ್ತು.

ಮೆಜೆಸ್ಟಿಕ್, ಶಾಂತಿನಗರ, ವಿಧಾನಸೌಧ, ರಾಜಾಜಿ ನಗರ, ಮತ್ತಿಕೆರೆ, ಯಶವಂತಪುರ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದ್ದರೆ ಅತ್ತ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ,  ಬೆಳ್ತಂಗಡಿ, ಪುತ್ತೂರು ತಾಲೂಕಿನ ಹಲವೆಡೆ ಎಡೆಬಿಡದೇ ಸುರಿದಿದೆ. 

ಕರ್ನಾಟಕದ ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್

ಬೆಂಗಳೂರಲ್ಲಿನ ಭಾರೀ ಮಳೆ!  ಬೆಂಗಳೂರು ಉತ್ತರ ಭಾಗ ದಕ್ಷಿಣ ಭಾಗಕ್ಕಿಂತ ಹೆಚ್ಚು ಮಳೆ ಪಡೆದುಕೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದ್ದು ಸೂಚನೆಯನ್ನು ಕೊಟ್ಟಿದೆ. ಇನ್ನು ಎರಡು ದಿನ ಮೋಡ ಕವಿದ ವಾತಾವರಣೆ ಮುಂದುವರಿಯಲಿದ್ದು ಸಂಜೆ ಸಮಯದಲ್ಲಿ ಧಾರಾಕಾರ ಮಳೆ ಕಾಣಿಸಿಕೊಳ್ಳಬಹುದು. 

ಹವಾಮಾನದಲ್ಲಿ(Weather) ಉಂಟಾದ ವೈಪರೀತ್ಯದ ಪರಿಣಾಮ ರಾಜಧಾನಿ ಸೇರಿದಂತೆ ಬೆಂಗಳೂರಿನಲ್ಲಿ(Bengaluru) ಸೇರಿ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಲಿದ್ದು , ‘ಯೆಲ್ಲೋ ಅಲರ್ಟ್‌’(Yellow Alert) ನೀಡಿದ್ದು ನಿಜವಾಗಿದೆ.

ತಮಿಳುನಾಡಿನ(Tamil Nadu) ಕರಾವಳಿಯಲ್ಲಿ(Coastal) ಸಮುದ್ರ(Sea) ಮೇಲ್ಮೈ ಸುಳಿಗಾಳಿಯು ತೀವ್ರಗೊಂಡಿದೆ. ಇದರಿಂದ ಬೆಂಗಳೂರಿನಲ್ಲಿ ಇನ್ನು ಎರಡು ದಿನ ಮಳೆ ಸಾಮಾನ್ಯ. ಚಿಕ್ಕಬಳ್ಳಾಪುರ ದಿಂದ ಚಿಕ್ಕಮಗಳೂರಿನ ವರೆಗೆ ಮಳೆಯಾಗಿದೆ.  ಕಾಫಿ ಮತ್ತು ಅಡಿಕೆ ಬೆಳೆಗೆ ಮಾರಕ ಎಂದಾದರೂ ಏನು ಮಾಡಲು ಸಾಧ್ಯವಿಲ್ಲ. ದೀಪಾವಳೀ ಹಬ್ಬದ ದಿನಗಳು ಮಳೆಯಲ್ಲೇ ಕಳೆದು ಹೋಗುತ್ತಿವೆ.

ಪಟಾಕಿ ಎಫೆಕ್ಟ್; ಸುಪ್ರೀಂ ಕೋರ್ಟ್ ಮತ್ತು ಸರ್ಕಾರ ಹಸಿರು ಪಟಾಕಿಗೆ ಮಾತ್ರ ಅವಕಾಶ ಎಂದು ಹೇಳಿದ್ದರೂ ಬೆಂಗಳೂರಿನಲ್ಲಿ ನಿರಂತರವಾಗಿ ಪಟಾಕಿ ಸಿಡಿತದ ಶಬ್ದಗಳು  ಕೇಳುತ್ತಲೇ ಇವೆ. ರಸ್ತೆಯಲ್ಲಿ  ಪಟಾಕಿ ಸಿಡಿತದ ಚೂರುಗಳು ಬಿದ್ದೇ ಇವೆ. 

 

pic.twitter.com/hJSNdb5VLD

Follow Us:
Download App:
  • android
  • ios