Asianet Suvarna News Asianet Suvarna News

2 ದಿನ ರಾಜ್ಯದಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

  • ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಯಲ್ಲಿ ನ.4 ಮತ್ತು 5ರಂದು ಭಾರಿ ಮಳೆ
  • ಕಳೆದೆರಡು ವಾರಗಳಿಂದ ಮಳೆ ಕಡಿಮೆಯಾಗಿದ್ದ ಉತ್ತರ ಒಳನಾಡಿನಲ್ಲಿ ನ.5ಕ್ಕೆ ಭಾರಿ ಮಳೆಯಾಗುವ ಮುನ್ಸೂಚನೆ
weather Department alert 2 Days heavy rain in karnataka snr
Author
Bengaluru, First Published Nov 3, 2021, 7:58 AM IST

 ಬೆಂಗಳೂರು (ನ.03):  ಬೆಂಗಳೂರು (Bengaluru) ನಗರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಯಲ್ಲಿ (Coastal Districts) ನ.4 ಮತ್ತು 5ರಂದು ಭಾರಿ ಮಳೆಯಾಗಲಿದೆ. ಅದೇ ರೀತಿ ಕಳೆದೆರಡು ವಾರಗಳಿಂದ ಮಳೆ (Rain) ಕಡಿಮೆಯಾಗಿದ್ದ ಉತ್ತರ ಒಳನಾಡಿನಲ್ಲಿ ನ.5ಕ್ಕೆ ಭಾರಿ ಮಳೆಯಾಗುವ (Heavy Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather Department) ನೀಡಿದೆ.

ತಮಿಳುನಾಡಿನ (Tamilnadu) ಕರಾವಳಿಯಲ್ಲಿ (Coastal) ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದ್ದು, ಇದು ಪ್ರಬಲಗೊಳ್ಳುವ ಸೂಚನೆ ಇರುವುದು ಮತ್ತು ಟ್ರಫ್‌ (ವಾಯುಭಾರ ಕುಸಿತ ಮುಂದುವರಿದ ಭಾಗ)ವೊಂದು ನಿರ್ಮಾಣವಾಗಿರುವುದು ರಾಜ್ಯದಾದ್ಯಂತ (Karnataka) ಮಳೆ ಸುರಿಯಲು ಕಾರಣವಾಗಲಿದೆ.

ಉತ್ತರಾಖಂಡ ಮೇಘಸ್ಫೋಟ್ ಆರ್ಭಟ ಹೇಗಿತ್ತು?

ಬುಧವಾರ ರಾಜ್ಯದಲ್ಲಿ ಸಾಧಾರಣ ಮಳೆಯಾಗಬಹುದು. ಆದರೆ ಗುರುವಾರ ದಕ್ಷಿಣ ಒಳನಾಡಿನ ಬೆಂಗಳೂರು ನಗರ (Bengaluru City) ಮತ್ತು ಗ್ರಾಮಾಂತರ (Rural), ಕೋಲಾರ (kolar), ಚಿಕ್ಕಬಳ್ಳಾಪುರ (Chikkaballapura), ತುಮಕೂರು (Tumakuru), ಚಿಕ್ಕಬಳ್ಳಾಪುರ (chikkaballapura), ಹಾಸನ (Hassan), ಚಾಮರಾಜನಗರ (chamarajanagar), ಮೈಸೂರು (Mysuru), ಕೊಡಗು (Kodagu), ಶಿವಮೊಗ್ಗ (Shivamogga) ಮತ್ತು ಕರಾವಳಿಯ ದಕ್ಷಿಣ ಕನ್ನಡ (Dakshina kannada), ಉಡುಪಿ (Udupi) ಮತ್ತು ಉತ್ತರ ಕನ್ನಡದಲ್ಲಿ (Uttara Kannada) ಭಾರಿ ಮಳೆಯಾಗಲಿದೆ.

ಆದರೆ ಶುಕ್ರವಾರ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಮಳೆ  (Rain)ಸುರಿಯಲಿದೆ. ಬೀದರ್‌ (Bidar), ಬಾಗಲಕೋಟೆ (Bagalakote), ಹಾವೇರಿ (Haveri) ಜಿಲ್ಲೆಯನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ.

ಶನಿವಾರ ಹಾವೇರಿ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಜಿಲ್ಲೆಯಲ್ಲಿ ಮಳೆಯಬ್ಬರ ಕಡಿಮೆಯಾಗಲಿದೆ.

ನ.03ರವರೆಗೆ ಎಚ್ಚರಿಕೆ ನೀಡಲಾಗಿತ್ತು

 

ರಾಜ್ಯದ ಕರಾವಳಿ (Coastal) ಮತ್ತು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನ.3 ರವರೆಗೆ ಸಿಡಿಲು ಮಿಂಚು ಗಾಳಿ ಸಹಿತ ಭಾರಿ ಮಳೆಯ (Heavy Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (weather Department)  ಹೇಳಿತ್ತು

ಬಂಗಾಳ ಕೊಲ್ಲಿಯಲ್ಲಿ  (Bea of Bengal) ವಾಯುಬಾರ ಕುಸಿತ ಮತ್ತು ಹಿಂಗಾರು ಮಾರುತಗಳಿಂದಾಗಿ ಮಳೆಯ ಅಬ್ಬರ ಹೆಚ್ಚಾಗಲಿದೆ. ನವೆಂಬರ್ 1 ರಂದು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ (shivamogga) ಚಿಕ್ಕಮಗಳೂರು (Chikkamagaluru) ಹಾಸನ (Hassan) ಕೊಡಗು (kodagu) ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ (Yellow Alert) ನೀಡಲಾಗಿತ್ತು.

ಚಿಕ್ಕಬಳ್ಳಾಪುರದಲ್ಲಿ ಪುಟಿದೇಳುತ್ತಿದೆ ಅಂರ್ತಜಲ ಮಟ್ಟ

ನ.2 ರಂದು ಈ ಜಿಲ್ಲೆಗಳ ಜೊತೆಗೆ ಚಾಮರಾಜನಗರ, ಮೈಸೂರು (Mysuru) ಮತ್ತು ಕರಾವಳಿಯ ಉತ್ತರ ಕನ್ನಡ, ಉಡುಪಿ (Udupi) ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿತ್ತು.

ಯೆಲ್ಲೋ ಅಲರ್ಟ್ ನೀಡಲಾಗಿತ್ತು

ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಅಕ್ಟೋಬರ್‌ 29 ಮತ್ತು 30ರಂದು ಹಿಂಗಾರು ಮಾರುತಗಳು ಪ್ರಬಲವಾಗಲಿದ್ದು, ಗುಡುಗು ಸಹಿತ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಅ.29ಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ದಾವಣಗೆರೆ, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯಲ್ಲಿ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿತ್ತು.

 ಅ.30ಕ್ಕೆ ಈ ಜಿಲ್ಲೆಗಳ ಜೊತೆಗೆ ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೂ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಅ.27 ಮತ್ತು ಅ.28ರಂದು ಮಳೆಯ ಅಬ್ಬರ ಇರುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿತ್ತು.

Follow Us:
Download App:
  • android
  • ios