Asianet Suvarna News Asianet Suvarna News

Karnataka Rains; ದೀಪಾವಳಿಗೆ ಮಳೆ ಸಿಂಚನ.. ಪಟಾಕಿ ಸಿಡಿಯದಿರಬಹುದು ಆದರೆ ದೀಪ ಬೆಳಗುತ್ತಿರುತ್ತದೆ!

* ಬೆಂಗಳೂರಿನಲ್ಲಿ ದೀಪಾವಳಿ ಮಳೆ ಆರ್ಭಟ
* ಸಂಜೆ ಸುರಿದ ಮಳೆಗೆ ಹಬ್ಬದ ಸಂಭ್ರಮಕ್ಕೆ ಏನು ಕೊರತೆ ಮಾಡಿಲ್ಲ
* ಬನಶಂಕರಿ, ಮಲ್ಲೇಶ್ವರ, ಬಸವನಗುಡಿ ಎಲ್ಲ ಕಡೆ ವರುಣನ ಅಬ್ಬರ
* ಇನ್ನು ಎರಡು ದಿನ ಮಳೆಯಾಗಲಿದೆ ಎಚ್ಚರ

IMD Alert Rains pound across karnataka and Bengaluru Deepavali mah
Author
Bengaluru, First Published Nov 4, 2021, 10:00 PM IST
  • Facebook
  • Twitter
  • Whatsapp

ಬೆಂಗಳೂರು(ನ. 04)  ಹವಾಮಾನ ಇಲಾಖೆ (Meteorological Department) ಹೇಳಿತ್ತು.. ಅಂತೆಯೇ ಮಳೆಯೂ (Rain) ಸುರಿದಿದೆ. ಈ ಮಳೆ ಪಟಾಕಿ (Firecrackers)ಸಿಡಿತಕ್ಕೆ ತಡೆ ಹಾಕಿತು ಆದರೆ ಹಬ್ಬದ ಸಂಭ್ರಮಕ್ಕೆ ಅಲ್ಲ. ಬೆಳಕಿನ ಹಬ್ಬಕ್ಕೆ ಮಳೆಯ ಸಿಂಚನ.  ನೆನಪಿರಲಿ ಸುಪ್ರೀಂ ಕೋರ್ಟ್ ಹೇಳಿದಂತೆ (Supreme Court) ಹಸಿರು ಪಟಾಕಿಗೆ ಮಾತ್ರ ಅವಕಾಶ!

ದೀಪಾವಳಿ (Deepavali) ಸಂಭ್ರಮದಲ್ಲಿ ಪಟಾಕಿ ಸಿಡಿಸೋಣ ಅಂತ ಸಂಜೆ ಹೊರಗೆ ಬಂದರೆ ಧಾರಾಕಾರ ಮಳೆ.  ಅಷ್ಟಕ್ಕೂ ಪಟಾಕಿಯನ್ನೇ ಸಿಡಿಸಬೇಕು ಅಂತೇನೂ ಇಲ್ಲವಲ್ಲ. ದೀಪಗಳ ಬೆಳಕು  ಪ್ರಜ್ವಲಿಸಬಹುದಲ್ಲ. ಬುಧವಾರದಿಂದಲೇ ಸಿಡಿಸಿದ ಪಟಾಕಿಯ ಚೂರುಗಳು ರಾಜಕಾಲುವೆಯಲ್ಲಿ ತೇಲಿ ಹೋದವು.

ಸಂಜೆ ಏಳು ಗಂಟೆ ಸುಮಾರಿಗೆ ಬೆಂಗಳೂರನ್ನು ಆವರಸಿದ ಮಳೆ ತೊಯ್ದು ತೊಪ್ಪೆಯಾಗಿಸಿತು.  ಕರೆಂಟ್ ಕೈ ಕೊಟ್ಟರೂ ದೀಪಾವಳಿಯ ಬೆಳಕಿನಲ್ಲಿ ನಗರವನ್ನು ನೋಡಬಹುದಿತ್ತು. ಸಂಭ್ರಮದಲ್ಲಿದ್ದವರೂ  ಅಯ್ಯೋ ಮಳೆ.. ಮುಗಿಯುವುದೇ ಅಲ್ಲ.. ಎಂದುಕೊಂಡ್ರೂ ಸಂಜೆಯ ಹಬ್ಬದೂಟದ ತಯಾರಿಯಲ್ಲಿ ಬ್ಯುಸಿಯಾಗಿದ್ದರು.

ಎಲ್ಲರಿಗೂ ರಜಾ ದಿನ ಅಂತೇನೂ ಇಲ್ಲ.  ಕೆಲಸದಲ್ಲಿ ತೊಡಗಿಕೊಂಡವರು ಇದ್ದರು. ಮೆಡಿಕಲ್ ಶಾಪ್ ಗಳು.. ತರಕಾರಿ, ಹಣ್ಣು-ಹಂಪಲು ಎಲ್ಲವೂ  ಇದ್ದವು.  ತಳ್ಳು ಗಾಡಿಯಲ್ಲಿ ದೀಪಗಳನ್ನು ಇಟ್ಟುಕೊಂಡು ವ್ಯಾಪಾರಕ್ಕಾಗಿ ಜನರನ್ನು ಎದುರು ನೋಡುತ್ತಿದ್ದವನಿಗೆ ಮಾತ್ರ ಮಳೆ ಆಘಾತ ನೀಡಿತ್ತು.

ಚಿಕ್ಕಬಳ್ಳಾಪುರದಲ್ಲಿ ಪುಟಿದೇಳುತ್ತಿದೆ ಅಂತರ್ಜಲ

ಸಂಜೆ ಒಂದು ಚುರು ಮುರಿ ತಿಂದು ಹಬ್ಬದ ಸಾಮಾನು ಖರೀದಿ ಮಾಡಿಕೊಂಡು ಬರೋಣ ಎಂಬ ಟೈಮ್ ಟೇಬಲ್ ಹಾಕಿಕೊಂಡವರು ಮನೆಯಲ್ಲೇ ಕೂತು ಮಾಡಿನಿಂದ ಬೀಳುವ ಹನಿಗಳನ್ನು ನೋಡಬೇಕಾಯಿತು. ಟ್ರಾಫಿಕ್ ಜಾಮ್, ಮರದ ಟೊಂಗೆ ಮುರಿದು  ಬೀಳುವುದು.. ಚರಂಡಿ ನೀರು ರಸ್ತೆಗೆ..  ರಸ್ತೆ ಗುಂಡಿಯಲ್ಲಿ ವಾಹನ ಸವಾರರ ಹೈರಾಣ ಇದೆಲ್ಲ ಮಾಮೂಲಿ ದೃಶ್ಯಗಳು.
 
ಬೆಂಗಳೂರಿನ ನಗರಗಳ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ.  ಅದು ಬನಂಕರಿ ಇರಬಹುದು..ಮಲ್ಲೇಶ್ವರ ಇರಬಹುದು.. ಬಸವನಗುಡಿ ಇರಬಹುದು. ಗೂಗಲ್ ಮ್ಯಾಪ್ ನೋಡಿದರೆ ಎಲ್ಲೆಲ್ಲೂ ಕೆಂಪು.. ಸಂಜೆಯ ಟ್ರಾಫಿಕ್ ಜೋರಾಗಿಯೇ ಇದೆ. ಅನಿವಾರ್ಯ ಎಂದಾದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ.. ಇಲ್ಲವಾದರೆ ಹಬ್ಬದ ಸಂಭ್ರಮದಲ್ಲಿ ಮೊಬೈಲ್ ಬಿಟ್ಟು ಮನೆಯವರೊಂದಿಗೆ ಹರಟೆ ಕೊಚ್ಚಿ.

ಈಬಾರಿ ಹಿಂಗಾರು ಮತ್ತು ಮುಂಗಾರು ಸರಿಯಾಗಿಯೇ ಆರ್ಭಟಿಸಿದೆ.  ಉತ್ತರ ಕರ್ನಾಟಕ ಎರಡು ಸಾರಿ ಭಾರೀ ಪ್ರವಾಹಕ್ಕೆ ಒಳಗಾಗಿತ್ತು. ಮಹಾರಾಷ್ಟ್ರದ ಮಳೆ ಉತ್ತರ ಕರ್ನಾಟಕವನ್ನು ಮುಳುಗಿಸಿತ್ತು.  ಜೂನ್ ನಿಂದ ಪ್ರತಿ ತಿಂಗಳು ಮಳೆ ಆಗುತ್ತಲೇ ಇದೆ. 

ಹಸಿರು ಪಟಾಕಿಗಳನ್ನೇ ಬಳಸಿ.. ಯಾಕಂದ್ರೆ!

ಹವಾಮಾನದಲ್ಲಿ(Weather) ಉಂಟಾದ ವೈಪರೀತ್ಯದ ಪರಿಣಾಮ ರಾಜಧಾನಿ ಸೇರಿದಂತೆ ಬೆಂಗಳೂರಿನಲ್ಲಿ(Bengaluru) ಸೇರಿ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಲಿದ್ದು , ‘ಯೆಲ್ಲೋ ಅಲರ್ಟ್‌’(Yellow Alert) ನೀಡಿದ್ದು ನಿಜವಾಗಿದೆ.

ತಮಿಳುನಾಡಿನ(Tamil Nadu) ಕರಾವಳಿಯಲ್ಲಿ(Coastal) ಸಮುದ್ರ(Sea) ಮೇಲ್ಮೈ ಸುಳಿಗಾಳಿಯು ತೀವ್ರಗೊಂಡಿದೆ. ಇದರಿಂದ ಬೆಂಗಳೂರಿನಲ್ಲಿ ಇನ್ನು ಎರಡು ದಿನ ಮಳೆ ಸಾಮಾನ್ಯ.

ನವೆಂಬರ್ ಬಂದರೂ ಈ ಸಾರಿ ಮಳೆ ಮಾತ್ರ ನಿಂತಿಲ್ಲ. ಮುಂಗಾರಿಗಿಂತ ಹಿಂಗಾರು ಮಾರುತಗಳೆ ಒಂದು ಕೈ ಬಲ ಎಂದು ಹೇಳಿಕೊಂಡಿವೆ.  ಚಿಕ್ಕಬಳ್ಳಾಪುರ ದಿಂದ ಚಿಕ್ಕಮಗಳೂರಿನ ವರೆಗೆ ಮಳೆಯಾಗಿದೆ.   ಕಾಫಿ ಮತ್ತು ಅಡಿಕೆ ಬೆಳೆಗೆ ಮಾರಕ ಎಂದಾದರೂ ಏನು ಮಾಡಲು ಸಾಧ್ಯವಿಲ್ಲ.

ಕೆಲವು ದಿನಗಳಿಂದ ಕಂಡು ಬರುತ್ತಿರುವ ಮೋಡ ಮುಸುಕಿದ ವಾತಾವರಣವೇ ನ.6ರ ವರೆಗೆ ಮುಂದುವರಿಯಲಿದೆ. ಶೃಂಗೇರಿ ತಾಲೂಕಿನಾದ್ಯಂತ ಬುಧವಾರ ಸಂಜೆ ಗುಡಿಗು, ಸಿಡಿಲುಸಹಿತ ಭಾರಿ ಮಳೆ ಆರ್ಭಟಿಸಿದೆ.  ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆಯ ವೇಳೆ ಗುಡುಗು, ಸಿಡಿಲಿನ ಆರ್ಭಟ ಇತ್ತು. 

Follow Us:
Download App:
  • android
  • ios