Asianet Suvarna News Asianet Suvarna News

ನಾನು ಕೇವಲ ಟೆಂಪರರಿ ಮಂತ್ರಿ! ನನಗೆ ಅಧಿಕಾರ ಕೊಟ್ಟಿಲ್ಲ: ಮುನಿರತ್ನ

  • ಹೆಸರಿಗೆ ಮಾತ್ರ ಉಸ್ತುವಾರಿ ಸಚಿವರು ಆದರೆ ಆಡಳಿತ ಮತ್ತು ಅಧಿಕಾರಿಗಳ ಜವಾಬ್ದಾರಿ ಇವರಿಗಿಲ್ಲ 
  • ಇದು ಯಾರೋ ಮಾಡಿದ ಆರೋಪವಲ್ಲ. ಸ್ವತಹ ಸಚಿವ ಮುನಿರತ್ನ ಅವರೇ ಹೇಳಿಕೊಂಡಿರುವ ಅಸಹಾಯಕತೆ
im only the temporary in charge minister Of kolar says  Munirathna snr
Author
Bengaluru, First Published Oct 11, 2021, 1:57 PM IST

ವರದಿ :  ಸತ್ಯರಾಜ್‌ ಜೆ.

 ಕೋಲಾರ (ಅ.11):  ಇವರು ಹೆಸರಿಗೆ ಮಾತ್ರ ಉಸ್ತುವಾರಿ ಸಚಿವರು (In Charge minister) ಆದರೆ ಆಡಳಿತ ಮತ್ತು ಅಧಿಕಾರಿಗಳ ಜವಾಬ್ದಾರಿ ಇವರಿಗಿಲ್ಲ ಇವರು ಕೋವಿಡ್‌ (Covid) ಟೆಂಪರರಿ ಉಸ್ತುವಾರಿ ಮಂತ್ರಿ!

ಇದು ಯಾರೋ ಮಾಡಿದ ಆರೋಪವಲ್ಲ. ಸ್ವತಃ ಸಚಿವ ಮುನಿರತ್ನ (Muniratna) ಅವರೇ ಹೇಳಿಕೊಂಡಿರುವ ಅಸಹಾಯಕತೆ. ಕೋಲಾರ (Kolar) ಉಸ್ತುವಾರಿ ಸಚಿವರಾದರೂ ಇವರಿಗೆ ಕೇವಲ ಕೋವಿಡ್‌ ನಿರ್ವವಣೆಯ ಹೊಣೆಯನ್ನು ಮಾತ್ರ ನೀಡಲಾಗಿದೆಯೆಂತೆ. ಹಾಗಾಗಿ ಜಿಲ್ಲೆಯ ಇತರ ಯಾವ ವಿಷಯಗಳಿಗೂ ತಲೆಕೆಡಿಸಿಕೊಳ್ಳುತ್ತಿಲ್ಲ.

ಬೆಂಗಳೂರು ಉಸ್ತುವಾರಿಗೆ ಕಿತ್ತಾಟ: ಸೋಮಣ್ಣ ಪರ ಮುನಿರತ್ನ ಬ್ಯಾಟಿಂಗ್

ನಾನು ಕೋವಿಡ್‌ ಉಸ್ತುವಾರಿ ಮಂತ್ರಿ?

ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ಪತ್ರಕರ್ತರು ಕೇಳಿದರೆ ನನಗೂ ಜಿಲ್ಲೆಯ ಆಡಳಿತಕ್ಕೂ ಯಾವುದೇ ಸಂಬಂಧವಿಲ್ಲ, ನಾನು ಕೇವಲ ಕೋವಿಡ್‌ ನಿರ್ವಹಣೆ ಉಸ್ತುವಾರಿ ಮಂತ್ರಿ ಮಾತ್ರ, ನನಗೆ ಆಡಳಿತದ ಉಸ್ತುವಾರಿ ನೀಡಿಲ್ಲ ಎಂದು ಸ್ವತಃ ಸಚಿವ ಮುನಿರತ್ನ ಅವರೇ ಹೇಳುತ್ತಾರೆ.

ಆಡಳಿತ ವಿಷಯಕ್ಕೆ ಕೈಹಾಕುವುದಿಲ್ಲ

ನನಗೆ ಅಧಿಕಾರಿಗಳನ್ನು ಮಾಹಿತಿ ಕೇಳುವ, ಪ್ರಶ್ನಿಸುವ ಮತ್ತು ಆಡಳಿತದ ಸುಧಾರಣೆ ಮಾಡುವ ಯಾವುದೇ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಕೊಟ್ಟಿಲ್ಲ. ಕೋವಿಡ್‌ ಮುಗಿಯುವವರೆಗೂ ಅದರ ಜವಾಬ್ದಾರಿ ವಹಿಸಿ ಎಂದು ಹೇಳಿದ್ದಾರೆ. ಅದಷ್ಟನ್ನೇ ನಾನು ಮಾಡುತ್ತಿದ್ದೇನೆ ಬೇರೆ ಯಾವುದಕ್ಕೂ ಕೈ ಹಾಕುತ್ತಿಲ್ಲ ಎಂದು ಸಚಿವರು ಹೇಳುತ್ತಾರೆ.

ಸಚಿವ ಮುನಿರತ್ನ ಅವರ ಈ ಧೋರಣೆ ಜಿಲ್ಲೆಯ ಆಡಳಿತಯಂತ್ರ ಕುಸಿಯುವಂತೆ ಮಾಡಿದೆ. ಜಿಲ್ಲೆಯ ಆಡಳಿತ ಹದಗೆಟ್ಟಿದೆ. ಇಲ್ಲಿ ಅಧಿಕಾರಿಗಳನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಯಿಂದಾಗಿ ಅಧಿಕಾರಿಗಳತ್ತ ಚಾಟಿ ಬೀಸುವ ಸರ್ಕಾರದ ಪ್ರತಿನಿಧಿ ಇಲ್ಲದಂತಾಗಿದೆ. ಇದರಿಂದಾಗಿ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗಳಲ್ಲಿ ಪರದಾಡುವಂತಾಗಿದೆ. ಕಚೇರಿಗಳಲ್ಲಿ ಅಧಿಕಾರಿಗಳು ಕಾಣುವುದಿಲ್ಲ, ಕುರ್ಚಿಗಳಲ್ಲಿ ಯಾವಾಗಲೂ ಖಾಲಿ ಇರುತ್ತವೆ ಕಚೇರಿ ಜವಾನರನ್ನು ಕೇಳಿದರೆ ಸಾಹೇಬರು ಹೊರಗೆ ಹೋಗಿದ್ದಾರೆ ಎಂಬ ಸಿದ್ಧ ಉತ್ತರವನ್ನು ನೀಡುತ್ತಾರೆ. ಸೋಮವಾರ ಮತ್ತು ಶನಿವಾರ ಅಧಿಕಾರಿಗಳಿಲ್ಲದೆ ಕಚೇರಿಗಳಲ್ಲಿ ಖಾಲಿ ಖಾಲಿ.

ಬೆಂಗಳೂರಲ್ಲೇ ಅಧಿಕಾರಿಗಳ ವಾಸ

ಬಹುತೇಕ ಅಧಿಕಾರಿಗಳು ಬೆಂಗಳೂರಿನಲ್ಲಿ (Bengaluru) ವಾಸವಾಗಿರುವುದರಿಂದ ಶುಕ್ರವಾರ ಬೆಂಗಳೂರಿಗೆ ಹೋದರೆ ಮತ್ತೆ ಮಂಗಳವಾರ ಕಾಣಿಸುತ್ತಾರೆ. 12 ಗಂಟೆಗೆ ಕಚೇರಿಗೆ ಬಂದು ಕುಳಿತು ಒಂದೆರಡು ಫೈಲುಗಳನ್ನು ನೋಡಿ ಹೊರಟರೆ ಮುಗಿಯಿತು.

ಜಿಲ್ಲೆಯಲ್ಲಿ ಭ್ರಷ್ಟಾಚಾರ (corruption) ತಾಂಡವಾಡುತ್ತಿದೆ. ಅಧಿಕಾರಿಗಳಿಗೆ ಹೇಳುವವರು, ಕೇಳುವವರು ಇಲ್ಲದಂತಾಗಿದ್ದು ಕಚೇರಿಗಳಲ್ಲಿ ಹಣವಿಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ಕಚೇರಿಗಳಲ್ಲಿ ಅಧಿಕಾರಿಗಳನ್ನು ನೇರವಾಗಿ ನೋಡಲು ಸಾಧ್ಯವೇ ಇಲ್ಲ. ಮಧ್ಯವರ್ತಿಗಳ ಮೂಲಕವೇ ಎಲ್ಲ ಕೆಲಸಗಳೂ ನಡೆಯುತ್ತವೆ ಎನ್ನುವುದು ಸಾರ್ವಜನಿಕರ ಆರೋಪ.

ಜನರ ಅಹವಾಲು ಕೇಳುವವರಿಲ್ಲ :  ಆಡಳಿತದ ಅವ್ಯವಸ್ಥೆಗಳ ಮಧ್ಯೆ ಸಾರ್ವಜನಿಕ (Publics) ಅಹವಾಲುಗಳನ್ನು ಕೇಳುವವರೂ ಇಲ್ಲದಂತಾಗಿದೆ, ಜಿಲ್ಲೆಯ ಸಮಸ್ಯೆಗಳು ಮತ್ತು ಜನರ ಸಮಸ್ಯೆಗಳನ್ನು ಕೇಳುವವರಿಲ್ಲದಂತಾಗಿದೆ. ವಿವಿಧ ಇಲಾಖೆಗಳಲ್ಲಿ ನಡೆದಿರುವ ಸರ್ಕಾರದ ಯೋಜನೆಗಳ ಪ್ರಗತಿಯನ್ನು ನೋಡುವವರೂ ಇಲ್ಲದಾಗಿದೆ, ಜಿಲ್ಲೆಯಲ್ಲಿರುವ ಗಂಭೀರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಒದಗಿಸುವವರೂ ಇಲ್ಲದಂತಾಗಿದೆ.

ಜಿಲ್ಲಾ ಉಸ್ತುವಾರ ಹೊಣೆಯನ್ನು ಇದೇ ಜಿಲ್ಲೆಯವರಿಗೆ ನೀಡದೆ ಹೊರಗಿನ ಜಿಲ್ಲೆಯವರಿಗೆ ಕೊಡುವುದು ಮೊದಲಿನಿಂದಲೂ ನಡೆದು ಬಂದಿದೆ. ಆದರೆ ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ಜಿಲ್ಲಾ ಉಸ್ತುವಾರಿಯನ್ನು ಕೇವಲ ಕೋವಿಡ್‌ ನಿರ್ವಹಣೆಗೆ ಸೀಮಿತಗೊಳಿಸಿರುವುದರಿಂದ ಜಿಲ್ಲಾಡಳಿತ ಜಿಡ್ಡುಗಟ್ಟಿದೆ.

Follow Us:
Download App:
  • android
  • ios